ಶುಕ್ರವಾರ, ಜನವರಿ 22, 2021
19 °C

ಜಿನದತ್ತ ದೇಸಾಯಿ, ನಾ.ಮೊಗಸಾಲೆಗೆ ಹಲಸಂಗಿ ಕಾವ್ಯ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ವಿಜಯಪುರ ಹಲಸಂಗಿ ಗೆಳೆಯರ ಪ್ರತಿಷ್ಠಾನದ 2019 ಮತ್ತು 2020ನೇ ಸಾಲಿನ ಸಾಹಿತ್ಯ ಪ್ರಶಸ್ತಿಗೆ ಎಂಟು ಜನ ಹಿರಿಯ ಮತ್ತು ಕಿರಿಯ ಸಾಹಿತಿಗಳು ಆಯ್ಕೆಯಾಗಿದ್ದಾರೆ.

2019ನೇ ಸಾಲಿನ ಕಾವ್ಯ ಪ್ರಶಸ್ತಿಗೆ ಬೆಳಗಾವಿಯ ಜಿನದತ್ತ ದೇಸಾಯಿ, ಸಂಶೋಧನೆಗಾಗಿ ಮೈಸೂರಿನ ಡಾ.ವೈ.ಸಿ. ಭಾನುಮತಿ, ಜಾನಪದ ಸಾಹಿತ್ಯಕ್ಕೆ ಮಂಡ್ಯದ ಡಾ.ರಾಮೇಗೌಡ ಹಾಗೂ ಯುವ ಪ್ರಶಸ್ತಿಗೆ ಕದ್ರಾದ ಅಕ್ಷತಾ ಕೃಷ್ಣಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ.

2020ನೇ ಸಾಲಿನ ಕಾವ್ಯ ಕ್ಷೇತ್ರದ ಪ್ರಶಸ್ತಿಗೆ ಕಾಂತಾವರದ ಡಾ.ನಾ. ಮೊಗಸಾಲೆ, ಸಂಶೋಧನೆಗಾಗಿ ಧಾರವಾಡದ ಡಾ.ಗುರುಲಿಂಗ ಕಾಪಸೆ, ಜಾನಪದ ಸಾಹಿತ್ಯಕ್ಕಾಗಿ ಬಾಗಲಕೋಟೆ ಜಿಲ್ಲೆ ಬೀಳಗಿಯ ಡಾ.ಶ್ರೀರಾಮ ಇಟ್ಟಣ್ಣನವರ ಹಾಗೂ ಯುವ ಪ್ರಶಸ್ತಿಗೆ ಧಾರವಾಡದ ಟಿ.ಎಸ್. ಗೊರವರ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಪ್ರಶಸ್ತಿಯು ಹಿರಿಯ ಸಾಹಿತಿಗಳಿಗೆ ₹ 51 ಸಾವಿರ ಹಾಗೂ ಕಿರಿಯ ಸಾಹಿತಿಗಳಿಗೆ ₹ 25 ಸಾವಿರ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. 

ಡಾ.ಜಿ.ಎಂ.ಹೆಗಡೆ, ಡಾ.ಬಾಳಣ್ಣ ಸೀಗಿಹಳ್ಳಿ ಹಾಗೂ ಡಾ.ಗುರುಪಾದ ಮರಿಗುದ್ದಿ ಅವರನ್ನು ಒಳಗೊಂಡ ಸಾಹಿತ್ಯ ಆಯ್ಕೆ ಸಮಿತಿಯು ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಿದೆ. 

ಪ್ರಶಸ್ತಿ ಪ್ರದಾನ ಸಮಾರಂಭದ ದಿನಾಂಕವನ್ನು ಬಳಿಕ ತಿಳಿಸಲಾಗುವುದು ಎಂದು ಹಲಸಂಗಿ ಗೆಳೆಯರ ಪ್ರತಿಷ್ಠಾನದ ಅಧ್ಯಕ್ಷರೂ ಆದ ವಿಜಯಪುರ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು