ವಿಜಯಪುರ: ‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಳಗಾವಿಯ ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಮಾಡಿಕೊಂಡಾಗ ಕೆಲವು ಕಾಣದ ಕೈಗಳು ಹಿಂಬಾಗಿಲಿನಿಂದ ನನಗೆ ತೊಂದರೆ ಕೊಟ್ಟಿದ್ದಾರೆ. ಅವರು ಯಾರು ಎಂಬುದು ಗೊತ್ತು. ಈಗ ಅವರ ಹೆಸರು ಹೇಳುವುದಿಲ್ಲ. ಈಗ ಅವರು ಅನುಭವಿಸುತ್ತಿದ್ದಾರೆ. ಮುಂದೆಯೂ ಅನುಭವಿಸಲಿದ್ದಾರೆ’ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.

‘ನಾನು ಆರ್ಎಸ್ಎಸ್ನಿಂದ ಬಂದವನು, ನೈತಿಕತೆ ಆಧಾರದ ಮೇಲೆ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಹೀಗಾಗಿ ನನ್ನ ಮೇಲೆ ಆಪಾದನೆ ಬಂದ ತಕ್ಷಣವೇ ರಾಜೀನಾಮೆ ಕೊಟ್ಟುಹೊರಬಂದೆ. ಏನೂ ತಪ್ಪು ಮಾಡದ ಕಾರಣಕ್ಕೆ ನಾನು ದೇವರ ಮೇಲೆ ನಂಬಿಕೆ ಇಟ್ಟು ತನಿಖೆಯನ್ನು ಎದುರಿಸಿ, ನಿರ್ದೋಷಿಯಾಗಿ ಹೊರಬಂದಿದ್ದೇನೆ. ಕರ್ನಾಟಕದ ಜನ ನನ್ನ ನೈತಿಕತೆ ಮೆಚ್ಚಿದ್ದಾರೆ’ ಎಂದರು.

‘ರಾಜಕಾರಣದಲ್ಲಿ ಯಾರು ನನ್ನನ್ನು ಮುಗಿಸಬೇಕು ಎಂದುಕೊಂಡಿದ್ದಾರೋ ಅದು ಇದುವರೆಗೆ ಯಾರಿಗೂ ಸಾಧ್ಯವಾಗಿಲ್ಲ. ನನಗೆ ಅನ್ಯಾಯ ಮಾಡಿದ ಹಾಗೆ, ಬೇರೆಯವರಿಗೆ ಅನ್ಯಾಯ ಆಗಬಾರದು ಎಂಬುದು ನನ್ನ ಕಳಕಳಿಯಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.