ವಿಜಯಪುರ: ಮುದ್ದೇಬಿಹಾಳ ತಾಲ್ಲೂಕಿನ ಡೊಂಕಮಡು ಗ್ರಾಮದಲ್ಲಿ ಶನಿವಾರ ರಾತ್ರಿ ಮಳೆಯಿಂದ ಮನೆ ಕುಸಿದು ಬಾಲಕಿ ಮೃತಪಟ್ಟು, ಇನ್ನೊಬ್ಬ ಬಾಲಕಿ ತೀವ್ವಾಗಿರ ಗಾಯಗೊಂಡಿದ್ದಾಳೆ.

ಮನೆ ಕುಸಿತದಿಂದ ಮೃತಪಟ್ಟ ಬಾಲಕಿಯನ್ನು ಮರೆಮ್ಮ ಹುಲಗಪ್ಪ ಬಿಜ್ಜೂರ(11), ಗಾಯಗೊಂಡಿರುವ ಬಾಲಕಿ ರೇಖಾ ಲೊಟಗೇರಿ ಎಂದು ಗುರುತಿಸಲಾಗಿದೆ.

ಕುಸಿದ 306 ಮನೆಗಳು

ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಸುರಿದ ಮಳೆಗೆ 303 ಭಾಗಶಃ ಮತ್ತು 3 ಮನೆಗಳು ಪೂರ್ಣ ಪ್ರಮಾಣದಲ್ಲಿ ಕುಸಿದು ಬಿದ್ದಿವೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

ಮುದ್ದೇಬಿಹಾಳ ತಾಲ್ಲೂಕಿನಲ್ಲಿ 107, ವಿಜಯಪುರ 7, ಬಬಲೇಶ್ವರ 1, ತಿಕೋಟಾ 5, ಬಸವನ ಬಾಗೇವಾಡಿ 32, ಕೊಲ್ಹಾರ 12, ನಿಡಗುಂದಿ 21, ತಾಳಿಕೋಟೆ 26, ಚಡಚಣ 1, ಸಿಂದಗಿ 35, ದೇವರ ಹಿಪ್ಪರಗಿ 56 ಮನೆಗಳು ಸೇರಿದಂತೆ ಒಟ್ಟು 306 ಮನೆಗಳಿಗೆ ಹಾನಿಯಾಗಿದೆ ಎಂದು ಹೇಳಿದರು.

ಬಿರುಸು ಮಳೆ

ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರವೂ ಮಳೆಯಾಯಿತು. ಶನಿವಾರ ರಾತ್ರಿ ಸ್ವಲ್ಪ ಬಿಡುವು ನೀಡಿದ್ದ ಮಳೆ ಭಾನುವಾರ ಬೆಳಿಗ್ಗೆಯಿಂದ ದಿನಪೂರ್ತಿ ಜಿನುಗಿತು.

ಬಸವನ ಬಾಗೇವಾಡಿ 2.5 ಸೆಂ.ಮೀ.ಮಳೆಯಾಗಿದೆ. ಉಳಿದಂತೆ ಆಲಮಟ್ಟಿ 1.3, ಹೂವಿನ ಹಿಪ್ಪರಗಿ 5.1, ಅರೇಶಂಕರ 4, ಮಟ್ಟಿಹಾಳ 2.4, ವಿಜಯಪುರ 1.3, ತಿಕೋಟಾ 1.1, ಮಮದಾಪೂರ 1.6, ಮುದ್ದೆಬಿಹಾಳ 1, ನಾಲತವಾಡ 2.8, ತಾಳಿಕೋಟಿ 4.9, ಢವಳಗಿ 4, ಸಿಂದಗಿ 2, ಆಲಮೇಲ 2.9, ಸಾಸಾಬಾಳ 2, ರಾಮನಹಳ್ಳಿ 1.5, ಕಡ್ಲೆವಾಡ 3.2, ದೇವರಹಿಪ್ಪರಗಿ 3 ಮತ್ತು ಕೊಂಡಗೂಳಿ 2.8 ಸೆಂ.ಮೀ.ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.