ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಕೆರೆ, ಬಾವಡಿಗಳ ಸ್ವಚ್ಛತೆಗೆ ಸಲಹೆ

Last Updated 22 ಮಾರ್ಚ್ 2021, 15:43 IST
ಅಕ್ಷರ ಗಾತ್ರ

ವಿಜಯಪುರ: ಸ್ಮಾರಕಗಳ ನಗರದ ವಿಜಯಪುರದಲ್ಲಿ ಅನೇಕ ಕೆರೆಗಳು, ಬಾವಡಿಗಳು ಇದ್ದು, ಇವುಗಳನ್ನು ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಬಳಕೆಯಾಗುವಂತೆ ಮಾಡುವ ಕರ್ತವ್ಯ ನಮ್ಮೆಲ್ಲರ ಜವಾಬ್ದಾರಿಯಾಗಿದೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವೆಂಕಣ್ಣ ಬಿ.ಹೊಸಮನಿ ಹೇಳಿದರು.

ನಗರದ ಕಾಕಾ ಕಾರ್ಖಾನೀಸ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘ, ಸ್ಪಂದನಾ ಸ್ವಯಂಸೇವಾ ಸಂಸ್ಥೆ ಮತ್ತು ಜೈನ್ ಇರಿಗೇಶನ್ ಸಿಸ್ಟಮ್ ಸಹಯೋಗದಲ್ಲಿ ಸೋಮವಾರ ನಡೆದ ವಿಶ್ವ ಜಲ ದಿನ ಉದ್ಘಾಟಿಸಿ ಅವರು ಮಾತನಾಡಿದರು.

ಮುಂದಿನ ಪೀಳಿಗೆಗೆ ನಾವು ಗಿಡಗಳನ್ನು ನೆಡುವುದರ ಮೂಲಕ ಶುದ್ಧವಾದ ಗಾಳಿ ಶುದ್ಧವಾದ ನೀರು ಮತ್ತು ಉತ್ತಮ ಪರಿಸರವನ್ನು ನಿರ್ಮಾಣ ಮಾಡಿ ಕೊಡುಗೆಯಾಗಿ ನೀಡಬೇಕು ಎಂದು ಹೇಳಿದರು.

ಜೂನ್‌ 5 ರಂದು ಎಲ್ಲ ಇಲಾಖೆಗಳು ಸೇರಿ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಗಿಡಗಳನ್ನು ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಎಸ್.ಎಸ್.ಪಟ್ಟಣಶೆಟ್ಟಿ ಮಾತನಾಡಿ, ಪ್ರತಿಯೊಂದು ಗ್ರಾಮಗಳಲ್ಲಿ ನಾಗರಿಕರಿಗೆ ಅಮೂಲ್ಯವಾದದ ನೀರನ್ನು ಹಿತಮಿತವಾಗಿ ಬಳಸಿ, ಪುನರ್ ಬಳಕೆ ಮಾಡುವಂತೆ ಅರಿವು ಮೂಡಿಸಬೇಕಾಗಿದೆ ಎಂದರು.

ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ ಸಹ ಸಂಶೋಧನಾ ನಿರ್ದೇಶಕ ಅಶೋಕ ಎಸ್. ಸಜ್ಜನ್ ಮಾತನಾಡಿ, ಉಸಿರು ಬಂದಾಗಿನಿಂದ ಉಸಿರು ಹೋಗುವವರೆಗೂ ನೀರು ಅವಶ್ಯಕವಿದೆ. ನಾವೆಲ್ಲರೂ ನೀರಿನ ಬಗ್ಗೆ ಲಕ್ಷ್ಯ ವಹಿಸಿದರೆ ನಮ್ಮ ಮುಂದಿನ ಪೀಳಿಗೆಗೆ ನೀರು ದೊರೆಯುತ್ತದೆ. ನಿರ್ಲಕ್ಷಿಸಿದರೆ ನೀರಿನ ಸಮಸ್ಯೆಯನ್ನು ಎದುರಿಸಬೇಕಾಗುವುದು ಎಂದು ಹೇಳಿದರು.

ರೈತರು ಭೂಮಿಗೆ ನೀರು ಹೆಚ್ಚು ಬಿಡುವುದರಿಂದ ಭೂಮಿ ಸವಳು ಆಗುತ್ತದೆ ಮತ್ತು ಫಲವತ್ತತೆ ಕಳೆದುಕೊಳ್ಳುತ್ತದೆ ಆದ್ದರಿಂದ ನೀರನ್ನು ಮಿತವಾಗಿ ಬಳಸಿ ಎಂದು ಅವರು ರೈತರಿಗೆ ಸಲಹೆ ನೀಡಿದರು.

ಸಿವಿಲ್ ಎಂಜಿನಿಯರಿಂಗ್ ವಿಭಾಗ ಸಿಕ್ಯಾಬ್ ಕಾಲೇಜು ಮುಖ್ಯಸ್ಥ ಎಸ್. ಜೆ. ಅರವೇಕರ್. ಬಿ.ಎಲ್.ಡಿ.ಇ ಸಂಸ್ಥೆ ಸಹಾಯಕ ಪ್ರಾಧ್ಯಾಪಕಿ ಅನುರಾಧ ಎಸ್. ಟಂಕಸಾಲಿ ಮತ್ತು ಮಹಾನಗರ ಪಾಲಿಕೆ ಕಾನೂನು ಸಲಹೆಗಾರ ಐ.ಎಂ.ಇಂಡಿಕರ್,ಉಮೇಶ್ ಪಂಚಾಳ ಮತ್ತು ರಾಹುಲ್ ಪಂಚಾಳ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಬಿ. ವೈ. ನದಾಫ್, ಎಂ.ಎಸ್. ದೇವರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT