ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾಟಕದಿಂದ ಸಮಾಜ ಬೆಸೆಯುವ ಕೆಲಸವಾಗಲಿ’

Last Updated 19 ಏಪ್ರಿಲ್ 2021, 14:06 IST
ಅಕ್ಷರ ಗಾತ್ರ

ವಿಜಯಪುರ: ನಾಟಕ ಕಲೆಯಿಂದ ಸಮಾಜವನ್ನು ಅರಳಿಸುವ, ಬೆಸೆಯುವ ಕೆಲಸವಾಗಬೇಕಾಗಿದೆಎಂದುಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಹೇಳಿದರು.

ನಗರದಸಿಂದಗಿ ರಸ್ತೆಯಲ್ಲಿನ ವೀರೇಶ್ವರ ಕಂಪನಿಯ ಆವರಣದಲ್ಲಿ ಭಾನುವಾರಎಸ್.ಎಂ.ಖೇಡಗಿ ಅಭಿನಂದನಾ ಸಮಿತಿವತಿಯಿಂದನಡೆದ ಹಿರಿಯ ರಂಗಕರ್ಮಿ ಎಸ್.ಎಂ.ಖೇಡಗಿ ಕುರಿತ ಅಭಿನಂದನ ಗ್ರಂಥ ‘ರಂಗಚೇತನ’ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರುಮಾತನಾಡಿದರು.

ಅಭಿನಯವು ಎಲ್ಲರಿಗೂ ಒಲಿಯುವಂತಹುದಲ್ಲ. ಕಲೆಯು ದೈವೀ ಸಾಕ್ಷಾತ್ಕಾರವೇ ಸರಿ. ಅಂತಹ ಅಪರೂಪದ ಸಾಧನೆಗೈದಿರುವುದಕ್ಕಾಗಿಯೇ ಡಾ.ರಾಜಕುಮಾರ್‌ ಅವರಂತಹ ನಾಯಕರು ಜನಮಾನಸದಲ್ಲಿ ವಿರಾಜಮಾನರಾಗಿದ್ದಾರೆ ಎಂದರು.

ಪತ್ರಕರ್ತ ಗಣೇಶ ಅಮೀನಗಡ,‘ನಾಟಕವೆಂದರೆ ಅಲ್ಲಿ ಸಂಗೀತ ಕಚೇರಿ ಇರಲೇಬೇಕು. ಮನರಂಜನೆಯೂ ಸಿಗುತ್ತಿರಬೇಕು. ದ್ವಂದ್ವಾರ್ಥ, ಅಶ್ಲೀಲ ಸಂಭಾಷಣೆಗಳಿರದೆ, ರಂಗಭೂಮಿ ಎನ್ನುವುದು ಶಿವಾನುಭವ ಮಂಟಪವಾಗಬೇಕು. ನಾಟಕ ಮಂಡಳಿ ಸಂಚಾರಿ ಪಾಠಶಾಲೆಯಾಗಬೇಕು’ ಎಂದು ಹೇಳಿದರು.

'ರಂಗಭೂಮಿಗೆ ಸಂಬಂಧಿಸಿದ ಆಕಾರ ಗ್ರಂಥದಂತೆ ತಯಾರುಗೊಂಡಿರುವರಂಗಚೇತನವು ಕಾಲೇಜು ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು, ಶಿಕ್ಷಕರು ಹಾಗೂ ರಂಗಭೂಮಿಯ ಆಸಕ್ತರು ಓದಲೇ ಬೇಕಾದಂತಹಗ್ರಂಥವಾಗಿದೆ' ಎಂದರು.

ಬಾಗಲಕೋಟೆಯ ಎನ್.ಎ.ಮುಲ್ಲಾ ಕಾರ್ಯಕ್ರಮ ಉದ್ಘಾಟಿಸಿದರು.ರಂಗಚೇತನದ ಪ್ರಧಾನ ಸಂಪಾದಕ ಯು.ಎನ್. ಕುಂಟೋಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ಸಂತ ಶರೀಫ ಶಿವಯೋಗಿ ನಾಟ್ಯ ಸಂಘದ ಮಾಲಿಕ ಕತಾಲಸಾಬ್ ಬಣಗಾರ ಅವರು,ಎಸ್.ಎಂ.ಖೇಡಗಿ ಅವರಿಗೆ 'ನಾಟಕ ಸಾರ್ವಭೌಮ' ಎಂಬ ಬಿರುದಿನೊಂದಿಗೆ 5 ಕೆ.ಜಿ. ತೂಕದ ಗಣೇಶ ಮೂರ್ತಿ ನೀಡಿ ಗೌರವಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎ.ಜಿದ್ದಿ, ಸಲೀಮಾ ಖೇಡಗಿ, ರಾಜೇಂದ್ರಕುಮಾರ ಬಿರಾದಾರ, ವಿ.ಎಸ್.ಖಾಡೆ, ಜಿ.ಎಸ್.ಕಮತರ, ಡಾ.ವಿ.ಎಂ.ಬಾಗಾಯತ್, ಶೇಷರಾವ ಮಾನೆ, ಡಾ.ಕಾಂತು ಇಂಡಿ, ಅಂಬರೀಷ ಪೂಜಾರಿ, ಬಸವರಾಜ ಬೀಳಗಿ, ದಾಕ್ಷಾಯಿಣಿ ಬಿರಾದಾರ, ಆಶಾರಾಣಿ, ರುಕ್ಷಾನಾ ನದಾಫ್, ಪಾಕೀಜಾ ನದಾಫ್, ಜಮೀರ್ ಖೇಡಗಿ, ಎ.ಜಿ.ಬಿರಾದಾರ, ಮಯೂರ ತಿಳಗೂಳಕರ, ಶಂಕರ ಬೈಚಬಾಳ ಮತ್ತಿತರರು ಇದ್ದರು.

ಡಾ.ಹರೀಶ ಹೆಗಡೆ ತಂಡದವರು ರಂಗಚೇತನ ಗೀತೆ ಹಾಡಿದರು. ಸೋಮಶೇಖರ ಕುರ್ಲೆ ಸ್ವಾಗತಗೀತೆ ಹಾಡಿದರು. ಶರಣಗೌಡ ಪಾಟೀಲ ಸ್ವಾಗತಿಸಿದರು. ಮಹಾದೇವ ರೆಬಿನಾಳ, ಶಿಲ್ಪಾ ಭಸ್ಮೆ ನಿರೂಪಿಸಿದರು. ಸುಭಾಸಚಂದ್ರ ಕನ್ನೂರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT