ಭಾನುವಾರ, ಮೇ 29, 2022
30 °C

ವಿಜಯಪುರ: ಕಬ್ಬಿಗೆ ಕಡಿಮೆ ದರ, ಸಕ್ಕರೆ ಕಾರ್ಖಾನೆಗಳ ನೀತಿಗೆ ರೈತರ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜಿಲ್ಲೆಯ ಜಮಖಂಡಿ ಸಕ್ಕರೆ ಕಾರ್ಖಾನೆ ಹಾಗೂ ರೇಣುಕಾ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕಬ್ಬಿನ ನಿಗದಿಗಿಂತ ಕಡಿಮೆ ದರ ಕಡಿಮೆ ಕೊಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಪ್ರಾಂತ್ಯ ರೈತ ಸಂಘ ಹಾಗೂ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ಪ್ರಾಂತ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ  ಭೀಮಶಿ ಕಲಾದಗಿ ಮಾತನಾಡಿ, ರೈತರು ಬೆಳೆದ ಕಬ್ಬಿಗೆ ಬಸವೇಶ್ವರ ಹಾಗೂ ನಂದಿ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ₹2750 ರಂತೆ ಕೊಡುತ್ತಿವೆ. ಆದರೆ,  ಜಮಖಂಡಿ ಸಕ್ಕರೆ ಕಾರ್ಖಾನೆ ಹಾಗೂ ರೇಣುಕಾ, ಮನಾಲಿ, ಭೀಮಶಂಕರ ಸಕ್ಕರೆ ಕಾರ್ಖಾನೆ, ಕೆ.ಪಿ.ಆರ್. ಹಾಗೂ ದೇವನೂರ ಸಕ್ಕರೆ  ಕಾರ್ಖಾನೆಗಳು ಪ್ರತಿ ಟನ್‌ಗೆ ₹2350ರಂತೆ ದರ ನಿಗದಿಪಡಿಸಿದ್ದಾರೆ. ಇದರಿಂದ ಕಬ್ಬು ಬೆಳೆದ ರೈತರಿಗೆ ಅನ್ಯಾಯವಾಗುತ್ತಿದೆ ಎಮದು ಆರೋಪಿಸಿದರು.

ಕಬ್ಬು ಬೆಳೆಯಬೇಕಾದರೆ ಅದಕ್ಕೆ ತಗಲುವ ಖರ್ಚು, ವೆಚ್ಚಗಳ ಲೆಕ್ಕ ಹಾಕಿದರೆ ಈ ದರ ರೈತರಿಗೆ ಯಾವುದಕ್ಕೂ ಸಾಲುವುದಿಲ್ಲ ಎಂದರು.

ಬರಗಾಲದಿಂದ ತತ್ತರಿಸಿದ ರೈತರಿಗೆ ಕಡಿಮೆ ದರ ನಿಗದಿಪಡಿಸಿದರೆ ಸಾಲ ಮೈಮೇಲೆ ಬರುತ್ತದೆ. ಸಕ್ಕರೆ ಕಾರ್ಖಾನೆಯವರು ಸಕ್ಕರೆ ತಯಾರಿಸಿದ ನಂತರ ಕಬ್ಬಿನ ಸಿಪ್ಪೆಯಿಂದ ಸಾಕಷ್ಟು ಉತ್ಪನ್ನಗಳನ್ನು ತಯಾರಿಸುವುದರೊಂದಿಗೆ ಸ್ಪಿರಿಟ್ ಹಾಗೂ ಕಬ್ಬಿನ ಸಿಪ್ಪೆಯಿಂದ ರಟ್ಟನ್ನು ತಯಾರಿಸುತ್ತಾರೆ. ಇದರಿಂದ ಸಕ್ಕರೆ ಕಾರ್ಖಾನೆಯವರಿಗೆ ಸಾಕಷ್ಟು ಲಾಭ ಇರುತ್ತದೆ. ಅನ್ನ ಬೆಳೆದು ಕೊಡುವ ಅನ್ನದಾತನಿಗೆ ಇನ್ನು ಸ್ವಲ್ಪ ದರ ಹೆಚ್ಚಿಸಿದರೆ ಕಾರ್ಖಾನೆಯವರಿಗೆ ಯಾವುದೇ ತೊಂದರೆ ಇರುವುದಿಲ್ಲ ಆದ್ದರಿಂದ ಜಿಲ್ಲಾಧಿಕಾರಿಗಳು ತಕ್ಷಣ ಕಡಿಮೆ ದರ ನಿಗದಿಪಡಿಸಿದ ಕಾರ್ಖಾನೆ ಆಡಳಿತ ಮಂಡಳಿ ಮುಖ್ಯಸ್ಥರನ್ನು ಕರೆಯಿಸಿ ಸಭೆ ನಡೆಯಿಸಿ ಕಡ್ಡಾಯವಾಗಿ ₹ 2750 ದರ ನಿಗದಿ ಪಡಿಸಿಸಲು ಸೂಚಿಸಬೇಕು. ಇಲ್ಲದಿದ್ದರೆ ರೈತರ ಸಂಘಟನೆಗಳು ಕಾರ್ಖಾನೆ ಎದುರು ಧರಣಿ ಸತ್ಯಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದರು.

ರೈತ ಮುಖಂಡರಾದ ಅರವಿಂದ ಕುಲಕರ್ಣಿ, ಸುರೇಖಾ ರಜಪೂತ, ಶ್ರೀಶೈಲ ದೊಡಮನಿ, ನಿಂಗಪ್ಪ ಪೂಜಾರಿ, ಮಹಾದೇವ ಹೂಗಾರ, ಯಮನೂರಿ ಹೂಗಾರ, ಬಸಪ್ಪ ದಾರಬಾವಿ, ಸಿದ್ರಾಮ ಬಂಗಾರಿ, ರಾಜು ರಣದೇವಿ, ಶ್ರೀಮಂತ ಕಾಪಸೆ ಮುಂತಾದವರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು