ವಿಜಯಪುರ: ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಇತ್ತೀಚೆಗೆ ನಡೆಸಿದ್ದ ಬಿಯುಎಂಎಸ್ ಕೋರ್ಸಿನ ಅಂತಿಮ ವರ್ಷದ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ನಗರದ ಸಿಕ್ಯಾಬ್ ಸಂಸ್ಥೆಯ ಲುಕ್ಮಾನ್ ಯುನಾನಿ ಮೆಡಿಕಲ್ ಕಾಲೇಜಿನ ಐವರು ವಿದ್ಯಾರ್ಥಿನಿಯರು ರ್ಯಾಂಕುಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಸಯೇದಾ ಅಸ್ಫಿಯಾ ಕಾಝಿ ಶೇ 84.02 ಅಂಕಗಳನ್ನು ಗಳಿಸಿ ವಿಶ್ವವಿದ್ಯಾಲಯಕ್ಕೆ ಪ್ರಥಮ ರ್ಯಾಂಕ್, ಹೂಮಾ ಸಬೀರಹ್ಮದ ಶೇ 82.59 ಅಂಕಗಳನ್ನು ಗಳಿಸಿ ವಿ.ವಿ.ಗೆ ತೃತೀಯ ರ್ಯಾಂಕ್, ಖಾನ್ ಕನೀಜ್ ಫಾತೀಮಾ ಶೇ 81.67ರಷ್ಟು ಅಂಗಗಳನ್ನು ಗಳಿಸಿ ವಿ.ವಿ ಗೆ ಆರನೇ ರ್ಯಾಂಕ್, ಸಾನಿಯಾ ಡಿ.ಬೆಕಿನಾಳಕರ ಶೇ 80.75 ಅಂಕ ಗಳಿಸಿ ವಿ.ವಿ.ಗೆ ಎಂಟನೇ ರ್ಯಾಂಕ್ ಹಾಗೂ ಕೆ. ಎಂ. ಆಫ್ರೀನ್ ರಶೀದ್ ಶೇ79.94ಅಂಕ ಗಳಿಸಿ ವಿ.ವಿ.ಗೆ 10ನೇ ರ್ಯಾಂಕ್ ಗಳಿಸಿದ್ದಾರೆ.

ರ್ಯಾಂಕ್ ಗಳಿಸುವ ಮೂಲಕ ಲುಕ್ಮಾನ್ ಯುನಾನಿ ಮೆಡಿಕಲ್ ಕಾಲೇಜಿನ ಘನತೆಯನ್ನು ಅಧಿಕಗೊಳಿಸಿರುವ ವಿದ್ಯಾರ್ಥಿಗಳಿಗೆ ಸಿಕ್ಯಾಬ್ ಸಂಸ್ಥೆಯ ಅಧ್ಯಕ್ಷ ಡಾ.ಎಸ್.ಎ.ಪುಣೆಕರ, ಪ್ರಧಾನ ಕಾರ್ಯದರ್ಶಿ ಎ. ಎಸ್. ಪಾಟೀಲ, ನಿರ್ದೇಶಕ ಸಲಾಹುದ್ದೀನ್ ಅಯೂಬಿ, ಡೀನ್ ಅಕೀಲ್ ಖಾದ್ರಿ, ಪ್ರಾಚಾರ್ಯೆ ಶಹನಾಝ ಬಾನು ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.