ದೇವರಹಿಪ್ಪರಗಿ (ವಿಜಯಪುರ ಜಿಲ್ಲೆ): ಬಿ.ಬಿ.ಇಂಗಳಗಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದ ಗುರುಸಿದ್ದೇಶ್ವರ ಜಾತ್ರೆ ರಥೋತ್ಸವ ಸಂದರ್ಭದಲ್ಲಿ ರಥದ ಗಾಲಿಗೆ ಸಿಲುಕಿ ಯುವಕ ಮೃತಪಟ್ಟಿದ್ದಾರೆ.
ಗ್ರಾಮದ ಜನತೆ ಹಾಗೂ ಭಕ್ತಸಮೂಹ ಉತ್ಸಾಹದಿಂದ ರಥ ಎಳೆಯುತ್ತಿದ್ದಾಗ ಯುವಕ ದೇವೇಂದ್ರ ಮನೋಹರ ಬಡಿಗೇರ(24) ಆಯತಪ್ಪಿ ಬಿದ್ದು ರಥದ ಚಕ್ರಕ್ಕೆ ಸಿಲುಕಿದರು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.