ವಿಜಯಪುರ: ನೀಟ್ ಉತ್ತೀರ್ಣರಾಗಿ ಸರ್ಕಾರಿ ಕೋಟಾದಡಿ ಎಂ.ಬಿ.ಬಿ.ಎಸ್. ಸೀಟು ಪಡೆದರೂ ಆರ್ಥಿಕ ಸಮಸ್ಯೆಯಿಂದಾಗಿ ಸಂಕಷ್ಟದಲ್ಲಿದ್ದ ಆರು ಜನ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಿ.ಎಲ್.ಡಿ.ಇ ಸಂಸ್ಥಯೆ ಅಧ್ಯಕ್ಷ ಮತ್ತು ಸಚಿವ ಎಂ. ಬಿ. ಪಾಟೀಲ ಅವರು ಹಣಕಾಸು ನೆರವು ನೀಡುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.

ನಗರದ ತಮ್ಮ ಗೃಹ ಕಚೇರಿಯಲ್ಲಿ ಭಾನುವಾರ ಆರು ಜನ ವಿದ್ಯಾರ್ಥಿಗಳಿಗೆ ಎಂ.ಬಿ.ಬಿ.ಎಸ್ ಕೋರ್ಸಿನ ಪ್ರಥಮ ವರ್ಷದ ಬೋಧನಾ ಶುಲ್ಕ, ಊಟ ಮತ್ತು ವಸತಿ(ಹಾಸ್ಟೇಲ್ ಮತ್ತು ಮೆಸ್)ಕ್ಕೆ ಅಗತ್ಯವಾಗಿರುವ ಒಟ್ಟು ₹10,61,390 ಮೊತ್ತದ ಚೆಕ್ ಅನ್ನು ವಿತರಿಸಿದರು.

ಬಳಿಕ ಮಾತನಾಡಿದ ಸಚಿವರು, ವಿದ್ಯಾರ್ಥಿಗಳು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಬೇಕು. ತಮ್ಮ ಶಿಕ್ಷಣಕ್ಕೆ ಅಗತ್ಯವಾಗಿರುವ ಆರ್ಥಿಕ ನೆರವನ್ನು ನೀಡಲಾಗುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಪೋಷಕರು, ತಮ್ಮ ಊರು ಮತ್ತು ಬಸವನಾಡು ವಿಜಯಪುರ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಕಿವಿಮಾತು ಹೇಳಿ ಶುಭ ಹಾರೈಸಿದರು.

ನೆರವು ಪಡೆದ ವಿದ್ಯಾರ್ಥಿಗಳು:

ಬಬಲೇಶ್ವರ ತಾಲ್ಲೂಕಿನ ಹಲಗಣಿ ಗ್ರಾಮದ ವಿದ್ಯಾರ್ಥಿ ಸುದೀಪ ಬಸವರಾಜ ಬಾವಲತ್ತಿಗೆ ₹1,54,150, ತಿಟೋಟಾ ಪಟ್ಟಣದ ಸಚೀನ ಭೀಮಣ್ಣ ಮಾಳಿಗೆ ₹1,56,621, ಬಾಬಾನಗರದ ವಿದ್ಯಾರ್ಥಿನಿ ಪ್ರತೀಕ್ಷಾ ಗಣಪತಿ ಶಿಂದೆ ₹2,51,571, ಬೋಳಚಿಕ್ಕಲಕಿ ಗ್ರಾಮದ ಸಂದೇಶ ಶಿವಾಜಿ ನಂದ್ಯಾಳಗೆ ₹1,48,400, ನಾಗಠಾಣದ ವಿದ್ಯಾರ್ಥಿನಿ ಭವಾನಿ ಬಗಲಿಗೆ ₹1,40 ಲಕ್ಷ, ಹಂಚಿನಾಳ ಎಲ್.ಟಿ. 3ರ ವಿದ್ಯಾರ್ಥಿ ರೋಹಿತ ರಾಠೋಡಗೆ ₹2,10,638 ಮೊತ್ತದ ಚೆಕ್ ವಿತರಿಸಿದರು.

ಎಂ.ಬಿ.ಬಿ.ಎಸ್ ಓದಿ ವೈದ್ಯರಾಗುವ ತಮ್ಮ ಕನಸು ನನಸಾಗಲು ಕಾರಣರಾದ ಸಚಿವ ಎಂ. ಬಿ. ಪಾಟೀಲ ಅವರ ನೆರವಿಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಕೃತಜ್ಞತೆ ಸಲ್ಲಿಸಿದರು.

‘ನಮ್ಮ ಮಕ್ಕಳ ಕನಸು ನನಸಾಗಲು ಸಚಿವರು ಮಾಡಿರುವ ಸಹಾಯದಿಂದ ಮನತುಂಬಿ ಬಂದಿದೆ. ಅವರಿಗೆ ಎಷ್ಟೇ ಕೃತಜ್ಞತೆ ಸಲ್ಲಿಸಿದರೂ ಸಾಕಾಗುವುದಿಲ್ಲ’ ಎಂದು ಪೋಷಕರು ಸಂತಸ ವ್ಯಕ್ತಪಡಿಸಿದರು.

ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆರ್. ವಿ. ಕುಲಕರ್ಣಿ ಮತ್ತು ಅಕೌಂಟ್ಸ್ ಸುಪರಿಂಟೆಂಡೆಂಟ್ ಎಸ್. ಎಸ್. ಪಾಟೀಲ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.