ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ಶನಿವಾರ 52ನೇ ದಿನ ಪೂರೈಸಿತು. ಬೆಂಗಳೂರಿನಿಂದ ಬಂದ ಫೆಲೋಶಿಪ್ ವಿದ್ಯಾರ್ಥಿಗಳು ಧರಣಿಗೆ ಬೆಂಬಲ ಸೂಚಿಸಿದರು.

ವಿದ್ಯಾರ್ಥಿ ಶಾರೋನ್ ಮಾತನಾಡಿ, ವಿಜಯಪುರ ಹಿಂದುಳಿದ ಪ್ರದೇಶ ಆಗಿರುವುದರಿಂದ ಈ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಬೇಕು. ಸುಂದರವಾದ ಜಿಲ್ಲಾ ಆಸ್ಪತ್ರೆ ಇದೆ, ಎಲ್ಲಾ ಸೌಲಭಗಳು ಇವೆ, ಹೀಗಿರುವಾಗ ಸರ್ಕಾರ ಬಡ ಜನರಿಗೆ ಅನುಕೂಲವಾಗುವ ಹಾಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ವಿದ್ಯಾರ್ಥಿನಿ ಅನ್ಸಿಲಾ ಮಾತನಾಡಿ, ಅತಿ ಶೀಘ್ರದಲ್ಲಿ ಸರ್ಕಾರವೇ ವೈದ್ಯಕೀಯ ಕಾಲೇಜು ನಿರ್ಮಿಸಬೇಕು ಹಾಗೂ ಜಿಲ್ಲಾ ಆಸ್ಪತ್ರೆ ಉಳಿಸಬೇಕು ಎಂದರು.

ಜನಾರೋಗ್ಯ ವೇದಿಕೆ ಚಳವಳಿ ಮುಖಂಡರಾದ ಟೀನಾ ಝೇವಿಯರ್, ಫಾದರ್ ಕೆವಿನ್, ಜಮಖಂಡಿ ತಾಲ್ಲೂಕಿನ ಗದ್ಯಾಳ ಗ್ರಾಮದ ರೈತ ಮುಖಂಡ ಜಗದೀಶ ಅಥಣಿ ಹಾಗೂ ರಾಜಕುಮಾರ ತೇಲಿ ಬೆಂಬಲ ಸೂಚಿಸಿದರು.

ವಿದ್ಯಾರ್ಥಿಗಳಾದ ತೆಂಜಿನ್, ಅಭಯ್ ಅಬ್ರಹಾಂ, ರನುಶ್ ಪೌಲ್, ರಚುಲ್ ಚಿತ್ತೂರ್ ಹಾಗೂ ಮೀನಾಕ್ಷಿ ಸಿಂಗೆ, ಮುತ್ತಮ್ಮ ಭೋವಿ, ಮಲ್ಲು ಜಲಗೇರಿ, ಚನ್ನು ಕಟ್ಟಿಮನಿ, ಗೌಡಪ್ಪ ಬಡಿಗೇರ, ಅಕ್ಷಯ ಕುಮಾರ, ಮಹಬೂಬ್ ಪಟೇಲ್, ಅಂಕಿತಾ ತಡವಲ್ಕರ್, ಗೀತಾ ಕಟ್ಟಿ, ಸುನಂದಾ ರಾಥೋಡ, ಕಿರಣ, ಗೋಪಾಲ ಕೃಷ್ಣ ಶಿಲ್ಪಿ, ದೀಪಕ್ ಪೋತದಾರ, ಎ. ಕೆ. ಪಾಟೀಲ್, ಸೋಮಲಿಂಗ ರಂಡೆವೆ, ರಾಜಕುಮಾರ ತೇಲಿ, ಕಾಂತ ಕುಮಾರ್, ಎಸ್.ಎಸ್.ತೇಲಿ, ಟಿ.ಕೆ.ಮಲಗೊಂಡ, ಎಂ.ಎಚ್.ಮಕೊಂಡ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.