ವಿಜಯಪುರ: ಸೆ. 17ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದಿಂದ ಅ. 2 ಗಾಂಧಿ ಜಯಂತಿ ವರೆಗೆ ಬಬಲೇಶ್ವರ ಮಂಡಲದಲ್ಲಿ ಆರೋಗ್ಯ ಶಿಬಿರ, ಗಿಡನೆಡುವ ಕಾರ್ಯಕ್ರಮ, ಸ್ವಚ್ಚತಾ ಕಾರ್ಯಕ್ರಮ, ಕೋವಿಡ್ ಲಸಿಕಾ ಅಭಿಯಾನ, ಮೋದಿ ಜೀವನ ಚರಿತ್ರೆ ಕುರಿತಾದ ಪುಸ್ತಕ ಪರಿಚಯ, ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಹೇಳಿದರು.

ಮೋದಿ ಜನ್ಮದಿನದ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸೆ.17 ರಂದು ತಿಕೋಟಾ ತಾಲ್ಲೂಕಿನ ಕನಮಡಿ ಬಸವೇಶ್ವರ ದೇವಸ್ಥಾನದಲ್ಲಿ ಮತ್ತು ಸೆ.21ರಂದು ಜಾಲಗೇರಿ ಗ್ರಾಮದಲ್ಲಿ ಉಚಿತ ಆರೋಗ್ಯ ಶಿಬಿರ,ಹಮ್ಮಿಕೊಳ್ಳಲಾಗಿದೆ ಎಂದರು.

ಮಂಡಲ ಅಧ್ಯಕ್ಷ ವಿಠ್ಠಲ ಕಿರಸೂರ, ಚಂದ್ರಶೇಖರ ಕವಟಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬಿರಾದಾರ, ಮಂಡಲ ಉಸ್ತುವಾರಿ ಬಸವರಾಜ ಬೈಚಬಾಳ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಗುರಲಿಂಗಪ್ಪ ಅಂಗಡಿ, ಸಾಬು ಮಾಶ್ಯಾಳ, ಮುಖಂಡರಾದ ಶಿವನಗೌಡ ಪಾಟೀಲ, ಶಂಕರಗೌಡ ಬಿರಾದಾರ, ಬಸವರಾಜ ಕುರವಿನಶೆಟ್ಟಿ, ಬಾಲರಾಜ ರೆಡ್ಡಿ, ಪರಶುರಾಮ ನಾಟೀಕಾರ ಸಭೆಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.