ಮುದ್ದೇಬಿಹಾಳ: ‘ಹೋಳಿ ಸ್ನೇಹದ ಬಾಂಧವ್ಯ ತೋರುವ ಹಬ್ಬ. ಅದು ವಿಜಯದ ಸಂಕೇತ. ಸಾರ್ವಜನಿಕರು ಶಾಂತಿಯುತವಾಗಿ ಹೋಳಿ ಹಬ್ಬವನ್ನು ಆಚರಣೆ ಮಾಡಬೇಕು’ ಎಂದು ಸಿಪಿಐ ಮಹಮ್ಮದ್ ಫಸಿಯುದ್ದಿನ್ ಹೇಳಿದರು.

ಶನಿವಾರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಹೋಳಿ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿ, ‘ಇದೇ ಸಮಯದಲ್ಲಿ ರಂಜಾನ್ ಕೂಡ ಇದ್ದು, ಎಲ್ಲ ಹಬ್ಬವನ್ನೂ ಶಾಂತಿಯುತವಾಗಿ ಆಚರಿಸಬೇಕು. ಗಲಾಟೆ, ಅಹಿತಕರ ಘಟನೆ ಕಂಡು ಬಂದಲ್ಲಿ ಅಂತವರ ಮೇಲೆ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಪಿಎಸ್ಐ ಸಂಜಯ ತಿಪರೆಡ್ಡಿ ಮಾತನಾಡಿ, ‘ಇಲಾಖೆಯೊಂದಿಗೆ ಸಾರ್ವಜನಿಕರ ಸಹಕಾರ ಅವಶ್ಯ. ಸಮಸ್ಯೆಗಳಿದ್ದರೆ ತಕ್ಷಣೆ ಗಮನಕ್ಕೆ ತನ್ನಿ, ಸರಿಪಡಿಸೋಣ. ಆದಷ್ಟು ರಾಸಾಯನಿಕ ಬಣ್ಣಗಳನ್ನು ತ್ಯಜಿಸಿ. ಕೆನಾಲ್, ಬಾವಿಯಲ್ಲಿ ಸ್ನಾನ ಮಾಡುವಾಗ ಎಚ್ಚರವಿರಲಿ. ಪಿಯುಸಿ ಪರೀಕ್ಷೆ ಆರಂಭವಾಗಿದ್ದು ವಿದ್ಯಾರ್ಥಿಗಳಿಗೆ ಅಡಚಣೆ ಆಗದಂತೆ ಆಚರಿಸಿ. ಬಡಾವಣೆಯಲ್ಲಿ ಹಲಿಗೆ ಬಾರಿಸುವುದಕ್ಕೆ ನಿಯಂತ್ರಣ ಇರಲಿ’ ಎಂದರು.

ಸಭಿಕರ ಪರವಾಗಿ ಅಶೋಕ ನಾಡಗೌಡ, ಸದ್ದಾಂ ಕುಂಟೋಜಿ, ಬಸವರಾಜ ಸಿದ್ದಾಪುರ, ರಫೀಕ್ ಶಿರೋಳ ಮಾತನಾಡಿದರು.

ಪಿಎಸ್ಐ ಅಪರಾಧ ವಿಭಾಗದ ಆರ್ಎಸ್.ಬಂಗಿ, ಎ.ಎಸ್.ಐ ಕರೆಪ್ಪ ಅಸ್ಕಿ, ಪ್ರಕಾಶ ಪುಜಾರಿ, ರಾಘು ಇಂಗಳಗಿ, ಸಂಗಮೇಶ ಚಲವಾದಿ, ಉಮೇಶ ಬನಸೋಡೆ ಅಪರಾಧ ವಿಭಾಗದ ಪಿಎಸ್ಐ ಆರ್.ಎಸ್.ಬಂಗಿ, ಪಟ್ಟಣದ ಹಿಂದೂ, ಮುಸ್ಲಿಂ ಸಮುದಾಯದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.