ಶನಿವಾರ, ಜೂನ್ 25, 2022
24 °C

ಹಣ ಕೊಟ್ಟರು ಸಿಗದ ಆಮ್ಲಜನಕ: ಉಮೇಶ ಕಾರಜೋಳ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಹಸಿರು ನಮ್ಮೆಲ್ಲರ ಉಸಿರು, ಕಾಡು ಬೆಳೆಸಿ ನಾಡು ಉಳಿಸಿ ಎನ್ನುವ ಪರಿಸರ ಪ್ರೇಮಿಗಳ ಘೋಷ ವಾಕ್ಯಗಳನ್ನು ಮುಂಚಿನಿಂದ ಕೇಳುತ್ತಾ ಬಂದಿದ್ದೇವೆ. ಆದರೆ, ಇತ್ತೀಚಿಗೆ ಕೊರೊನಾದಂತಹ ಸಂಕಷ್ಟದಲ್ಲಿ ಹಣ ಕೊಟ್ಟರು ಆಮ್ಲಜನಕ ಸಿಗದೇ ಅನೇಕರು ಸಾವನ್ನಪ್ಪಿದ ಘಟನೆಗಳು ಗಮನಿಸಿದಾಗ ಪ್ರಕೃತಿಯಿಂದ ಉಚಿತವಾಗಿ ನಮ್ಮೆಲ್ಲರಿಗೆ ಆಗುತ್ತಿರುವ ಲಾಭಗಳನ್ನು ತಿಳಿಯಬಹುದಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಉಮೇಶ ಕಾರಜೋಳ ಹೇಳಿದರು.

ನಾಗಠಾಣ ಮತಕ್ಷೇತ್ರದ ಜುಮನಾಳದ ಸರ್ಕಾರಿ ಶಾಲಾ ಆವರಣದಲ್ಲಿ ಪರಿಸರ ದಿನಾಚರಣೆ ನಿಮಿತ್ಯ ಸಸಿ ನೆಟ್ಟು ಅವರು ಮಾತನಾಡಿದರು.

ಪರಿಸರದ ಉಳಿವಿಗಾಗಿ ಪಣ ತೊಟ್ಟು, ಸಾಧ್ಯವಿರುವ ಎಲ್ಲ ಕಡೆಗಳಲ್ಲಿ ಮನೆಗೊಂದು ಮರ, ಊರಿಗೊಂದು ವನ ಎಂಬಂತೆ ಸಸಿಗಳನ್ನು ನೆಟ್ಟು ಈ ಭೂಮಂಡಲನ್ನು ಹಸಿರು ಮಾಡೋಣ, ಹಸಿರು ನಮ್ಮೆಲ್ಲರ ಉಸಿರು ಎಂದರು.

ಶರಣ ಮುತ್ಯಾ ಪೂಜಾರಿ, ರಮೇಶ ವಗ್ಗೆ, ಸುಭಾಶ ಚಲವಾದಿ, ಸಂಜು ಕಬಾಡೆ, ಸುನೀಲ ಕೋರಿ, ಸುರೇಶ ಕೊಲಕಾರ, ಶರಣಯ್ಯ ಮಠಪತಿ, ಸಂಜಯ ಬಿಷೆ, ಸಾಗರ ಕಾಪ್ಸೆ, ರಾಕೇಶ ಕೋಟಿ, ಭೀಮಾಶಂಕರ ಹೊನ್ನುಟಗಿ, ಪಯಾಜ ಜಂಬಗಿ, ಶ್ರೀಶೈಲ ಮಮದಾಪುರ, ಈರಣ್ಣ ಅಮರಪ್ಪಗೊಳ, ಸಾಬು ಕಂಬಾರ, ವಿನೋದಕುಮಾರ ಮಣೂರ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು