ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ದೇಬಿಹಾಳ: ಮಾರ್ಚ್‌ 30ರಿಂದ ಪದ್ಮಾವತಿ ದೇವಿ ಜಾತ್ರೋತ್ಸವ

Published 29 ಮಾರ್ಚ್ 2024, 14:36 IST
Last Updated 29 ಮಾರ್ಚ್ 2024, 14:36 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಪದ್ಮಾವತಿ ದೇವಿ ಜಾತ್ರಾ ಮಹೋತ್ಸವ ಮಾರ್ಚ್‌30 ರಿಂದ ಏ.2ರವರೆಗೆ ನಡೆಯಲಿದೆ.

ಮಾರ್ಚ್ 30 ರಂದು ಬೆಳಿಗ್ಗೆ ನಾಗದೇವರ ವಿಗ್ರಹ ಪ್ರತಿಷ್ಠಾಪನೆ, ಕಲಾ ರೂಪಣ, ನಾಗಶಾಂತಿ, ಅಷ್ಟಕುಲ ನಾಗರಪೂಜೆ ನಂತರ ಅನ್ನಸಂತರ್ಪಣೆ ನಡೆಯಲಿದೆ. ಮಾರ್ಚ್31 ರಂದು ಬೆಳಿಗ್ಗೆ 6ಕ್ಕೆ ಮಂಗಲವಾದ್ಯ ಘೋಷ, 8ಕ್ಕೆಪ್ರಾರ್ಥನೆ, ಧ್ವಜಾರೋಹಣ, ಪಾರ್ಶ್ವನಾಥ ತೀರ್ಥಂಕರರಿಗೆ ನವಕಳಸಾಭಿಷೇಕ, ಬೆಳಿಗ್ಗೆ10ಕ್ಕೆ ಪದ್ಮಾವತಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ ವಿಶೇಷ ಪೂಜೆ, ಸಂಜೆ 4ಕ್ಕೆ ಪದ್ಮಾವತಿ ದೇವಿ ಆರಾಧನೆ ನಡೆಯಲಿದ್ದು, ರಾತ್ರಿ 8ಕ್ಕೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ.

ಏ.1ರಂದು ಬೆಳಿಗ್ಗೆ 8ಕ್ಕೆ ಚಾಮಪ್ಪ ಹೂಲಿ ಟ್ರಸ್ಟ್‌ನ ದಿಗಂಬರ ಜೈನ ಬಸದಿಯಿಂದ ಹಡಲಗೇರಿ ರಸ್ತೆಯಲ್ಲಿರುವ ದೇವಸ್ಥಾನದವರೆಗೆ ಕಳಸ, ಪಲ್ಲಕ್ಕಿ ಮತ್ತು ಮಹಾರಥ ಹಗ್ಗದ ಮೆರವಣಿಗೆ ನಡೆಯಲಿದೆ. 9.30ಕ್ಕೆ ರಥದ ಕಳಸ ಸ್ಥಾಪನೆ, ಮಧ್ಯಾಹ್ನ 12ಕ್ಕೆ ಚಡಾವು ಸವಾಲು, ಉತ್ಸವ ಮೂರ್ತಿಗಳ ರಥಾರೋಹಣ, ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 2ಕ್ಕೆ ಧರ್ಮಸಭೆ ಮತ್ತು ಸನ್ಮಾನ ಸಮಾರಂಭ ನಡೆಯಲಿದ್ದು, ಸಾನ್ನಿಧ್ಯವನ್ನು ವಿದ್ಯಾಭೂಷಣ ಮುನಿ ಮಹಾರಾಜರು ವಹಿಸುವರು. ಪದ್ಮಾವತಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಅಭಿನಂದನ ಗೋಗಿ ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ಡಿವೈಎಸ್‌ಪಿ ಬಾಳಪ್ಪ ನಂದಗಾವಿ, ಶಿಕ್ಷಕಪಿ.ಎ.ಕುಲಕರ್ಣಿ, ಬಸರಕೋಡ ದಿಗಂಬರ ಜೈನ ಸಮಾಜದ ಅಧ್ಯಕ್ಷ ದೇವೇಂದ್ರ ಸಗರಿ, ಸಹಕಾರಿ ಇಲಾಖೆ ನಿವೃತ್ತ ಅಧಿಕಾರಿ ಜಿನದತ್ತ ಅಲದಿ, ಉದ್ಯಮಿ ಬಾಹುಬಲಿ ಹೂಲಿ ಪಾಲ್ಗೊಳ್ಳುವರು. ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ನಡೆಯಲಿದೆ.

ಸಂಜೆ 5.30ಕ್ಕೆ ಪದ್ಮಾವತಿ ಅಮ್ಮನವರ ಮಹಾರಥೋತ್ಸವ ನಡೆಯಲಿದೆ.ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪದ್ಮಾವತಿ ಟ್ರಸ್ಟ್ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT