ಮಂಗಳವಾರ, ಸೆಪ್ಟೆಂಬರ್ 21, 2021
29 °C

ಮಹಾರಾಷ್ಟ್ರ ಪಂಚಮಸಾಲಿ ಯುವ ಘಟಕದಿಂದ ಬಿಎಸ್‌ವೈಗೆ ಧಿಕ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಪಂಚಮಸಾಲಿ ಸಮಾಜಕ್ಕೆ ಸೇರಿದ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಸಿದ್ದು ಸವದಿ, ಅರವಿಂದ ಬೆಲ್ಲದ ಮತ್ತು ಆನಂದ ಮಾಮನಿ ಅವರಿಗೆ ಸಚಿವ ಸ್ಥಾನ ತಪ್ಪಿಸಿದ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಹಾರಾಷ್ಟ್ರ ಪಂಚಮಸಾಲಿ ಯುವ ಘಟಕ ಧಿಕ್ಕಾರ ಹಾಕಿದೆ.

ಈ ಸಂಬಂಧ ಸಾಮಾಜಿಕ ಸಾಲತಾಣದಲ್ಲಿ ಮಹಾರಾಷ್ಟ್ರ ಪಂಚಮಸಾಲಿ ಯುವ ಘಟಕದ ಮುಖಂಡ ಹೇಮಂತ ಪಾಟೀಲ ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಂಚಮಸಾಲಿಗಳಿಗೆ 2 ಎ ಮೀಸಲಾತಿ ಕೊಡದೇ ಮೋಸ ಮಾಡಿದ, ಸಿಎಂ ಸ್ಥಾನ ತಪ್ಪಿಸಿದ ಬಿಎಸ್‌ವೈ ಅವರಿಗೆ ಪಂಚಮ ಸಾಲಿ ಸಮಾಜದಿಂದ ಧಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು