ವಿಜಯಪುರ: ಶಿಕ್ಷಣ, ವಿದ್ಯುತ್, ಆರೋಗ್ಯ, ನೀರು ಉಚಿತವಾಗಿ ನೀಡುವ ಮೂಲಕ ದೇಶದ ಗಮನ ಸೆಳೆದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಜನಪ್ರಿಯ ಕಾರ್ಯಕ್ರಮ ಗಮನಿಸಿ ರಾಜ್ಯದ ಮತದಾರರು ಆಮ್ ಆದ್ಮಿ ಪಕ್ಷದ ಕಡೆಗೆ ಗಮನ ಹರಿಸುತ್ತಿದ್ದಾರೆ ಎಂದು ವಿಜಯಪುರ ನಗರ ಮತಕ್ಷೇತ್ರದ ಅಭ್ಯರ್ಥಿ ಹಾಸಿಂಪೀರ ವಾಲಿಕಾರ ಹೇಳಿದರು.
ನಗರದ ಕನಕದಾಸ ಬಡಾವಣೆಯಲ್ಲಿ ಶುಕ್ರವಾರ ಪಾದಯಾತ್ರೆಯ ಮೂಲಕ ಮನೆ ಮನೆಗೆ ಕರಪತ್ರ ವಿತರಿಸಿ ಮತಯಾಚನೆ ಮಾಡಿದರು.
ವಿಜಯಪುರ ನಗರ ಸಾಮರಸ್ಯ, ಇತಿಹಾಸ ಹೊಂದಿರುವ ಪ್ರಸಿದ್ಧ ನಗರ. ಎಲ್ಲ ಮತದಾರರು ಭಯಭೀತರಾಗದೆ ಮತದಾನದಲ್ಲಿ ಭಾಗವಹಿಸಿ ನನ್ನನ್ನು ಆಯ್ಕೆಮಾಡಬೇಕು. ವಿದ್ಯಾವಂತ ಹಾಗೂ ಬುದ್ಧಿವಂತ ಮತದಾರರು ವಿಜಯಪುರ ನಗರ ಮತಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷ ಗೆಲ್ಲಿಸುವ ಮೂಲಕ ಜಾತಿಯ ಹಾಗೂ ಭಯದ ವಾತಾವರಣ ನಿರ್ಮಿಸುವವರನ್ನು ಸೋಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.
ಸರ್ವಾನಂದ ಕೂಬರಡ್ಡಿ, ಲಕ್ಷ್ಮಿ ಬಿರಾದಾರ, ಲಕ್ಕಮ್ಮ ಬೆನಕಟ್ಟಿ, ರುದ್ರಮ್ಮ ಸಾಲಿ, ಸಂಗೀತಾ ಮಸೂತಿ, ಕಸ್ತೂರಿ ಸಾರವಾಡ, ಜುಬೇರ ಕೂಡಗಿ, ಹಾಪೀಜ್ ವಾಲಿಕಾರ, ಮುದಸ್ಸರ ವಾಲಿಕಾರ, ಗಂಗಮ್ಮ ರಡ್ದಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.