ನಾಲತವಾಡ: ಸ್ಥಳೀಯ ನೇಕಾರ ಪೇಟೆಯಲ್ಲಿ ಕಳೆದ ಹಲವು ದಿನಗಳಿಂದ ಅಮೃತ್ 2.0 ಕುಡಿಯುವ ನೀರಿನ ಪೈಪ್ಲೈನ್ ಕಾಮಗಾರಿ ಸ್ಥಗಿತಗೊಂಡಿದ್ದು ಪೈಪ್ಲೈನ್ಗೆ ತೋಡಿದ ಹೊಂಡ ಮುಚ್ಚದೇ ಅಪಾಯ ಆಹ್ವಾನಿಸುತ್ತಿದೆ.

ಕಾಮಗಾರಿಯಿಂದಾಗಿ ವಾರ್ಡ್ ನಂ.7ರಲ್ಲಿ 60 ಅಡಿ ಸಿಸಿ ರಸ್ತೆ ಹಾಳಾಗಿದ್ದು, ಜನ ಸಂಚಾರಕ್ಕೆ ತೊಂದರೆಯಾಗಿದೆ. ಪುಟ್ಟ ರಸ್ತೆಯ ಮಧ್ಯದಲ್ಲೇ ಪೈಪ್ ಲೈನ್ಗೆ ಸರ್ಕಾರಿ ಅನುದಾನ ಬಳಸಿಕೊಂಡು ನಿರ್ಮಿಸಿದ ಸಿಸಿ ರಸ್ತೆ ಅಗೆಯಲಾಗಿದೆ. ಉತ್ತಮವಾದ ರಸ್ತೆ ಹಾಳಾಗಿರುವುದಕ್ಕೆ ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದೆ. ಅಗೆದಿರುವ ರಸ್ತೆಯಿಂದ ಹಲವು ಸಂಕಷ್ಟ ಎದುರಾಗಿವೆ. ಈಗಾಲೇ ವೃದ್ಧರು ಬಿದ್ದ ಬಳಿಕ ಆಕ್ರೋಶ ಇನ್ನೂ ವ್ಯಾಪಕವಾಗಿದೆ. ಸಿಸಿ ರಸ್ತೆ ಯಾರು ನಿರ್ಮಿಸುತ್ತಾರೆಂಬ ಪ್ರಶ್ನೆ ಎದುರಾಗಿದೆ.

ಬೇಗ ಪೈಪ್ ಲೈನ್ ಪೂರ್ಣಗೊಳಿಸಿ ತೋಡಿರುವ ಗುಂಡಿಗಳನ್ನು ಮುಚ್ಚಬೇಕು. ಪುನಃ ಹೊಸ ಸಿಸಿ ರಸ್ತೆ ನಿರ್ಮಾಣ ಮಾಡಬೇಕು. ಒಂದು ವೇಳೆ ಸಿಸಿ ರಸ್ತೆ ಅಗೆದ ಭಾಗಕ್ಕೆ ಪ್ಯಾಚ್ ವರ್ಕ್ ಮಾಡಿದರೆ ರಸ್ತೆಯ ಒರಿಜಿನಾಲಿಟಿ ಇರಲ್ಲ. ಪೂರ್ಣ ರಸ್ತೆ ಮಾಡಲೇಬೇಕು. ತಪ್ಪಿದಲ್ಲಿ ಮುಂದೆ ಪೈಪ್ ಅಳವಡಿಕೆ ಕಾಮಗಾರಿಯನ್ನು ನಿವಾಸಿಗಳು ನಿಲ್ಲಿಸಲಾಗುವುದು ಎಂದು ಸಾರ್ವಜನಿಕರು ಹೇಳಿದ್ದಾರೆ.

ಚರಂಡಿ ಸಮಸ್ಯೆ: ಈ ಭಾಗದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ದಾರಿಯಲ್ಲಿ ಹರಿದು ರಸ್ತೆ ಹೊಂಡಮಯವಾಗಿದೆ. ಇದೇ ರೀತಿ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿ ಕೂಡ ಪೈಪ್ಲೈನ್ ಅರ್ಧಂಬರ್ಧ ಕಾಮಗಾರಿಯಿಂದ ಶಾಲಾ ಗೋಡೆ ಕುಸಿಯುವ ಭೀತಿ ಇದ್ದು ಗಮನಿಸಲು ಮಲ್ಲಿಕಾರ್ಜುನ ಸಜ್ಜನ, ಈಶ್ವರ ಕುಂಟೋಜಿ,ಎ.ಎನ್.ಶೀರಿ, ಸಂಗಣ್ಣ ಅಗಸರ,ಸೇಡಜಿ ಮೇಗಲಮನಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.