ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bombay Blood Group | ವಿರಳ ಬಾಂಬೆ ರಕ್ತ ಗುಂಪಿನ ದಾನಿ

ಚಂದ್ರಶೇಖರ ಕೋಳೇಕರ
Published 18 ಫೆಬ್ರುವರಿ 2024, 0:30 IST
Last Updated 18 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ನಿಡಗುಂದಿ (ವಿಜಯಪುರ ಜಿಲ್ಲೆ): ತಾಲ್ಲೂಕಿನ ಯಲಗೂರ ಗ್ರಾಮದ ವಾಹನ ಚಾಲಕ ಮಹಾಂತೇಶ ತುಂಬರಮಟ್ಟಿ (26) ಎಂಬುವರು ವಿಶ್ವದಲ್ಲೇ ವಿರಳವಾದ ಬಾಂಬೆ ರಕ್ತದ ಗುಂಪನ್ನು ಹೊಂದಿದ್ದಾರೆ.

5 ಲಕ್ಷ ಜನರಲ್ಲಿ 10 ಜನರಲ್ಲಿ ಮಾತ್ರ ಈ ರೀತಿ ಬಾಂಬೆ ರಕ್ತ ಇರುತ್ತದೆ. ಈ ಗುಂಪಿನ ರಕ್ತದವರಿಗೆ ಬೇರೆ ಗುಂಪಿನ ರಕ್ತ ಹೊಂದಾಣಿಕೆ ಆಗುವುದಿಲ್ಲ. ಹೀಗಾಗಿ ಈ ಗುಂಪು ಸಿಗುವುದು ಅಪರೂಪ.

ಗೊತ್ತಾಗಿದ್ದು ಹೇಗೆ?

ಒಂದು ವರ್ಷದ ಹಿಂದೆ ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಗೆ ತೆರಳಿ ಸಂಬಂಧಿಕರೊಬ್ಬರಿಗೆ ಮಹಾಂತೇಶ ರಕ್ತದಾನ ಮಾಡಿದ್ದರು. ರಕ್ತ ಪರೀಕ್ಷಿಸಿದ್ದ ವೈದ್ಯರು ‘ನಿಮ್ಮ ರಕ್ತ ವಿಶೇಷವಾಗಿದೆ’ ಎಂದಿದ್ದರು.

‘ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಯಲ್ಲಿ ಈಚೆಗೆ ದಾಖಲಾಗಿದ್ದ 15 ವರ್ಷದ ಬಾಲಕಿಗೆ ಬಾಂಬೆ ರಕ್ತ ಗುಂಪಿನ ರಕ್ತದ ಅವಶ್ಯಕತೆ ಉಂಟಾದಾಗ, ತಕ್ಷಣ ಮಹಾಂತೇಶ ಅವರಿಗೆ ಕರೆ ಮಾಡಲಾಗಿದೆ. ಆಗ ತಕ್ಷಣವೇ ಅವರು ಆಸ್ಪತ್ರೆಗೆ ಬಂದು ರಕ್ತದಾನ ಮಾಡಿದ್ದಾರೆ. ಒಂದು ವೇಳೆ ಬಾಂಬೆ ರಕ್ತ ಗುಂಪಿನ ದಾನಿ ಸಿಕ್ಕಿರದಿದ್ದರೆ, ಆ ಬಾಲಕಿಗೆ ತುಂಬಾ ಕಷ್ಟವಾಗುತಿತ್ತು’ ಎಂದು ಗ್ರಾಮಸ್ಥರು ತಿಳಿಸಿದರು.

ಬಾಂಬೆ ರಕ್ತದ ಗುಂಪು:

ರಕ್ತದಲ್ಲಿ ‘ಎ’, ‘ಬಿ’, ‘ಎಬಿ’ ಮತ್ತು ‘ಒ’ ಎಂಬ ನಾಲ್ಕು ಗುಂಪುಗಳಿವೆ. ‘ಎಚ್ –ಆಂಟಿಜನ್’ ಎಂಬುದು ಎಲ್ಲದರಲ್ಲೂ  ಬಾಂಬೆ ರಕ್ತ ಗುಂಪಿನಲ್ಲಿ ‘ಎಚ್-ಪ್ರತಿಜನಕ’ ಇರುವುದಿಲ್ಲ. ಆದರೆ, ‘ಎಚ್’ ವಿರೋಧಿ ಪ್ರತಿಕಾಯಗಳು ಇರುತ್ತವೆ. ಈ ರಕ್ತವು ‘ಒ’ ರಕ್ತದ ಗುಂಪಿನ ವ್ಯಾಪ್ತಿಯೊಳಗೆ ಬರುತ್ತದೆ. ಆದರೆ, ‘ಒ’ ಗುಂಪಿನ ರಕ್ತದೊಂದಿಗೆ ಹೊಂದಾಣಿಕೆ ಆಗುವುದಿಲ್ಲ. ಹೀಗಾಗಿ ಇದು ತುಂಬಾ ಅಪರೂಪ’ ಎಂದು ಕುಮಾರೇಶ್ವರ ರಕ್ತ ಭಂಡಾರದ ಮುಖ್ಯಸ್ಥ ಡಾ. ಕೇಶವ ಕುಲಕರ್ಣಿ ‘ಪ್ರಜಾವಾಣಿ‘ಗೆ ತಿಳಿಸಿದರು.

ಮಹಾಂತೇಶ ತುಂಬರಮಟ್ಟಿ ಅವರ ದೂರವಾಣಿ ಸಂಖ್ಯೆ: 9901516100

ನನಗೂ ಈಗ ನನ್ನ ಅಪರೂಪದ ರಕ್ತದ ಬಗ್ಗೆ ಅರಿವಾಗಿದೆ. ನನ್ನಂಥೆ ರಕ್ತ ಹೊಂದಿರುವವರ ಕಷ್ಟ ಕಾಲದಲ್ಲಿ ನಾನು ಸದಾ ರಕ್ತದಾನ ಮಾಡಲು ಸಿದ್ಧ

-ಮಹಾಂತೇಶ ತುಂಬರಮಟ್ಟಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT