ವಿಜಯಪುರ: ನಗರದ ವಿಜಯಾ ಟಯರ್ಸ್ ಎದುರುಗಡೆ ಸರ್ವೀಸ್ ರಸ್ತೆಯಲ್ಲಿ ಲಾರಿಯಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗ ದಾಳಿ ನಡೆಸಿ, ₹4,76,310 ಮೌಲ್ಯದ 210 ಕ್ವಿಂಟಲ್ ಅಕ್ಕಿಯನ್ನು ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಆಜೂರ ಗ್ರಾಮದ ಚಾಲಕ ಗಜಾನನ ಮಕಾಳೆ(31), ಗಣೇಶವಾಡಿಯ ಮಾರುತಿ ದೊಡಮನಿ ಮತ್ತು ಬೆಳಗಾವಿಯ ಅಜಾದ್ ನಗರದ ಇಕ್ಬಾಲ್ ತಹಶೀಲ್ದಾರ ಎಂಬುವವರನ್ನು ಬಂಧಿಸಲಾಗಿದೆ.

ಆರೋಪಿಗಳು ಯಾವುದೇ ಲೈಸೆನ್ಸ್ ಪಡೆಯದೇ ವಿಜಯಪುರದಲ್ಲಿರುವ ಎಫ್ಸಿಐ ರೈಲ್ವೆ ಗೂಡ್ಸ್ ಶೆಡ್ಡಿನಿಂದ 426 ಚೀಲ ಅಕ್ಕಿಯನ್ನು ಲಾರಿಯಲ್ಲಿ ಸಾಗಿಸುವಾಗ ದಾಳಿ ನಡೆಸಿ, ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಆಹಾರ ನಿರೀಕ್ಷಕ ವಿಜಯಕುಮಾರ ಗುಮಶೆಟ್ಟಿ, ಸೀತಾರಾಮ ಲಮಾಣಿ ಹಾಗೂ ಆದರ್ಶನಗರ ಠಾಣೆ ಪಿಎಸ್ಐ ಪಿ.ಎಸ್.ಕುಚಬಾಳ, ಸಿಬ್ಬಂದಿ ಆರ್.ಎಸ್.ಮರೆಗುದ್ದಿ, ಪಿ.ಎಸ್.ಆಜೂರ, ಮಸ್ತಾನ ಬಗಲಿ ಜಂಟಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.