ನಾಲತವಾಡ: ಪಟ್ಟಣದಲ್ಲಿ ಭಾನುವಾರ ಆರ್ಎಸ್ಎಸ್ ಶತಮಾನೋತ್ಸವದ ನಿಮಿತ್ತ ನಡೆದ ಪಥ ಸಂಚಲನ ಜನರ ಮೆಚ್ಚುಗೆಗೆ ಪಾತ್ರವಾಯಿತು.

ಹೇಮರೆಡ್ಡಿ ಮಲ್ಲಮ್ಮ ವೃತ್ತದಲ್ಲಿ ಘೋಷ ವಾದ್ಯ ಆರಂಭಗೊಳ್ಳುತ್ತಿದ್ದಂತೆ ಸ್ವಯಂಸೇವಕರು ಪಥಸಂಚಲನ ಆರಂಭಿಸಿದರು. ಭಗವಾಧ್ವಜ ಪೂಜಿಸಿ ಚಾಲನೆ ನೀಡಲಾಯಿತು. ಸ್ವಯಂಸೇವಕರು ಶಿಸ್ತಿನ ನಡಿಗೆ ಗಮನ ಸೆಳೆಯಿತು. ತೆರೆದ ವಾಹನದಲ್ಲಿ ಭಾರತ ಮಾತೆ, ಆರ್ಎಸ್ಎಸ್ ಸಂಘದ ಸಂಸ್ಥಾಪಕ ಡಾ. ಹೆಡಗೇವಾರ, ಗುರೂಜಿ ಅವರ ಭಾವಚಿತ್ರ ಹಾಗೂ ಭಗವಾಧ್ವಜಗಳು ರಾರಾಜಿಸಿದವು.

ಪಟ್ಟಣದೆಲ್ಲೆಡೆ ಅಳವಡಿಸಲಾಗಿದ್ದ ಬ್ಯಾನರ್, ತೋರಣಗಳು ಉತ್ಸವದ ವಾತಾವರಣ ಸೃಷ್ಟಿಸಿದ್ದವು. ವಿವಿಧ ಓಣಿಗಳಲ್ಲಿ ಮನೆಗಳ ಎದುರು ರಂಗೋಲಿ ಬಿಡಿಸಲಾಗಿತ್ತು. ಹೇಮರೆಡ್ಡಿ ಮಲ್ಲಮ್ಮ ವೃತ್ತದಲ್ಲಿ, ಬಸವೇಶ್ವರ ವೃತ್ತದಲ್ಲಿ ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಸೇರಿದಂತೆ ಬಿಜೆಪಿ ಮುಖಂಡರು ಸ್ವಯಂಸೇವಕರ ಮೇಲೆ ಪುಷ್ಪ ವೃಷ್ಟಿ ಮಾಡಿ ಭವ್ಯ ಸ್ವಾಗತ ಕೋರಿದರು. ಗಣವೇಷ ಧರಿಸಿದ್ದ ಚಿಣ್ಣರು ಪಥ ಸಂಚಲನದ ಆಕರ್ಷಣೆ ಹೆಚ್ಚಿಸಿದರು.

ವೀರೇಶ್ವರ ಕಾಲೇಜು ಮೈದಾನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅಮರೇಶ್ವರ ಗಜದಂಡ ಶಿವಾಚಾರ್ಯರು ‘ಕೊರೊನಾ, ನೈಸರ್ಗಿಕ ವಿಕೋಪ ಸಂಭವಿಸಿದಾಗ ಅಲ್ಲಿ ಮೊದಲು ಹಾಜರಿರುವುದು ಆರ್ಎಸ್ಎಸ್ ಸ್ವಯಂಸೇವಕರು. ಸಂಘದ ಅಸಂಖ್ಯಾತ ಸ್ವಯಂಸೇವಕರ ಪ್ರತಿಯೊಂದು ಕಾರ್ಯದಲ್ಲೂ ‘ರಾಷ್ಟ್ರ ಮೊದಲು’ ಎಂಬ ಮನೋಭಾವ ಸರ್ವೋಚ್ಚವಾಗಿರುತ್ತದೆ’ ಎಂದರು.

ಬೌದ್ಧಿಕ ಪ್ರಮುಖ ದಾಮೋದರ ಜೀ, ಡಾ.ರಾಜೇಂದ್ರ ಗಲಗಲಿ ಮಾತನಾಡಿದರು. ಮಹಾಂತಪ್ಪಗೌಡ ಪಾಟೀಲ, ಮುತ್ತು ಸಾಹುಕಾರ ಅಂಗಡಿ, ಮುನ್ನಾಧಣಿ ನಾಡಗೌಡರು, ಕೆಂಚಪ್ಪಣ್ಣ ಬಿರಾದಾರ, ಜಿ. ಮಹಾಂತೇಶ ಗಂಗನಗೌಡರ, ಪಿ.ಜಿ. ಬಿರಾದಾರ, ಚಂದ್ರಶೇಖರ ಗಂಗನಗೌಡರ, ಸಂಗಣ್ಣ ಕುಳಗೇರಿ, ಸಂಗಣ್ಣ ಹಾವರಗಿ, ಗುರುರಾಜ ಅಂಗಡಿ, ಶರಣು ಗಂಗನಗೌಡರ ಇದ್ದರು. ಮುದ್ದೇಬಿಹಾಳ, ತಾಳಿಕೋಟಿ, ಬಸವನಬಾಗೇವಾಡಿ, ವಿಜಯಪುರ ಪೊಲೀಸ್ ಸಿಬ್ಬಂದಿ ಬಿಗಿ ಭದ್ರತೆ ಒದಗಿಸಿದ್ದರು.

ಪಟ್ಟಣದ ವಿವಿಧ ಪ್ರಮುಖ ರಸ್ತೆಗಳಲ್ಲಿ ಸಂಚಾರ ಗಮನ ಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.