ಮುದ್ದೇಬಿಹಾಳ : ತಾಲ್ಲೂಕಿನ ಕುಂಟೋಜಿಯ ಬಸವಣ್ಣ, ಸಂಗಮೇಶ್ವರ ನೂತನ ತೇರಿಗೆ ಅಳವಡಿಸಲು ಕಾಶಿಯ ರುದ್ರಾಕ್ಷಿಗಳಿಂದ ತಯಾರಿಸಿದ ಎರಡು ಬೃಹತ್ ರುದ್ರಾಕ್ಷಿ ಮಾಲೆಗಳನ್ನು ಮಂಗಳವಾರ ಗದಗ ಜಿಲ್ಲೆ ನರಗುಂದ ತಾಲೂಕಿನ ಇಬ್ರಾಹಿಂಪುರದಲ್ಲಿರುವ ಶಿವಾನಂದ ಸ್ವಾಮೀಜಿಯವರ ಮಠದಲ್ಲಿ ಕುಂಟೋಜಿ ಬಸವೇಶ್ವರ ದೇವಸ್ಥಾನ ಕಮಿಟಿ ಪದಾಧಿಕಾರಿಗಳು, ಊರಿನ ದೈವಮಂಡಳಿಯ ನಿಯೋಗಕ್ಕೆ ಹಸ್ತಾಂತರಿಸಲಾಯಿತು.

ಅಬ್ಬಿಹಾಳ ಗ್ರಾಮಸ್ಥರು ಮತ್ತು ಮುದ್ದೇಬಿಹಾಳ ತಾಲ್ಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕ ಶರಣು ಹಿರೇಮಠ ಅವರು ತಲಾ ಒಂದು ರುದ್ರಾಕ್ಷಿ ಮಾಲೆಯನ್ನು ಭಕ್ತಿ ಕಾಣಿಕೆಯಾಗಿ ದೇವಸ್ಥಾನಕ್ಕೆ ನೀಡಿದ್ದಾರೆ.

ಒಂದು ಬೃಹತ್ ಮಾಲೆಯನ್ನು ಕೋಟಿ ರುದ್ರಾಕ್ಷಿ ಮಣಿಗಳಿಂದ ತಯಾರಿಸಲಾಗಿದ್ದು ಶಿವಭಕ್ತರು ಧರಿಸುವ ಪವಿತ್ರ ಮಣಿಯಾಗಿರುವುದರಿಂದ ಈ ಮಾಲೆಗೆ ವಿಶೇಷ ಮಹತ್ವ ಇದೆ ಎಂದು ಕಮಿಟಿಯ ಅಧ್ಯಕ್ಷ ಗುರುಲಿಂಗಪ್ಪ ಸುಲ್ಲಳ್ಳಿ ತಿಳಿಸಿದರು.

ಮಾಜಿ ಸೈನಿಕ ನಾಗಲಿಂಗಯ್ಯ ಮಠ, ಈರಯ್ಯ ಶಂಕೀನಮಠ, ಶರಣು ಹಿರೇಮಠ, ಆನಂದ ಗಸ್ತಿಗಾರ, ರಾಮಣ್ಣ ಹುಲಗಣ್ಣಿ, ಮಲಕಾಜಿ ಹೆಬ್ಬಾಳ, ಬಸಲಿಂಗಪ್ಪಗೌಡ ಬಿರಾದಾರ, ಬಸವರಾಜ ಕೋರಿ, ಗುರು ಮಡಿವಾಳರ, ಸಂಗಮೇಶ ಯರಝರಿ, ಬಸವರಾಜ ಹುಲಗಣ್ಣಿ, ಮುತ್ತು ಮದರಿ, ಸಂಗಮೇಶ ಒಣರೊಟ್ಟಿ, ಹಾಜಿ ನಾಯ್ಕೋಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.