ವಿಜಯಪುರ: ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಬೋರ್ಡ್ ಸೌಲಭ್ಯ ಒದಗಿಸುವ ಮೂಲಕ ಡಿಜಿಟಲ್ ಟಚ್ ನೀಡಲಾಗುತ್ತಿದೆ ಎಂದು ಬಂಜಾರ ಕಸೂತಿ ಕೇಂದ್ರದ ಸಂಸ್ಥಾಪಕಿ ಆಶಾ ಎಂ.ಪಾಟೀಲ ಹೇಳಿದರು.

ಅರಕೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಎಕಸ್ ಸಂಸ್ಥೆಯಿಂದ ಸಿ.ಎಸ್.ಆರ್ ಅನುದಾನದಡಿ ಮಂಜೂರಾಗಿರುವ ಸ್ಮಾರ್ಟ್ ಬೋರ್ಡ್ ಉದ್ಘಾಟನೆ ಮತ್ತು ದಾಸ್ ಟೆಕ್ನಾಲಜಿಸ್ ಕಂಪನಿಯಿಂದ ಸಿ.ಎಸ್.ಆರ್ ಅನುದಾನದಡಿ ಅರಕೇರಿ ಎಲ್.ಟಿ-3ರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರೀಡಾ ಸಲಕರಣೆ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಮಹಾನಗರಗಳ ಖಾಸಗಿ ಶಾಲೆಗಳಲ್ಲಿ ಸಿಗುವ ಅತ್ಯಾಧುನಿಕ ಸೌಲಭ್ಯಗಳನ್ನು ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಒದಗಿಸಲು ಸಚಿವ ಎಂ. ಬಿ. ಪಾಟೀಲ ಅವರು ಸಿ.ಎಸ್.ಆರ್ ಅನುದಾನವನ್ನು ಬಳಸಿ ಸ್ಮಾರ್ಡ್ ಬೋರ್ಡ್ ಸೌಲಭ್ಯವನ್ನು ಒದಗಿಸಲು ಕ್ರಮಕೈಗೊಂಡಿದ್ದಾರೆ ಎಂದರು.

ಬಬಲೇಶ್ವರ ಮತಕ್ಷೇತ್ರದ ಸರ್ಕಾರಿ ಶಾಲೆಗಳಲ್ಲಿ ಕಳೆದ ವರ್ಷ 25 ಮತ್ತು ಈ ವರ್ಷ 25 ಸ್ಮಾರ್ಟ್ ಕ್ಲಾಸ್ ಸೌಲಭ್ಯ ಒದಗಿಸಲಾಗಿದೆ. ಇದರಿಂದಾಗಿ ಗ್ರಾಮೀಣ ಭಾಗದ ಮಕ್ಕಳು ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಮತ್ತಿತರ ವಿಷಯಗಳನ್ನು ದೃಶ್ಯಮಾಧ್ಯಮ ಮೂಲಕ ಸರಳವಾಗಿ ಕಲಿಯಬಹುದಾಗಿದೆ. ಮಕ್ಕಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಶಿಕ್ಷಕರು ಕೂಡಾ ಸ್ಮಾರ್ಟ್ ಕ್ಕಾಸ್ ಬಗ್ಗೆ ಸಂಪೂರ್ಣ ಬಗ್ಗೆ ಮಾಹಿತಿ ಪಡೆದು ಮಕ್ಕಳಿಗೆ ಗುಣಮಟ್ಟದ ಭೋದನೆ ಮಾಡಬೇಕು. ಅಲ್ಲದೇ, ಮಕ್ಕಳ ಹಾಜರಾತಿ ಬಗ್ಗೆ ಗಮನ ಹರಿಸಬೇಕು. ಅದರ ಜೊತೆಗೆ ಮೊಬೈಲ್ ಗಿಳಿನಿಂದ ಹೊರಬರಲು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅರ್ಜುನ ರಾಠೋಡ ಮಾತನಾಡಿ, ಸಚಿವ ಎಂ. ಬಿ. ಪಾಟೀಲ ಅವರು ಬಸವ ನಾಡಿನಲ್ಲಿ ಈಗಾಗಲೇ ಜಲಕ್ರಾಂತಿ ಮಾಡಿದ್ದಾರೆ. ಈಗ ಶಿಕ್ಷಣ ಕ್ರಾಂತಿ ಮಾಡುತ್ತಿದ್ದು, ನಮ್ಮ ಗ್ರಾಮೀಣ ಭಾಗದ ಬಡ ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸಲು ಸ್ಮಾರ್ಟ್ ಕ್ಲಾಸ್ ಸೌಲಭ್ಯ ಒದಗಿಸುವ ಮೂಲಕ ನಗರ ಮತ್ತು ಗ್ರಾಮೀಣ ಭಾಗದ ಮಧ್ಯ ಇರುವ ಶಿಕ್ಷಣದ ಗುಣಮಟ್ಟದ ಅಂತರವನ್ನು ನಿವಾರಿಸಿದ್ದಾರೆ. ನಮ್ಮ ಗ್ರಾಮೀಣ ಪ್ರತಿಭೆಗಳಿಗೆ ಇದು ವರದಾನವಾಗಿದ್ದು. ಮುಂಬರುವ ದಿನಗಳಲ್ಲಿ ನಮ್ಮ ವಿದ್ಯಾರ್ಥಿಗಳು ಮಹಾನಗರಗಳ ಕಾರ್ಪೋರೇಟ್ ಶಾಲೆಗಳ ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಸಾಧನೆ ಮಾಡಲಿದ್ದಾರೆ ಎಂದು ತಿಳಿಸಿದರು.

ಅಖಿಲಾ ಬಸನಗೌಡ ಪಾಟೀಲ, ಗ್ರಾ. ಪಂ. ಅಧ್ಯಕ್ಷ ರಂಗಾ ಬರಕಡೆ, ಎಸ್ಡಿಎಂಸಿ ಅಧ್ಯಕ್ಷ ಸಿದ್ದಣ್ಣ ಶಿರಾಳಶೆಟ್ಟಿ, ಗ್ರಾ. ಪಂ ಮಾಜಿ ಅಧ್ಯಕ್ಷ ಪೀರ ಪಟೇಲ ಪಾಟೀಲ, ಮುಖಂಡರಾದ ಶ್ರೀಶೈಲ ದಳವಾಯಿ, ಪ್ರಕಾಶ ರಾಠೋಡ, ತುಕಾರಾಮ ಮೋಹಿತೆ, ಅಶೋಕ ರಾಠೋಡ, ಮದುಗೌಡ ಪಾಟೀಲ, ಗೋವಿಂದ ರಾಠೋಡ, ಸುಂದರಪಾಲ ರಾಠೋಡ, ತುಕಾರಾಮ ರಾಠೋಡ, ಶೈಲಜಾ ರಾಠೋಡ, ವಿಜಯಪುರ ಗ್ರಾಮೀಣ ಬಿ.ಇ.ಓ ಪ್ರಮೋದಿನಿ ಬಳೋಲಮಟ್ಟಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.