ಭಾನುವಾರ, ನವೆಂಬರ್ 29, 2020
23 °C

ಶ್ರೀಸಿದ್ಧೇಶ್ವರ ಬ್ಯಾಂಕ್‌: ಬಗಲಿ ಅಧ್ಯಕ್ಷ, ಬೋರಮ್ಮ ಉಪಾಧ್ಯಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜಿಲ್ಲೆಯ ಪ್ರತಿಷ್ಠಿತ ಶ್ರೀ ಸಿದ್ಧೇಶ್ವರ ಸಹಕಾರ ಬ್ಯಾಂಕಿಗೆ ಸತತ ನಾಲ್ಕು ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿರುವ ಪ್ರಕಾಶ ಬಗಲಿ ಅಧ್ಯಕ್ಷರಾಗಿ, ಸತತ ಮೂರು ಬಾರಿ ನಿರ್ದೇಶಕರಾಗಿ ಆಯ್ಕೆಗೊಂಡ ಬೋರಮ್ಮ ಬಾಬು ಗೊಬ್ಬೂರ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಬ್ಯಾಂಕಿನ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಮಹಿಳಾ ಉಪಾಧ್ಯಕ್ಷೆ ಎಂಬುವ ಹಿರಿಮೆಗೆ ಬೋರಮ್ಮ ಪಾತ್ರರಾದರು.

ಶಿವಪ್ಪ ಬಗಲಿ ಅವರು ಈ ಹಿಂದೆ ಸಿದ್ಧೇಶ್ವರ ಸಂಸ್ಥೆ ನಿರ್ದೇಶಕರಾಗಿ ಹಾಗೂ ವಿಜಯಪುರ ನಗರಸಭೆ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

ಅಧ್ಯಕ್ಷರಾದ ಪ್ರಕಾಶ ಶಿವಪ್ಪ ಬಗಲಿ ಅವರಿಗೆ ನಿರ್ದೇಶಕರಾದ ಜಿ.ಎಸ್.ಗಚ್ಚಿನಮಠ ಸೂಚಕರಾಗಿ ಹಾಗೂ ವಿ.ಆರ್. ಅವರಂಗಬಾದ ಅನುಮೋದಕರಾಗಿ ಪಾಲ್ಗೊಂಡರು. ‌

ಉಪಾಧ್ಯಕ್ಷರಾದ ಬೋರಮ್ಮ ಬಾಬು ಗೊಬ್ಬೂರ ಅವರಿಗೆ ನಿರ್ದೇಶಕರಾದ ಎಸ್.ಎಸ್.ಭೋವಿ ಹಾಗೂ ಅನುಮೋದಕರಾಗಿ ಆರ್.ಎಚ್.ಬಿದನೂರ ಪಾಲ್ಗೊಂಡರು.

ಅವಿರೋಧವಾಗಿ ಆಯ್ಕೆಗೊಂಡ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಅವರ ಅಭಿಮಾನಿಗಳು ಅಭಿನಂದಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

2020-2025 ನೇ ಸಾಲಿನ ಆಡಳಿತ ಮಂಡಳಿಗೆ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಹಳೇ ಪೆನಲ್ ಜಯಭೇರಿ ಹೊಂದಿತ್ತು. ಚುನಾವಣಾ ಅಧಿಕಾರಿ ಪಿ.ಬಿ.ಕಾಳಗಿ ಕಾರ್ಯನಿರ್ವಹಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು