ಇಂಡಿ: ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮು ಆರಂಭವಾದರೂ ಇದುವರೆಗೂ ತಾಲ್ಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ ಬೆಲೆ ನಿಗದಿ ಮಾಡದೇ ಇರುವುದರಿಂದ ರೈತರು ಪಕ್ಕದ ಮಹಾರಾಷ್ಟ್ರ ಕಾರ್ಖಾನೆಗಳತ್ತ ಮುಖ ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಕಬ್ಬು ಬೆಳೆದಿರುವ ಇಂಡಿ ತಾಲ್ಲೂಕಿನಲ್ಲಿ ಹಿರೇಬೇವನೂರ ಸಕ್ಕರೆ ಕಾರ್ಖಾನೆ, ಭೀಮಾಶಂಕರ ಸಹಕಾರ ಸಕ್ಕರೆ ಕಾರ್ಖಾನೆ ಮತ್ತು ನಾದ ಸಕ್ಕರೆ ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ, ಕಳೆದ ಮೂರು ವರ್ಷದಿಂದ ಪ್ರತಿ ಟನ್ ಕಬ್ಬಿಗೆ ₹ 2700ಕ್ಕೂ ಹೆಚ್ಚು ದರ ನೀಡುತ್ತಿಲ್ಲ. ಹೀಗಾಗಿ ಹೆಚ್ಚಿನ ಬೆಲೆ ನೀಡುತ್ತಿರುವ ಮಹಾರಾಷ್ಟ್ರದ ಕಾರ್ಖಾನೆಗಳಿಗೆ ಕಬ್ಬು ಸಾಗಿಸಲು ರೈತರು ಮುಂದಾಗಿದ್ದಾರೆ.

‘ಕಬ್ಬು ಕಟಾವು ಗ್ಯಾಂಗ್ನವರು ಹೆಚ್ಚಿನ ಹಣ ಬೇಡುತ್ತಾರೆ. ಜೊತೆಗೆ ಕೋಳಿ ಊಟ, ಮದ್ಯ ನೀಡಿದಾಗ ಮಾತ್ರ ಕಬ್ಬು ಕಟಾವು ಮಾಡುತ್ತಾರೆ. ಆದರೆ, ಮಹಾರಾಷ್ಟ್ರದ ಕಾರ್ಖಾನೆಗಳು ಕಬ್ಬು ಕಟಾವು ಟೋಳಿ ಹಣ ಕೇಳುವದಿಲ್ಲ ಮತ್ತು ಕೆಲವು ಕಾರ್ಖಾನೆಯವರು ಯಂತ್ರ ಬಳಸಿ ಕಬ್ಬು ಕಟಾವು ಮಾಡುತ್ತಾರೆ. ಹೀಗಾಗಿ ಕಟಾವು ಹಣ ಕೂಡ ಉಳಿಯುತ್ತದೆ’ ಎಂಬುದು ರೈತರ ಅಭಿಪ್ರಾಯ.

ಮಹಾರಾಷ್ಟ್ರದಲ್ಲಿ ಕಬ್ಬು ಹಂಗಾವು ಆರಂಭವಾಗಿದ್ದು ನ. 1ರಿಂದ ಕಾರ್ಖಾನೆಗಳು ಕಬ್ಬು ನುರಿಸಲಿವೆ. ಈ ಬಾರಿ ಸೋಲಾಪುರದ ಸಿದ್ದೇಶ್ವರ, ಲೋಕಮಂಗಲ, ಸಿದ್ದನಾಥ ಮತ್ತು ಅಕ್ಕಲಕೋಟದ ಜೈನ ಸಕ್ಕರೆ ಕಾರ್ಖಾನೆ ಸೇರಿದಂತೆ ಇತರೆ ಕಾರ್ಖಾನೆಗಳು ₹3,500 ಬೆಲೆ ನಿಗದಿ ಪಡಿಸಲು ಯೋಚಿಸುತ್ತಿವೆ. ಯಾವುದೇ ಸಾಗಣೆ ವೆಚ್ಚ ಪಡೆಯದೆ ಕರ್ನಾಟಕದ ಕಬ್ಬು ಖರೀದಿಸಲು ಮುಂದಾಗಿವೆ. ಅದಲ್ಲದೆ, ಮಹಾರಾಷ್ಟ್ರದ ಬಹುತೇಕ ಕಾರ್ಖಾನೆಗಳು ಎಥನಾಲ್ ಘಟಕ ಹೊಂದಿದ್ದು, ಕಬ್ಬು ಖರೀದಿಗೆ ಪೈಪೋಟಿ ಒಡ್ಡುತ್ತಿವೆ. ಒಂದು ವೇಳೆ ಮಹಾರಾಷ್ಟ್ರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಸಾಗಣೆಯಾದರೆ ರಾಜ್ಯ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ನಷ್ಟವಾಗಲಿದೆ.

ಪ್ರಸ್ತುತ ಟನ್ ಕಬ್ಬಿಗೆ ₹3,550 ಪಾವತಿಸಬೇಕೆಂದು ಕೇಂದ್ರ ಸರ್ಕಾರ ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ (ಎಫ್ಆರ್ಪಿ) ನಿಗದಿ ಮಾಡಿದೆ. ಪ್ರತಿ ಟನ್ ಕಬ್ಬಿಗೆ ಶೇ 10.25 ಇಳುವರಿ ಆಧರಿಸಿ ₹3,550 ನೀಡಬೇಕೆಂದು ಕೇಂದ್ರ ಸರ್ಕಾರ ಸ್ಪಷ್ಟ ನಿರ್ದೇಶನ ನೀಡಿದೆ. ಆದರೆ, ತಾಲ್ಲೂಕಿನ ಸಕ್ಕರೆ ಕಾರ್ಖಾನೆಗಳು ಕೇಂದ್ರ ಸರ್ಕಾರದ ಸೂಚನೆ ಪಾಲಿಸದೆ ಕಬ್ಬು ಹಂಗಾಮ ಆರಂಭಿಸುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರ ಯಾವುದೇ ಲಾಬಿಗೆ ಮಣಿಯದೆ ಕಾಖಾನೆಗಳಿಗೆ ಮೂಗುದಾರ ಹಾಕಬೇಕು. ಮಹಾರಾಷ್ಟ್ರ ಮಾದರಿಯಲ್ಲಿ ಕಬ್ಬಿನ ಬೆಲೆ ನಿಗದಿ ಮಾಡಬೇಕು. ಕಬ್ಬು ಪೂರೈಸಿದ 15 ದಿನಗಳೊಳಗಾಗಿ ಬಿಲ್ ಪಾವತಿಸಬೇಕು
ಎಸ್.ಬಿ.ಕಂಬೋಗಿ ಜಿಲ್ಲಾ ಅಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.