ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತನೈರಾ’ ಸೀರೆ ಮೇಳ ಆರಂಭ

₹1 ಸಾವಿರದಿಂದ ₹1.76 ಲಕ್ಷ ಮೊತ್ತದ ಆಕರ್ಷಕ ವಿನ್ಯಾಸದ ಸೀರೆಗಳು
Last Updated 23 ಜನವರಿ 2021, 13:45 IST
ಅಕ್ಷರ ಗಾತ್ರ

ವಿಜಯಪುರ: ಟಾಟಾ ಕಂಪನಿಯ ಯುವ ಬ್ರ್ಯಾಂಡ್ ಆಗಿರುವ ‘ತನೈರಾ’ ಕರಕುಶಲ ಸೀರೆ ಮತ್ತು ಲೆಹಾಂಗಾಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ವಿಜಯಪುರ ತಹಶೀಲ್ದಾರ್‌ ಮೋಹನ ಕುಮಾರಿ ಶನಿವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗುಣಮಟ್ಟದ ವಿವಿಧ ಉತ್ಪನ್ನಗಳಿಗೆ ಪ್ರಸಿದ್ಧವಾಗಿರುವ ಟಾಟಾ ಕಂಪನಿಯ ತನೈರಾ ಬ್ರ್ಯಾಂಡ್‌ ಸೀರೆಗಳು ವಿಶ್ವ ಪ್ರಸಿದ್ಧವಾಗಿವೆ. ಇಂತಹ ಸೀರೆಗಳು ಇದೀಗ ವಿಜಯಪುರ ನಗರದಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಖುಷಿಯ ಸಂಗತಿಯಾಗಿದೆ ಎಂದರು.

ಒಂದೇ ಮಳಿಗೆಯಲ್ಲಿ ದೇಶ, ವಿದೇಶದ ವೈವಿಧ್ಯಮಯ ಬ್ರ್ಯಾಂಡ್‌ಗಳ ಸೀರೆಗಳು ಲಭಿಸುವುದಿಲ್ಲ. ಆದರೆ, ಟಾಟಾ ತನೈರಾ ಮಳಿಗೆಗಳಲ್ಲಿ ಮಾತ್ರ ಒಂದೇ ಸೂರಿನಡಿ ಲಭಿಸುತ್ತವೆ. ಇಂತಹ ಮಳಿಗೆ ವಿಜಯಪುರದಲ್ಲಿ ಆದಷ್ಟು ಶೀಘ್ರ ಆರಂಭವಾಗುವ ಮೂಲಕ ಈ ಭಾಗದ ಯುವತಿಯರು, ಮಹಿಳೆಯರಿಗೆ ಲಭಿಸುವಂತಾಗಲಿ ಎಂದು ಆಶಿಸಿದರು.

ಜ.26ರ ವರೆಗೆ ಮೇಳ

ಸಿದ್ದೇಶ್ವರ ಗುಡಿ ಎದುರಿನ ಗುರುಕುಲ ರಸ್ತೆಯ ಕಾಮಧೇನು ಮಾಲ್‌ನಲ್ಲಿರುವ ‘ತನಿಷ್ಕ್‌’ ಚಿನ್ನಾಭರಣ ಶೋರೂಂನಲ್ಲಿ ಶನಿವಾರದಿಂದ ಆರಂಭವಾಗಿರುವ ಸೀರೆ ಮೇಳವು ಜ.26ರ ವರೆಗೆ ನಡೆಯಲಿದೆ

ತನೈರ ಸೀರೆ ಪ್ರದರ್ಶನ ಮತ್ತು ಮಾರಾಟದಲ್ಲಿ ಆಯ್ದ ಶ್ರೇಣಿಯ ಉತ್ಪನ್ನಗಳಿಗೆ ಶೇ 30ರವರೆಗೆ ರಿಯಾಯಿತಿ ನೀಡಲಾದೆ.

ತನೈರದತಸ್ವಿ, ಮಹೇಶ್ವರಿ, ತುಷಾರಾ, ಬನಾರಸ್‌, ಚಂದೇರಿ, ಮಹೇಶ್ವರಿ, ಬಂಗಾಳ, ಬಾಗಲ್ಪುರ, ಕಾಂಜೀವರಂ ಸೇರಿದಂತೆ ಕೈಯಿಂದ ನೇಯ್ದಿರುವ ದಕ್ಷಿಣ ಭಾರತದ ಪ್ರಸಿದ್ಧ ಬ್ರ್ಯಾಂಡ್‌ಗಳ 68 ಬಗೆಯ 2 ಸಾವಿರ ಸೀರೆಗಳು ವಿಶೇಷ ಪ್ರದರ್ಶನದಲ್ಲಿವೆ.

ಲಿನೆನ್‌ನಿಂದ ತಯಾರಿಸಿದ ಆಕರ್ಷಕ ಮತ್ತು ಸೊಗಸಾದ ಕುರ್ತಾ ಸೆಟ್‌ಗಳು, ಕೈಮಗ್ಗದ ಶುದ್ಧ ರೇಷ್ಮೆ ಸೀರೆಗಳು, ಮೃದು ರೇಷ್ಮೆ ಬಣ್ಣದ ಸೀರೆಗಳು, ಡ್ರೆಸ್‌ ಮೆಟೀರಿಯಲ್ಸ್‌, ಸಿದ್ಧ ರವಿಕೆಗಳು, ಮುಖಗವಸು, ಸ್ಟೋಲ್‌ ಹಾಗೂ ದುಪಟ್ಟಾಗಳು ಪ್ರದರ್ಶನ, ಮಾರಾಟಕ್ಕೆ ಇಡಲಾಗಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿವೆ.

₹ 1 ಸಾವಿರದಿಂದ ₹ 1.76 ಲಕ್ಷ ಮೊತ್ತದ ಸೀರೆಗಳು ಪ್ರದರ್ಶನದಲ್ಲಿ ಮಹಿಳೆಯರನ್ನು ಆಕರ್ಷಿಸುತ್ತಿವೆ.

ಪ್ರೀತಿ ವಿಜಗೌಡ ಪಾಟೀಲ, ಎಪಿಎಂಸಿ ಪಿಐಎಸ್‌ ಪ್ರೇಮಾ ಕೂಚಬಾಳ, ಡಾ.ಜ್ಯೋತಿ ಕೊರಬು, ಮಹಾನಗರ ಪಾಲಿಕೆ ಮಾಜಿ ಮೇಯರ್‌ ಅನಿಸ್‌ ಫಾತಿಮಾ ಬಕ್ಷಿ,ತನೈರದ ಪ್ರಮುಖರಾದ ಶ್ರೀಕಾಂತ ಶಿರಡೋಣ, ರಮೇಶ ಶಿರಡೋಣ, ಬಿ.ಎಸ್‌.ಶಿರಡೋಣ, ಸಿದ್ದು ರೇವಿ, ವಿಠಲ ತೇಲಿ, ಅಮಿತ್‌ ಕುಮಾರ್ ಐನಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT