ಗುರುವಾರ , ಜುಲೈ 7, 2022
23 °C
ಎತ್ತಿನಬಂಡಿಗಳಲ್ಲಿ ಹಂದರ ತಪ್ಪಲ ಮೆರವಣಿಗೆ

ಕೊಲ್ಹಾರದ ತೆರಪಿ ಯಲ್ಲಮ್ಮದೇವಿ ಜಾತ್ರೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಲ್ಹಾರ: ಕೊಲ್ಹಾರ ಪಟ್ಡಣದಲ್ಲಿ ತೆರಪಿ ಯಲ್ಲಮ್ಮದೇವಿ ಜಾತ್ರೋತ್ಸವ ಅಂಗವಾಗಿ ಮೊದಲ ದಿನ ಭಕ್ತರು ತಮ್ಮ ಎಂಬತ್ತಕ್ಕೂ ಹೆಚ್ಚಿನ ಎತ್ತಿನ ಬಂಡಿಗಳಲ್ಲಿ ದೇವಸ್ಥಾನಕ್ಕೆ ಹಂದರ ತಪ್ಪಲುಗಳನ್ನು ತಂದು ಸಮರ್ಪಿಸಿದರು.

ದೇವಸ್ಥಾನದ ಉಪಾಸಕ ಸಂಗಪ್ಪ ಬಾಟಿಯವರ ನೇತೃತ್ವದಲ್ಲಿ ಡೊಳ್ಳಿನ ಮೇಳದೊಂದಿಗೆ ಹಂದರ ತಪ್ಪಲಗಳಾದ ತೆಂಗಿನಗರಿ, ನೀರಲ, ಬೋಚಿ, ಬಾಳೆ ತಪ್ಪಲಗಳನ್ನು ಭಕ್ತರು ಊರಿನ ಪ್ರಮುಖ ಬೀದಿಗಳಲ್ಲಿ‌ ಮೆರವಣಿಗೆ ಮುಖಾಂತರ ಸಾಗಿ ಯಲ್ಲಮ್ಮದೇವಿ ದೇವಸ್ಥಾನಕ್ಕೆ ತಂದರು.

ಸಂಜೆ ಅನ್ನಸಂತರ್ಪಣೆ ಹಾಗೂ ರಾತ್ರಿ ಸಂಗಪ್ಪ ಅಂಬಿಗೇರ ಇವರಿಂದ ರೇಣುಕಾ ಯಲ್ಲಮ್ಮ ಬಯಲಾಟ ಪ್ರದರ್ಶನ ಜರುಗಿತು. ಈ ವೇಳೆ ದೇವಸ್ಥಾನ ಕಮಿಟಿ ಅಧ್ಯಕ್ಷ ಮಲ್ಲಿಕಾರ್ಜುನ ಬೆಳ್ಳುಬ್ಬಿ, ಮುಖಂಡರಾದ ಹುಚ್ಚಪ್ಪ ಬಾಟಿ, ಪುಂಡಲೀಕ ಬಾಟಿ, ಮಾಜಿ ಪ.ಪಂ ಅಧ್ಯಕ್ಷರುಗಳಾದ ಕಲ್ಲಪ್ಪ ಸೊನ್ನದ, ವಿರೂಪಾಕ್ಷಿ ಕೊಲಕಾರ, ರೈತ ಮುಖಂಡರಾದ ಮಳೆಪ್ಪ ಬರಗಿ, ರಮೇಶ ಬಾಲಗೊಂಡ, ಪರಮಾನಂದ ಬರಗಿ ಹಾಗೂ ಹಲವರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.