ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಮಟ್ಟಿ | ಗಾಂಜಾ ಮಾರಾಟ: ಮೂವರ ಬಂಧನ

Published 31 ಡಿಸೆಂಬರ್ 2023, 15:31 IST
Last Updated 31 ಡಿಸೆಂಬರ್ 2023, 15:31 IST
ಅಕ್ಷರ ಗಾತ್ರ

ಆಲಮಟ್ಟಿ (ವಿಜಯಪುರ ಜಿಲ್ಲೆ): ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ನಿಡಗುಂದಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಬಂಧಿತರಿಂದ ₹8,190 ಮೌಲ್ಯದ 819 ಗ್ರಾಂ ಗಾಂಜಾ, ಬೈಕ್ ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ಧಾರವಾಡ ಜಿಲ್ಲೆಯ ವೆಂಕಟಪುರ ಗ್ರಾಮದ ಹಜರತಅಲಿ ಸಿಕಂದರ್ ಮುಲ್ಲಾ, ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಗಂಬ್ಯಾಪುರ ಗ್ರಾಮದ ಬಾಬಾಜಾನ್ ಅಲ್ಲಾಭಕ್ಷ ಕಿಲ್ಲೆದಾರ್ ಹಾಗೂ ನಿಡಗುಂದಿ ತಾಲ್ಲೂಕಿನ ಕಾಶೀನಕುಂಟಿ ಗ್ರಾಮದ ಉಹಲಮಹ್ಮದ್ ನಬೀಸಾಬ ಚಪ್ಪರಬಂದ್ ಬಂಧಿತರು.

ಖಚಿತ ಮಾಹಿತಿಯ ಮೇರೆಗೆ ಇಲ್ಲಿನ ಬೇನಾಳ ಬ್ರಿಜ್ ಹತ್ತಿರದ ಜಾಕ್‌ವೆಲ್ ಬಳಿ ನಿಡಗುಂದಿ ತಹಶೀಲ್ದಾರ್ ಎ.ಡಿ. ಅಮರವಾಡಗಿ ಹಾಗೂ ಪಿಎಸ್‌ಐ ಶಿವರಾಜ ಧರಿಗೋಣ ಜಂಟಿಯಾಗಿ ದಾಳಿ ನಡೆಸಿದ್ದಾರೆ.

ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT