ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಕ್ಷದ ವರಿಷ್ಠರೇ ದೆಹಲಿಗೆ ಕರೆದಿದ್ದಾರೆ: ಶಿವಾನಂದ ಪಾಟೀಲ

Published 31 ಜುಲೈ 2023, 14:14 IST
Last Updated 31 ಜುಲೈ 2023, 14:14 IST
ಅಕ್ಷರ ಗಾತ್ರ

ವಿಜಯಪುರ: ‘ಸಚಿವ ಸಂಪುಟದಲ್ಲಿರುವ ಹಿರಿಯ ನಾಯಕರನ್ನು ಪಕ್ಷದ ವರಿಷ್ಠರು ಭೇಟಿಯಾಗಲು ದೆಹಲಿಗೆ ಕರೆದಿದ್ದಾರೆ, ನಾವು ಅಲ್ಲಿಗೆ ತೆರಳುತ್ತಿದ್ದೇವೆ. ಸಚಿವರ ದೆಹಲಿ ಭೇಟಿಗೂ, ಆಳಂದ ಶಾಸಕ ಬಿ.ಆರ್.ಪಾಟೀಲ ಅವರ ಪತ್ರ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಜವಳಿ, ಕೈಮಗ್ಗ ಹಾಗೂ ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಚಿವ ಸಂಪುಟ ರಚನೆಯಾದ ಬಳಿಕ ಇದುವರೆಗೂ ನಮ್ಮ ಪಕ್ಷದ ವರಿಷ್ಠರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಬೆಂಗಳೂರಿಗೆ ರಾಹುಲ್ ಗಾಂಧಿ ಬಂದಾಗಲೂ ಭೇಟಿಯಾಗಲು ಆಗಿರಲಿಲ್ಲ’ ಎಂದರು.

‘ಸಿಎಲ್‌ಪಿ ಸಭೆಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಸ್ಫೋಟವಾಗಿಲ್ಲ, ನಮ್ಮಲ್ಲಿ ಭಿನ್ನಾಭಿಪ್ರಾಯವೂ ಇಲ್ಲ. ಶಾಸಕರಿಗೆ ಸಹಜವಾಗಿ‌ ತಮ್ಮ ಕ್ಷೇತ್ರದ, ಜನರ ಕೆಲಸಗಳು ಆಗಬೇಕೆಂಬ ಒತ್ತಡವಿರುತ್ತದೆ. ಹೊಸ ಸರ್ಕಾರ ಬಂದ ವೇಳೆ ವರ್ಗಾವಣೆ ಬೇಡಿಕೆ ಇರುತ್ತದೆ. ಈ‌ ವಿಚಾರದ ಕುರಿತು ಈಗಾಗಲೇ ಶಾಸಕಾಂಗ ಪಕ್ಷದ ಸಭೆಯಲ್ಲಿ ಸುದೀರ್ಘ ಚರ್ಚೆಯಾಗಿದ್ದು, ಮುಖ್ಯಮಂತ್ರಿಗಳು ಶಾಸಕರ ಆಹವಾಲುಗಳಿಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ’ ಎಂದರು.

‘ಜೆಡಿಎಸ್, ಬಿಜೆಪಿಯಿಂದ ಸರ್ಕಾರ ಬೀಳಿಸುವ ಯತ್ನ ಯಾವ ಕಾಲಕ್ಕೂ ಸಾಧ್ಯವಿಲ್ಲ. ಇದೆಲ್ಲ ಸುಮ್ಮನೆ ಊಹಾಪೂಹ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT