ಮಂಗಳವಾರ, ಅಕ್ಟೋಬರ್ 26, 2021
21 °C
ಭಕ್ತರಿಗೆ ಆನ್‌ಲೈನ್‌, ಆಪ್‌ಲೈನ್‌ ಪಾಸ್‌ ವ್ಯವಸ್ಥೆ

ತುಳಜಾಪುರ: ನವರಾತ್ರಿ ಉತ್ಸವ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೋಲಾಪುರ: ಸಮೀಪದ ತುಳಜಾಪುರದ ತುಳಜಾಭವಾನಿ ಮಂದಿರದಲ್ಲಿ ನವರಾತ್ರಿ ಉತ್ಸವ ಸಂಭ್ರಮದಿಂದ ನಡೆಯುತ್ತಿದೆ. ತುಳಜಾಪುರ ನಗರ ಭಕ್ತಿ ಮಯ, ಚೈತನ್ಯಮಯ ವಾತಾವರಣದಿಂದ ತುಂಬಿತುಳುಕುತ್ತಿದೆ. ಸಾವಿರಾರು ಭಕ್ತರು ತುಳಜಾ ಭವಾನಿಯ ಪಾದಗಳಿಗೆ ಹಣೆ ಹಚ್ಚಿ ನಮಸ್ಕರಿಸುವ ದೃಶ್ಯ ಪ್ರತಿನಿತ್ಯ ಕಂಡುಬರುತ್ತಿದೆ.

ಪ್ರತಿನಿತ್ಯ ಸಾವಿರಾರು ಭಕ್ತರು ದೇವಿಯ ದರ್ಶನಕ್ಕೆ ಬರುತ್ತಿದ್ದಾರೆ. ಆಯಿ ರಾಜಾ ಉದೋ ಉದೋ ಜಯ ಘೋಷ ಮುಗಿಲು ಮುಟ್ಟುತ್ತಿದೆ. ಆದರೆ, ಕೋವಿಡ್‌ ಹಿನ್ನೆಲೆಯಲ್ಲಿ  ಕೇವಲ ಒಂದು ಗಂಟೆ ದೇವಿಯ ಧರ್ಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.

ನವರಾತ್ರಿ ಉತ್ಸವದ ಅಂಗವಾಗಿ ತುಳಜಾಭವಾನಿ ದೇವಿಗೆ ನಸುಕಿನ ವೇಳೆ ಕುಲ ಸ್ವಾಮಿನಿ ಶ್ರೀ ತುಳಜಾಭವಾನಿ ದೇವಿಯನ್ನು ಸಿಂಹಾಸನದ ಮೇಲೆ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ರಥ ಅಲಂಕಾರ ಪೂಜೆ, ಅಭಿಷೇಕ ಪೂಜೆ, ತುಳಜಾ ಭವಾನಿಯ ದೇವಿಗೆ ವಸ್ತ್ರಾಭರಣಗಳಿಂದ ಅಲಂಕರಿಸಿ ಧೂಪದ್ರವ್ಯ ಆರತಿ ಮಾಡಲಾಗುತ್ತಿದೆ.

ಪುಣೆಯ ಭಕ್ತ, ಪ್ರಗತಿಪರ ರೈತ ನಾನಾ ಸಾಹೇಬ ದಿನಕರರಾವ್‌ ಪಾಚುಂದಕರ ಪಾಟೀಲ ಅವರು ನೀಡುವ ತುಳಜಾಭವಾನಿ ಮಂದಿರಕ್ಕೆ ದೇಶ-ವಿದೇಶಗಳ ಆಕರ್ಷಕ ಹೂವುಗಳಿಂದ ಅಲಂಕಾರ ಮಾಡಲಾಗುತ್ತಿದೆ.

ಭಕ್ತರಿಗೆ ಸೂಚನೆ:

ತುಳಜಾ ಭವಾನಿ ಮಂದಿರ ಪ್ರವೇಶ ಪಡೆಯಲು ಬಯಸುವ ಭಕ್ತರಿಗೆ ಆನ್‌ಲೈನ್‌ ಮತ್ತು ಆಪ್‌ಲೈನ್‌ ಪಾಸ್‌ ವ್ಯವಸ್ಥೆ ಮಾಡಲಾಗಿದೆ. ಆನ್‌ಲೈನ್ ಪಾಸ್ ಪಡೆಯಬಯಸುವವರು shreetulajabhauljabhavani.org ಸಂಪರ್ಕಿಸಬೇಕು.  ಆಪ್‌ಲೈನ್‌ ಪಾಸ್ ಪಡೆಯುವರಿಗೆ ಮಂದಿರದ ಪಕ್ಕದಲ್ಲಿ ವ್ಯವಸ್ಥೆ ಮಾಡಲಾಗಿದೆ.
ಬೇರೆ ರಾಜ್ಯಗಳಿಂದ ಬರುವ ಭಕ್ತರು ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿರಬೇಕು ಅಥವಾ ಮೂರು ದಿನಗಳೊಳಗೆ ಆರ್ ಟಿ ಪಿ ಸಿ ಆರ್ ಪಡೆದಿರಬೇಕು  ಅಥವಾ 24 ಗಂಟೆಯೊಳಗೆ ಆಂಟಿಜೆನ್ ರ‍್ಯಾ‍‍ಪಿಡ್‌ ಟೆಸ್ಟ್ ಮಾಡಿಸಿರಬೇಕು.

65 ವರ್ಷ ಮೇಲ್ಪಟ್ಟ ನಾಗರಿಕರು, ಗರ್ಭಿನಿಯರು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ಅನಾರೋಗ್ಯ ಪೀಡಿತರಿಗೆ ಮಂದಿರದಲ್ಲಿ ಪ್ರವೇಶ ಇಲ್ಲ. ಪ್ರತಿದಿನ 15 ಸಾವಿರ ಭಕ್ತರಿಗೆ ಮಂದಿರದಲ್ಲಿ ಪ್ರವೇಶ ನೀಡಲಾಗುವುದು. ಮಂದಿರದಿಂದ ಎರಡು ನೂರು ಮೀಟರ್ ವರೆಗೆ ಹೂವು, ಕಾಯಿ ಯಾವುದೇ ತರದ ಪದಾರ್ಥಗಳನ್ನು ಮಾರಲು ಅನುಮತಿ ಇಲ್ಲ. ಅಕ್ಟೋಬರ್ 18 ರಿಂದ 20 ರ ಮಧ್ಯದಲ್ಲಿ ಅಶ್ವಿನ ಹುಣ್ಣಿಮೆಯ ದಿನದಂದು ನಡೆಯುವ ಜಾತ್ರೆಯನ್ನು ರದ್ದು ಮಾಡಲಾಗಿದೆ. ಈ ಸಂದರ್ಭದಲ್ಲಿ ಬೇರೆ ಊರುಗಳಿಂದ ಬರುವ ಭಕ್ತರಿಗೆ ತುಳಜಾಪುರಕ್ಕೆ ಪ್ರವೇಶ ನಿಷೇಧಿಸಲಾಗಿದೆ. ಬೆಳಿಗ್ಗೆ 6ರಿಂದ ದಿನವಿಡಿ ದೇವಿಯ ದರ್ಶನಕ್ಕೆ ಅವಕಾಶವಿರುತ್ತದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು