ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯಾಧಾರಿತ ರಾಜಕಾರಣದಲ್ಲಿ ಬಿಜೆಪಿ ಯಶಸ್ವಿ: ಅಪ್ಪಾಸಾಹೇಬ ಪಟ್ಟಣಶೆಟ್ಟಿ

ಬಿಜೆಪಿ ಮಂಡಲದ ‌ಪ್ರಶಿಕ್ಷಣ ವರ್ಗದ ಉದ್ಘಾಟನಾ ಸಮಾರಂಭದಲ್ಲಿ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅಭಿಮತ
Last Updated 9 ನವೆಂಬರ್ 2020, 9:44 IST
ಅಕ್ಷರ ಗಾತ್ರ

ವಿಜಯಪುರ: ಮೌಲ್ಯಾಧಾರಿತ ರಾಜಕಾರಣದಲ್ಲಿ ಭಾರತೀಯ ಜನತಾ ಪಾರ್ಟಿ ಯಶಸ್ಸು ಕಂಡಿದೆ. ಈ ಮೂಲಕ ಜಗತ್ತಿನ ಅತಿ ದೊಡ ಪಕ್ಷವಾಗಿ ಬಿಜೆಪಿ ಬೆಳೆದಿದೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದರು.

ನಗರದ ರುಕ್ಮಾಂಗದ ಪಂಡಿತರ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದಬಿಜೆಪಿ ಮಂಡಲದ ಎರಡು ದಿನಗಳ ಪ್ರಶಿಕ್ಷಣ ವರ್ಗದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಪಕ್ಷಕ್ಕೆ ನಿಷ್ಠೆ ಯಾವತ್ತು ಉಳಿಸಿಕೊಳ್ಳಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಯ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿವುದು ಪಕ್ಷದ ಪ್ರತಿ ಕಾರ್ಯಕರ್ತನ ಗುರಿಯಾಗಬೇಕು ಎಂದರು.

ಮೇಲಿಂದ ಮೇಲೆ ಪ್ರತಿ ಶಿಕ್ಷಣ ಶಿಬಿರಗಳು ನಡೆಯುವುದರ ಉದ್ದೇಶ ಪಕ್ಷದ ಕಾರ್ಯಕರ್ತರನ್ನು ಬಲಿಷ್ಠ ಪಡಿಸುವಂತಾಗಿರುತ್ತದೆ ಎಂದು ಹೇಳಿದರು.

ನಗರದ ಮಂಡಲದ ಅಧ್ಯಕ್ಷ ಮಳುಗೌಡ ಪಾಟೀಲ ಮಾತನಾಡಿ, ಮೂರು ವರ್ಗಗಳ ಅವಧಿಗೆ ಆಯ್ಕೆಯಾಗಿರುವ ನೂತನ ಪದಾಧಿಕಾರಿಗಳಿಗೆ ಪಕ್ಷದ ತತ್ವ ಸಿದ್ಧಾಂತ, ಸಂಘಟನೆ, ವ್ಯಕ್ತಿತ್ವ ವಿಕಸನ, ಕಾರ್ಯಪದ್ಧತಿ, ಸರ್ಕಾರದ ಸಾಧನೆಗಳ ಕುರಿತು ವಿಚಾರಗೋಷ್ಠಿಗಳು ಮೂಲಕ ಹೊಸ ಚೈತನ್ಯ ತುಂಬಲಿದೆ ಎಂದು ಹೇಳಿದರು.

ಬಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ಬಿರಾದಾರ, ಶಿವರುದ್ರ ಬಾಗಲಕೋಟ, ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ, ರವಿಕಾಂತ ಬಗಲಿ, ಮಹೇಶ ಒಡೆಯರ, ಕಾಂತು ಶಿಂಧೆ, ಸಯ್ಯದ್ ನಿಡೋಣಿ, ನಡುವಿನ ಕೇರಿ, ಪ್ರಶಿಕ್ಷಣದ ಜಿಲ್ಲಾ ಪ್ರಮುಖ ಅನೀಲ ಜಮಾದಾರ, ವಿವೇಕಾನಂದ ಡಬ್ಬಿ, ಭೀಮಾ ಶಂಕರ ಹದನೂರ, ಗೋಪಾಲ ಘಟಕಾಂಬಳೆ, ಶಂಕರ ಕುಂಬಾರ, ಅಲ್ತಾಫ್‌ ಇಟಗಿ, ಛಾಯಾ ಮಸಿಯವರ, ಮಲ್ಲಮ್ಮ ಜೋಗೂರ, ಲಕ್ಷ್ಮೀ ಕನ್ನೋಳಿ, ನಗರ ಪ್ರಧಾನ ಕಾರ್ಯದರ್ಶಿ ಪಾಪುಸಿಂಗ್‌ ರಜಪೂತ, ಭರತ ಕೋಳಿ, ಚಂದ್ರು ಚೌಧರಿ, ವಿಕಾಸ ಪದಕಿ, ವಿವೇಕ ಹರಿಕಾರ, ಕೃಷ್ಣಾ ಗುನಾಳಕರ, ವಿಜಯ ಜೋಶಿ, ಬಸವರಾಜ ಬೈಚಬಾಳ, ರಾಜೇಶ ತೌಸೆ, ವಿನಾಯಕ ದಹಿಂಡೆ, ರಾಕೇಶ ಕುಲಕರ್ಣಿ, ಸಂದೀಪ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT