ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ಜಿ.ಪಂ., 13 ತಾ.ಪಂ.ಮೀಸಲಾತಿ ಪ್ರಕಟ

ಜಿಲ್ಲಾ ಪಂಚಾಯ್ತಿ 50 ಸ್ಥಾನಗಳ ಪೈಕಿ 25 ಮಹಿಳೆಯರ ಪಾಲು
Last Updated 30 ಏಪ್ರಿಲ್ 2021, 16:06 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲಾ ಪಂಚಾಯ್ತಿ ಮತ್ತು 13 ತಾಲ್ಲೂಕು ಪಂಚಾಯ್ತಿಗಳ ವರ್ಗವಾರು ಮೀಸಲಾತಿ ನಿಗದಿ ಪಡಿಸಿ ರಾಜ್ಯಸರ್ಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿದೆ.

ವಿಜಯಪುರ ಜಿಲ್ಲಾ ಪಂಚಾಯ್ತಿಯ ಒಟ್ಟು 50 ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿ(ಎಸ್‌ಸಿ) 11 (6 ಮಹಿಳೆ), ಪರಿಶಿಷ್ಟ ಪಂಗಡ 1 (1ಮಹಿಳೆ), ಹಿಂದುಳಿದ ‘ಅ’ ವರ್ಗಕ್ಕೆ 10(6 ಮಹಿಳೆ), ಹಿಂದುಳಿದ ‘ಬ‘ ವರ್ಗಕ್ಕೆ 3(1ಮಹಿಳೆ) ಹಾಗೂ ಸಾಮಾನ್ಯ ವರ್ಗಕ್ಕೆ 25(11ಮಹಿಳೆ) ಮೀಸಲಿರಿಸಲಾಗಿದೆ.

ತಾಲ್ಲೂಕು ಪಂಚಾಯ್ತಿ ವರ್ಗವಾರು ಮೀಸಲಾತಿ ಇಂತಿದೆ:

ವಿಜಯಪುರ ತಾಲ್ಲೂಕು ಪಂಚಾಯ್ತಿ ಒಟ್ಟು 12 ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿ 4 (2 ಮಹಿಳೆ), ಪರಿಶಿಷ್ಟ ಪಂಗಡ 1 (1 ಮಹಿಳೆ), ಹಿಂದುಳಿದ ‘ಅ’ ವರ್ಗಕ್ಕೆ 1(1 ಮಹಿಳೆ), ಹಿಂದುಳಿದ ‘ಬ‘ ವರ್ಗಕ್ಕೆ 0(0 ಮಹಿಳೆ) ಹಾಗೂ ಸಾಮಾನ್ಯ ವರ್ಗಕ್ಕೆ 6(2 ಮಹಿಳೆ).

ಬಬಲೇಶ್ವರ ತಾಲ್ಲೂಕು ಪಂಚಾಯ್ತಿ ಒಟ್ಟು 10 ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿ 2 (1 ಮಹಿಳೆ), ಪರಿಶಿಷ್ಟ ಪಂಗಡ 1 (1 ಮಹಿಳೆ), ಹಿಂದುಳಿದ ‘ಅ’ ವರ್ಗಕ್ಕೆ 2(1ಮಹಿಳೆ), ಹಿಂದುಳಿದ ‘ಬ‘ ವರ್ಗಕ್ಕೆ 0(0 ಮಹಿಳೆ) ಹಾಗೂ ಸಾಮಾನ್ಯ ವರ್ಗಕ್ಕೆ 5(2 ಮಹಿಳೆ).

ತಿಕೋಟಾ ತಾಲ್ಲೂಕು ಪಂಚಾಯ್ತಿ ಒಟ್ಟು 9 ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿ 3 (2ಮಹಿಳೆ), ಪರಿಶಿಷ್ಟ ಪಂಗಡ 01 (1 ಮಹಿಳೆ), ಹಿಂದುಳಿದ ‘ಅ’ ವರ್ಗಕ್ಕೆ 0(0 ಮಹಿಳೆ), ಹಿಂದುಳಿದ ‘ಬ‘ ವರ್ಗಕ್ಕೆ 0(0 ಮಹಿಳೆ) ಹಾಗೂ ಸಾಮಾನ್ಯ ವರ್ಗಕ್ಕೆ 5(2 ಮಹಿಳೆ).

ಬಸವನ ಬಾಗೇವಾಡಿ ತಾಲ್ಲೂಕು ಪಂಚಾಯ್ತಿ ಒಟ್ಟು 10 ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿ 2 (1 ಮಹಿಳೆ), ಪರಿಶಿಷ್ಟ ಪಂಗಡ 1(1 ಮಹಿಳೆ), ಹಿಂದುಳಿದ ‘ಅ’ ವರ್ಗಕ್ಕೆ 2(1 ಮಹಿಳೆ), ಹಿಂದುಳಿದ ‘ಬ‘ ವರ್ಗಕ್ಕೆ 0(0 ಮಹಿಳೆ) ಹಾಗೂ ಸಾಮಾನ್ಯ ವರ್ಗಕ್ಕೆ 5(2 ಮಹಿಳೆ).

ನಿಡಗುಂದಿ ತಾಲ್ಲೂಕು ಪಂಚಾಯ್ತಿ ಒಟ್ಟು 11 ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿ 3(2 ಮಹಿಳೆ), ಪರಿಶಿಷ್ಟ ಪಂಗಡ 1(1ಮಹಿಳೆ), ಹಿಂದುಳಿದ ‘ಅ’ ವರ್ಗಕ್ಕೆ 1(01ಮಹಿಳೆ), ಹಿಂದುಳಿದ ‘ಬ‘ ವರ್ಗಕ್ಕೆ 0(0 ಮಹಿಳೆ) ಹಾಗೂ ಸಾಮಾನ್ಯ ವರ್ಗಕ್ಕೆ 6(2ಮಹಿಳೆ).

ಕೊಲ್ಹಾರ ತಾಲ್ಲೂಕು ಪಂಚಾಯ್ತಿ ಒಟ್ಟು 11 ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿ 3(2 ಮಹಿಳೆ), ಪರಿಶಿಷ್ಟ ಪಂಗಡ 1(1 ಮಹಿಳೆ), ಹಿಂದುಳಿದ ‘ಅ’ ವರ್ಗಕ್ಕೆ 1(1 ಮಹಿಳೆ), ಹಿಂದುಳಿದ ‘ಬ‘ ವರ್ಗಕ್ಕೆ 0(0 ಮಹಿಳೆ) ಹಾಗೂ ಸಾಮಾನ್ಯ ವರ್ಗಕ್ಕೆ 6(2 ಮಹಿಳೆ).

ಮುದ್ದೇಬಿಹಾಳ ತಾಲ್ಲೂಕು ಪಂಚಾಯ್ತಿ ಒಟ್ಟು 11 ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿ 3(2 ಮಹಿಳೆ), ಪರಿಶಿಷ್ಟ ಪಂಗಡ 1(1 ಮಹಿಳೆ), ಹಿಂದುಳಿದ ‘ಅ’ ವರ್ಗಕ್ಕೆ 1(1 ಮಹಿಳೆ), ಹಿಂದುಳಿದ ‘ಬ‘ ವರ್ಗಕ್ಕೆ 0(0 ಮಹಿಳೆ) ಹಾಗೂ ಸಾಮಾನ್ಯ ವರ್ಗಕ್ಕೆ 6(2 ಮಹಿಳೆ).

ತಾಳಿಕೋಟೆ ತಾಲ್ಲೂಕು ಪಂಚಾಯ್ತಿ ಒಟ್ಟು 9 ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿ 2(1 ಮಹಿಳೆ), ಪರಿಶಿಷ್ಟ ಪಂಗಡ 1(1 ಮಹಿಳೆ), ಹಿಂದುಳಿದ ‘ಅ’ ವರ್ಗಕ್ಕೆ 1(1 ಮಹಿಳೆ), ಹಿಂದುಳಿದ ‘ಬ‘ ವರ್ಗಕ್ಕೆ 0(0 ಮಹಿಳೆ) ಹಾಗೂ ಸಾಮಾನ್ಯ ವರ್ಗಕ್ಕೆ 5(2 ಮಹಿಳೆ).

ಇಂಡಿ ತಾಲ್ಲೂಕು ಪಂಚಾಯ್ತಿ ಒಟ್ಟು 21 ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿ 4 (2 ಮಹಿಳೆ), ಪರಿಶಿಷ್ಟ ಪಂಗಡ 1(1 ಮಹಿಳೆ), ಹಿಂದುಳಿದ ‘ಅ’ ವರ್ಗಕ್ಕೆ 4(2 ಮಹಿಳೆ), ಹಿಂದುಳಿದ ‘ಬ‘ ವರ್ಗಕ್ಕೆ 1(1 ಮಹಿಳೆ) ಹಾಗೂ ಸಾಮಾನ್ಯ ವರ್ಗಕ್ಕೆ 11(5 ಮಹಿಳೆ).

ಚಡಚಣ ತಾಲ್ಲೂಕು ಪಂಚಾಯ್ತಿ ಒಟ್ಟು 9ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿ 2(1 ಮಹಿಳೆ), ಪರಿಶಿಷ್ಟ ಪಂಗಡ 1(1ಮಹಿಳೆ), ಹಿಂದುಳಿದ ‘ಅ’ ವರ್ಗಕ್ಕೆ 1(1ಮಹಿಳೆ), ಹಿಂದುಳಿದ ‘ಬ‘ ವರ್ಗಕ್ಕೆ 0(0 ಮಹಿಳೆ) ಹಾಗೂ ಸಾಮಾನ್ಯ ವರ್ಗಕ್ಕೆ 5(2 ಮಹಿಳೆ).

ಸಿಂದಗಿ ತಾಲ್ಲೂಕು ಪಂಚಾಯ್ತಿ ಒಟ್ಟು 10 ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿ 2(1ಮಹಿಳೆ), ಪರಿಶಿಷ್ಟ ಪಂಗಡ 1(1 ಮಹಿಳೆ), ಹಿಂದುಳಿದ ‘ಅ’ ವರ್ಗಕ್ಕೆ 2(1 ಮಹಿಳೆ), ಹಿಂದುಳಿದ ‘ಬ‘ ವರ್ಗಕ್ಕೆ 0(0 ಮಹಿಳೆ) ಹಾಗೂ ಸಾಮಾನ್ಯ ವರ್ಗಕ್ಕೆ 5(2 ಮಹಿಳೆ).

ಆಲಮೇಲ ತಾಲ್ಲೂಕು ಪಂಚಾಯ್ತಿ ಒಟ್ಟು 11ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿ 2(1 ಮಹಿಳೆ), ಪರಿಶಿಷ್ಟ ಪಂಗಡ 1(1 ಮಹಿಳೆ), ಹಿಂದುಳಿದ ‘ಅ’ ವರ್ಗಕ್ಕೆ 2(1 ಮಹಿಳೆ), ಹಿಂದುಳಿದ ‘ಬ‘ ವರ್ಗಕ್ಕೆ 0(0 ಮಹಿಳೆ) ಹಾಗೂ ಸಾಮಾನ್ಯ ವರ್ಗಕ್ಕೆ 6(3 ಮಹಿಳೆ).

ದೇವರ ಹಿಪ್ಪರಗಿ ತಾಲ್ಲೂಕು ಪಂಚಾಯ್ತಿ ಒಟ್ಟು 11 ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿ 3(2 ಮಹಿಳೆ), ಪರಿಶಿಷ್ಟ ಪಂಗಡ 1(1 ಮಹಿಳೆ), ಹಿಂದುಳಿದ ‘ಅ’ ವರ್ಗಕ್ಕೆ 1(1 ಮಹಿಳೆ), ಹಿಂದುಳಿದ ‘ಬ‘ ವರ್ಗಕ್ಕೆ 0(0 ಮಹಿಳೆ) ಹಾಗೂ ಸಾಮಾನ್ಯ ವರ್ಗಕ್ಕೆ 6(2 ಮಹಿಳೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT