ಗುರುವಾರ , ಜುಲೈ 29, 2021
27 °C

ವಿಜಯಪುರ: ಬೈಕ್, ಕ್ರೂಸರ್ ಮುಖಾಮುಖಿ ಡಿಕ್ಕಿಯಾಗಿ ತಂದೆ, ಮಗ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Accident representative image

ಕೊಲ್ಹಾರ(ವಿಜಯಪುರ): ಪಟ್ಟಣದ ರಾಷ್ಟ್ರೀಯ ಹೆದ್ದಾರಿ 218ರ ಪೆಟ್ರೋಲ್ ಪಂಪ್ ಬಳಿ ಭಾನುವಾರ  ಕ್ರೂಸರ್ ಮತ್ತು ಬೈಕ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ತಂದೆ, ಮಗ ದಾರುಣವಾಗಿ ಮೃತಪಟ್ಟಿದ್ದಾರೆ.

ಯುಕೆಪಿ ವೃತ್ತದ ಮೂಲಕ ವಿಜಯಪುರದತ್ತ ವೇಗವಾಗಿ ಸಾಗುತ್ತಿದ್ದ ಕ್ರೂಸರ್ ಎದುರಿಗೆ ಬರುತ್ತಿದ್ದ ಬೈಕ್‌ಗೆ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಚಲಾಯಿಸುತ್ತಿದ್ದ ಮಗ ಈರಪ್ಪ ಹಂಗರಗಿ (26) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಂಬದಿಯಲ್ಲಿ ಕುಳಿತ್ತಿದ್ದ ತಂದೆ ಶಂಕ್ರಪ್ಪ ಹಂಗರಗಿ (65) ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ. ಇಬ್ಬರು ತಾಲ್ಲೂಕಿನ ಮಸೂತಿ ಗ್ರಾಮದ ನಿವಾಸಿಗಳಾಗಿದ್ದು ಹಾಲಿ ಬಳೂತಿಯಲ್ಲಿ ವಾಸವಾಗಿದ್ದರು.

ಅಪಘಾತದ ನಂತರ ಕ್ರೂಸರ್ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಕ್ರೂಸರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು