ಪಂಢರಪುರ-ಗಾಣಗಾಪುರ ಹೆದ್ದಾರಿ ಮಂಜೂರಾತಿ ಸಿಕ್ಕಿದೆ. ಅದು ಪ್ರಾರಂಭಿಸುವ ಸಂದರ್ಭದಲ್ಲಿ ಸೇತುವೆ ದುರಸ್ತಿಗೆ ಶಾಶ್ವತ ರಿಪೇರಿ ಮಾಡುತ್ತೇವೆ.
– ದಯಾನಂದ, ಮಠ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಲೋಕೋಪಯೋಗಿ ಇಲಾಖೆ ಇಂಡಿ
ಇಂಡಿ ತಾಲ್ಲೂಕಿನ ನಾದ ಗ್ರಾಮದ ಹಳ್ಳಕ್ಕೆ ನಿರ್ಮಿಸಿದ ಸೇತುವೆ ಮೇಲೆ ನೀರು ನಿಂತು ಸೇತುವೆ ಹಾಳಾಗುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡಾ ಯಾವದೇ ಪರಿಹಾರ ಸಿಕ್ಕಿಲ್ಲ.