ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ಲೋಕಸಭಾ: ‘ಮೀಸಲು’ ಕ್ಷೇತ್ರದಲ್ಲಿ ಎಡಗೈ – ಬಲಗೈ ಮುಖಾಮುಖಿ

Published 31 ಮಾರ್ಚ್ 2024, 23:47 IST
Last Updated 31 ಮಾರ್ಚ್ 2024, 23:47 IST
ಅಕ್ಷರ ಗಾತ್ರ

ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ರಮೇಶ ಜಿಗಜಿಣಗಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿ ರಾಜು ಆಲಗೂರ ನಡುವೆ ನೇರ ಹಣಾಹಣಿ ಇದೆ. ಪರಿಶಿಷ್ಟ ಜಾತಿ ಎಡಗೈ (ಮಾದಿಗ) ಸಮುದಾಯದ ಜಿಗಜಿಣಗಿ ಏಳನೇ ಬಾರಿಗೆ (ಚಿಕ್ಕೋಡಿ, ವಿಜಯಪುರದಿಂದ ತಲಾ ಮೂರು ಬಾರಿ) ಲೋಕಸಭೆ ಚುನಾವವಣೆಯಲ್ಲಿ ಕಣಕ್ಕಿಳಿದಿದ್ದಾರೆ.

ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ರಾಜಕೀಯ ವೈರಿಗಳು. ದೇವರಹಿಪ್ಪರಗಿ ಕ್ಷೇತ್ರದ ಜೆಡಿಎಸ್‌ ಶಾಸಕ ರಾಜುಗೌಡ ನಿಲುವು ನಿಗೂಢ. ಇವು ರಮೇಶ ಜಿಗಜಿಣಗಿ ಅವರ ಸುಗಮ ಗೆಲುವಿಗೆ ‘ಅಡ್ಡಗಲ್ಲು’ ಆದಿತೇ ಎಂಬ ಚರ್ಚೆ ನಡೆದಿದೆ.

ಪರಿಶಿಷ್ಟ ಜಾತಿ ಬಲಗೈ (ಚಲವಾದಿ) ಸಮುದಾಯಕ್ಕೆ ಸೇರಿದ ಪ್ರೊ.ರಾಜು ಆಲಗೂರ ಮೊದಲ ಸಲ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ನಾಗಠಾಣ ಕ್ಷೇತ್ರದಿಂದ ಎರಡು ಬಾರಿ ಶಾಸಕ, ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ, ಕೆಎಸ್‌ಡಿಎಲ್‌ ಅಧ್ಯಕ್ಷ ಮತ್ತು ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾಗಿ ಕೆಲಸ ಮಾಡಿದ ಅನುಭವವಿದೆ.

ಇಬ್ಬರು ಸಚಿವರು, ನಾಲ್ವರು ಶಾಸಕರು, ವಿಧಾನ ಪರಿಷತ್ತಿನ ಇಬ್ಬರು ಸದಸ್ಯರಿರುವ ಕ್ಷೇತ್ರದಲ್ಲಿ ಕಾಂಗ್ರೆಸ್‌ ರಾಜಕೀಯವಾಗಿ ಪ್ರಬಲ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಆ ಪಕ್ಷವು ನೆಚ್ಚಿಕೊಂಡಿದೆ.

ವಿಜಯಪುರ ಜಿಲ್ಲಾ ರಾಜಕಾರಣ ಮೇಲ್ನೋಟಕ್ಕೆ ಕಂಡಷ್ಟು ಸರಳವಿಲ್ಲ. ಒಳ ಒಪ್ಪಂದ, ಒಳ ಏಟು, ಹೊಂದಾಣಿಕೆ ರಾಜಕಾರಣಕ್ಕೆ ಹೆಸರಾಗಿದೆ. ಈ ಬಾರಿ ಯಾವ ರೀತಿ ರಾಜಕೀಯ ಆಟ ನಡೆಯಲಿದೆ ಎಂಬುದೇ ಸದ್ಯದ ಕುತೂಹಲ.

ವಿಜಯಪುರ ಲೋಕಸಭಾ ಕ್ಷೇತ್ರ

ನೇರ ಹಣಾಹಣಿ 

ರಮೇಶ ಜಿಗಜಿಣಗಿ (ಬಿಜೆಪಿ)

ರಾಜು ಆಲಗೂರ (ಕಾಂಗ್ರೆಸ್‌)

ವಿಧಾನಸಭೆ ಕ್ಷೇತ್ರಗಳ ಪಕ್ಷವಾರು ಪ್ರಾತಿನಿಧ್ಯ: ಕಾಂಗ್ರೆಸ್‌–6;ಬಿಜೆಪಿ–1;ಜೆಡಿಎಸ್‌–1  

ಮತದಾರರ ಸಂಖ್ಯೆ

976073: ಪುರುಷರು

942757: ಮಹಿಳೆಯರು

218: ಲಿಂಗತ್ವ ಅಲ್ಪಸಂಖ್ಯಾತರು

ಒಟ್ಟು: 919048

2019ರ ಫಲಿತಾಂಶ

ಅಭ್ಯರ್ಥಿ;ಪಕ್ಷ;ಪಡೆದ ಮತ 

ರಮೇಶ ಜಿಗಜಿಣಗಿ;ಬಿಜೆಪಿ; 635867

ಸುನೀತಾ ಚವ್ಹಾಣ;ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ; 377829 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT