ವಿಜಯಪುರ: ರಾಜ್ಯ ಸಚಿವ ಸಂಪುಟ ಪುನರ್ ರಚನೆಯಾದರೆ ಜಿಲ್ಲೆಯ ಇಬ್ಬರು ಹಾಲಿ ಸಚಿವರಲ್ಲಿ ಯಾರು ಅಧಿಕಾರ ಕಳೆದುಕೊಳ್ಳುವರು, ಹೊಸದಾಗಿ ಯಾರು ಸಚಿವರಾಗುವರು ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಪ್ರಭಾವಿ ಸಚಿವರಾಗಿರುವ ಎಂ.ಬಿ.ಪಾಟೀಲ ಮತ್ತು ಶಿವಾನಂದ ಪಾಟೀಲ ಇಬ್ಬರೂ ಮುಂದಿನ ಎರಡೂವರೆ ವರ್ಷಕ್ಕೆ ಮುಂದುವರಿಯುವರೇ ಅಥವಾ ಕೈ ಬಿಡಲ್ಪಡುವರೇ? ಅಥವಾ ಇವರಿಬ್ಬರ ಪೈಕಿ ಒಬ್ಬರಿಗೆ ಬಿಟ್ಟು, ಇನ್ನೊಬ್ಬರನ್ನು ಯಥಾಸ್ಥಿತಿ ಉಳಿಸಿಕೊಳ್ಳಲಾಗುವುದೇ ಎಂಬ ಕುತುಹಲ ಜನರಲ್ಲಿ ಮೂಡಿದೆ.

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಸಚಿವರಾಗುವ ಸಾಧ್ಯತೆ ಹೆಚ್ಚಿದ್ದರೆ, ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ ಸಹ ಲಾಬಿ ನಡೆಸಿದ್ದಾರೆ. ಇಬ್ಬರಲ್ಲಿ ಯಾರಿಗೆ ಅದೃಷ್ಟ ಒಲಿಯಲಿದೆ ಎಂಬ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಚರ್ಚೆ ನಡೆದಿದೆ.

ಶಾಸಕ ಯಶವಂತರಾಯಗೌಡ ಅವರು, ‘ಕಾಂಗ್ರೆಸ್ ಸರ್ಕಾರ ರಚನೆ ವೇಳೆ ಜಿಲ್ಲೆಯ ಶಾಸಕರೊಂದಿಗೆ ನಡೆದ ಸಭೆಯಲ್ಲಿ ಅಧಿಕಾರ ಹಂಚಿಕೆ ಬಗ್ಗೆ ಒಪ್ಪಂದವಾಗಿತ್ತು. ಪಕ್ಷದ ವರಿಷ್ಠರು ಸಚಿವ ಸ್ಥಾನದ ಭರವಸೆ ನೀಡಿದ್ದರು. ಕೊಟ್ಟ ಮಾತನ್ನು ಉಳಿಸಿಕೊಳ್ಳಲಿದ್ದಾರೆ’ ಎಂಬ ವಿಶ್ವಾಸವಿದೆ ಎಂದು ಈಗಾಗಲೇ ಬಹಿರಂಗವಾಗಿ ಹೇಳಿದ್ದಾರೆ. ಅವರು ಪಕ್ಷದ ಹೈಕಮಾಂಡ್ಗೆ ಎದುರು ತಮ್ಮ ಬೇಡಿಕೆ ಇಟ್ಟಿದ್ದಾರೆ.

‘ನಿಗಮ ಮಂಡಳಿ ಸ್ಥಾನ ನನಗೆ ಆರಂಭದಲ್ಲೇ ನೀಡಲು ಸರ್ಕಾರ ಇಚ್ಛಿಸಿತ್ತು. ಆದರೆ, ಇಂಡಿಗೆ ಸಚಿವ ಸ್ಥಾನ ಕೊರತೆ ನೀಗಲಿ ಎಂಬ ದೃಷ್ಟಿಯಿಂದ ಅದನ್ನು ನಿರಾಕರಿಸಿದೆ. ನನ್ನ ಕ್ಷೇತ್ರಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ. ಜಿಲ್ಲೆಯ ಎಲ್ಲ ಕ್ಷೇತ್ರಗಳಿಗೂ ಸಚಿವ ಸ್ಥಾನ ಸಿಕ್ಕಿದೆ. ಸ್ವಾತಂತ್ರ್ಯ ದೊರಕಿದ ನಂತರ ಇಲ್ಲಿಯವರೆಗೂ ಸಚಿವ ಸ್ಥಾನದಿಂದ ಇಂಡಿ ವಂಚಿತವಾಗಿದೆ. ನಾನು ಕೇಳುತ್ತಿರುವುದರಲ್ಲಿ ನ್ಯಾಯವಿಲ್ಲವೇ’ ಎಂದು ಯಶವಂತರಾಯಗೌಡ ಪ್ರಶ್ನಿಸುತ್ತಾರೆ.

ನಾಡಗೌಡ ಲಾಭಿ:

ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ ಅವರು ಸಚಿವ ಸ್ಥಾನಕ್ಕಾಗಿ ವರಿಷ್ಠರ ಹಂತದಲ್ಲಿ ಲಾಬ ನಡೆಸಿದ್ದಾರೆ. ಈಗಾಗಲೇ ಒಮ್ಮೆ ಸಚಿವರಾಗಿ, ನವದೆಹಲಿ ವಿಶೇಷ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿರುವ ಅನುಭವ, ಹಿರಿತನ ಇದೆ. ಜೊತೆಗೆ ಸದ್ಯ ಕರ್ನಾಟಕ ಸಾಬೂನು-ಮಾರ್ಜಕ ನಿಗಮದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

‘ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದು, ಅವರಲ್ಲಿ ಯಾರಾದರೂ ಸಚಿವ ಸ್ಥಾನ ತ್ಯಾಗ ಮಾಡಿದರೆ ಆ ಸ್ಥಾನಕ್ಕೆ ಹಿರಿಯನಾದ ನನ್ನನ್ನು ಪರಿಗಣಿಸಬೇಕು ಎಂದು ಹೈಕಮಾಂಡ್ಗೆ ವಿನಂತಿಸಿದ್ದೇನೆ. ಹೈಕಮಾಂಡ್ ಯಾರಿಗೆ ಸೂಚನೆ ಕೊಡುತ್ತದೆಯೋ ಅದರಂತೆ ನಡೆಯುತ್ತೇವೆ. ನಾನು ಯಾರಿಗೂ ಸ್ಥಾನ ತ್ಯಾಗ ಮಾಡಲು ಹೇಳುವುದಿಲ್ಲ.ಅಲ್ಲದೇ, ಅಷ್ಟು ದೊಡ್ಡವನು ನಾನಲ್ಲ’ ಎಂದು ಈ ಹಿಂದೆ ಪತ್ರಿಕಾಗೋಷ್ಠಿಯಲ್ಲೇ ಸೂಚ್ಯವಾಗಿ ಹೇಳಿದ್ದಾರೆ.

ವೈಆರ್ಪಿ ಲೆಕ್ಕಾಚಾರ?:

‘ಎಂ.ಬಿ.ಪಾಟೀಲ , ಶಿವಾನಂದ ಪಾಟೀಲ ಹಾಲಿ ಸಚಿವರಾಗಿ ಅಧಿಕಾರ ಅನುಭವಿಸಿದ್ದಾರೆ. ಅಲ್ಲದೇ, ಸಿ.ಎಸ್. ನಾಡಗೌಡರು ಸದ್ಯ ನಿಗಮದ ಅಧ್ಯಕ್ಷರಿದ್ದಾರೆ. ಅಧಿಕಾರ ಹಂಚಿಕೆ ಸೂತ್ರ ಸುಸೂತ್ರವಾಗಿ ನಡೆದರೆ ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಅವಕಾಶ ಸಿಗುವುದು ನಿಶ್ಚಿತ’ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ದಟ್ಟವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.