ಶನಿವಾರ, ಆಗಸ್ಟ್ 20, 2022
21 °C

ವಾಟಾಳ್ ನಾಗರಾಜ್ ವಿಜಯಪುರ ಜಿಲ್ಲೆ ಪ್ರವೇಶಕ್ಕೆ ಪೊಲೀಸರ ನಿರ್ಬಂಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Vijayapura police

ವಿಜಯಪುರ: ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಲು ಬರುತ್ತಿರುವ ವಾಟಾಳ್ ನಾಗರಾಜ್ ವಿಜಯಪುರ ಪ್ರವೇಶಿಸದಂತೆ ತಡೆಯಲು ಬಸವನಬಾಗೇವಾಡಿ ಡಿವೈಎಸ್‌ಪಿ ಈ. ಶಾಂತವೀರ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಪೊಲೀಸರು ಆಲಮಟ್ಟಿ ಬಳಿ ರಾಷ್ಟ್ರೀಯ ಹೆದ್ದಾರಿ 50ರ ಯಲಗೂರ ಕ್ರಾಸ್ ಬಳಿ ಮಂಗಳವಾರ ಬೆಳಿಗ್ಗೆ 8.30ರಿಂದ ಕಾಯುತ್ತಿದ್ದಾರೆ.

ಮರಾಠಾ ನಿಗಮ ಸ್ಥಾಪನೆ ವಿರೋಧಿಸಿ ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಕನ್ನಡ ಪರ ಸಂಘಟನೆಗಳನ್ನು ಹಾಗೂ ಹೋರಾಟಗಾರರನ್ನು ರೋಲ್‌ಕಾಲ್ ಹೋರಾಟಗಾರರು ಎಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಲು ವಾಟಾಳ್ ನಾಗರಾಜ್ ಬರುತ್ತಿದ್ದಾರೆ.

ಆಲಮಟ್ಟಿಯಲ್ಲೇ ಅವರನ್ನು ವಶಕ್ಕೆ ಪಡೆದು ಇಡೀ ದಿನ ಅವರನ್ನು ಅಲ್ಲಿಯ ಪ್ರವಾಸಿ ಮಂದಿರದಲ್ಲಿ ಇಡುವ ಸಾಧ್ಯತೆಯಿದೆ.

ಮರಾಠಾ ನಿಗಮ ಸ್ಥಾಪನೆ ವಿರೋಧಿಸಿ ವಿಜಯಪುರದಲ್ಲಿ ಕನ್ನಡಪರ ಸಂಘಟನೆಗಳ ಮುಖಂಡರು ಹೇಗೆ ಪ್ರತಿಭಟನೆ ಮಾಡುತ್ತಾರೆ ನೋಡುತ್ತೇನೆ ಎಂಬ ಯತ್ನಾಳ ಅವರ ಧಮಕಿಗೆ ಉತ್ತರ ನೀಡಲು ವಿಜಯಪುರದಲ್ಲೇ ಪ್ರತಿಭಟನೆ ನಡೆಸಲು ವಾಟಾಳ್ ಮತ್ತು ಅವರ ಬೆಂಬಲಿಗರು ನಿರ್ಧರಿಸಿದ್ದಾರೆ.

ವಾಟಾಳ್  ವಿಜಯಪುರಕ್ಕೆ ಬಂದರೆ ಯತ್ನಾಳ ಬೆಂಬಲಿಗರೊಂದಿಗೆ ಘರ್ಷಣೆಯಾಗಬಹುದು.ಕಾನೂನು ಸುವ್ಯವಸ್ಥೆ ಹದಗೆಡಬಹುದು ಎಂಬ ಕಾರಣಕ್ಕೆ ಅವರನ್ನು ಜಿಲ್ಲೆ ಪ್ರವೇಶಿಸದಂತೆ ತಡೆಗಟ್ಟಲು ಪೊಲೀಸರು ಮುಂದಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು