ವಿಜಯಪುರ: ಮುಖ್ಯಮಂತ್ರಿ ಬದಲಾವಣೆಗಾಗಿ ದ್ವಂದ್ವ ಹೇಳಿಕೆ, ಅಶಾಂತಿ ಸೃಷ್ಟಿಸಲು ಸಂಘ ಪರಿವಾರದ ನಿಷೇಧ, ಒಂದೆಡೆ ಸಾಲು ಸಾಲು ಹಗರಣಗಳು, ರಾಜ್ಯದ ಬೊಕ್ಕಸವೇ ಖಾಲಿಯಾಗಿರುವುದು ಹೀಗೆ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಬುಡಮೇಲು ಆಗಿದ್ದು, ಕೂಡಲೇ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಹಿಂದೂಪರ ಹೋರಾಟಗಾರ ರಾಘವ ಅಣ್ಣಿಗೇರಿ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ ಸರ್ಕಾರದ ಕೆಟ್ಟ ನೀತಿಯಿಂದ ಇಡೀ ವ್ಯವಸ್ಥೆಯೇ ಹಾಳಾಗಿದೆ. ರಾಜ್ಯ ಸರ್ಕಾರದ ವೈಫಲ್ಯದ ದೊಡ್ಡ ಪಟ್ಟಿಯೇ ಸೃಜನೆಯಾಗಿದೆ. ಸಚಿವರು ಶಾಸಕರ ಮಧ್ಯ ಸಮನ್ವಯ ಕೊರತೆ, ಕ್ಷೇತ್ರಗಳಿಗೆ ಅನುದಾನವಿಲ್ಲದೆ ಶಾಸಕರ ಪರದಾಟ, ಇವೆಲ್ಲವುಗಳನ್ನು ಮರೆಮಾಚಲು ಆರ್.ಎಸ್.ಎಸ್ ಬ್ಯಾನ್ ನಾಟಕ, ಪಥಸಂಚಲನದಲ್ಲಿ ಭಾಗವಹಿಸಿದ ಸರ್ಕಾರಿ ನೌಕರರ ಅಮಾನತು, ಗೊಂದಲದ ಗೂಡಾದ ಜಾತಿ ಗಣತಿ, ಸ್ವಾಮೀಜಿಗಳ ಮಧ್ಯೆ ಜಗಳ ಹಚ್ಚಿ, ಹಿಂದೂ ಧರ್ಮವನ್ನು ಒಡೆಯುವ ಹುನ್ನಾರ ನಡೆದಿದೆ.

ಸರಿಯಾಗಿ ಸಂಬಳ, ಬೋನಸ್ ಸಿಗದೇ ಬಿಎಂಟಿಸಿ, ಕೆಎಸ್ಆರ್ಟಿಸಿ ನೌಕರರ ಪ್ರತಿಭಟನೆ, ಹೆಚ್ಚಾಗುತ್ತಿರುವ ನಿರುದ್ಯೋಗದ ಸಮಸ್ಯೆ, ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು, ರಾಜ್ಯವನ್ನು ದಿವಾಳಿ ಅಂಚಿಗೆ ತಳ್ಳಿ ಅಶಾಂತಿ ಸೃಷ್ಟಿಸಲು ಹೊರಟಿರುವ ರಾಜ್ಯ ಸರ್ಕಾರವನ್ನು ತಕ್ಷಣ ವಜಾಗೊಳಿಸಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.