ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲತವಾಡ | ತ್ಯಾಜ್ಯ ನೀರು ಸಂಗ್ರಹ: ಜನರ ಪರದಾಟ

ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯ: ಜನರಿಗೆ ಸಾಂಕ್ರಾಮಿಕ ರೋಗದ ಭೀತಿ
Published 20 ಏಪ್ರಿಲ್ 2024, 6:15 IST
Last Updated 20 ಏಪ್ರಿಲ್ 2024, 6:15 IST
ಅಕ್ಷರ ಗಾತ್ರ

ನಾಲತವಾಡ: ಗಚ್ಚಿನಬಾವಿ ಓಣಿಯ 13ನೇ ವಾರ್ಡ್‌ನ ಎತ್ತರ ಪ್ರದೇಶದ ಮನೆಗಳ ತ್ಯಾಜ್ಯ ನೀರು, ಚರಂಡಿ ನೀರು  ತಗ್ಗು ಪ್ರದೇಶದ ಸುಮಾರು 10 ಮನೆಗಳಿಗೆ ನುಗ್ಗಿದ್ದು, ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ. ಇದರಿಂದ ಇಲ್ಲಿನ ನಿವಾಸಿಗಳಿಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. 

ಮನೆ ಮುಂದೆ, ರಸ್ತೆಯಲ್ಲಿ ಚರಂಡಿ ನೀರು ನಿಂತಿರುವುದರಿಂದಾಗಿ ಮನೆ ಗೋಡೆಗಳ ತೇವಾಂಶ ಹೆಚ್ಚಾಗಿ ಬೀಳುವ ಸ್ಥಿತಿ ತಲುಪಿವೆ. ಮನೆಯವರು, ಓಣಿಯವರು ಶೌಚಕ್ಕೆ ತೆರಳುವವರು ರಸ್ತೆಯಲ್ಲಿ ಓಡಾಡಬೇಕೆಂದರೆ ಚರಂಡಿ ನೀರು ದಾಟಿಕೊಂಡೆ ಹೋಗಬೇಕಾದ ಅನಿವಾರ್ಯತೆ ಇದೆ.

ಮಕ್ಕಳು, ವಯೋವೃದ್ದರು ಚರಂಡಿಯ ನೀರಿನಲ್ಲಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಮೇಲಿನ ಮನೆಗಳ ಚರಂಡಿಯ ನೀರಿನಿಂದಾಗಿ ಸುತ್ತಮುತ್ತಲಿನ ವಾತಾವರಣ ಕಲುಷಿತವಾಗಿದೆ. ಚರಂಡಿ ನೀರು ದುರ್ನಾತ ಬೀರುತ್ತಿದ್ದು, ಜನರು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ.

ಮೇಲ್ಭಾಗದಿಂದ ಹರಿದು ಬರುವ ಚರಂಡಿ ನೀರು ಸರಾಗವಾಗಿ ಪಟ್ಟಣದ ಹೊರಗೆ ಹರಿದು ಹೋಗಲು ಉತ್ತಮವಾದ ಚರಂಡಿ ನಿರ್ಮಿಸಿ, ನೀರು ನಿಲ್ಲದಂತೆ ಶಾಶ್ವತ ಪರಿಹಾರವನ್ನು ಪಟ್ಟಣ ಪಂಚಾಯಿತಿ ನೀಡಬೇಕು ಎನ್ನುವುದು ಸ್ಥಳೀಯರ ಒತ್ತಾಯ.

‘ಮನೆಯ ಮುಂದೆ ಗಟಾರದ ನೀರು ನಿಂತಿದ್ದು, ದುರ್ನಾತ ಬರುತ್ತಿದೆ. ಮನೆಯೊಳಗೆ ಇರಲಾಗದ ಸ್ಥಿತಿ. ಗಟಾರದ ನೀರಿನಿಂದ ಮನೆಯ ಗೋಡೆಗಳು ಜವುಳು ಆಗಿ ಯಾವಾಗ ಬೀಳುತ್ತವೆ ಎನ್ನುವ ಭಯ ಕಾಡುತ್ತಿದೆ. ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿ ಹಲವು ತಿಂಗಳು ಗತಿಸಿದರೂ ಪ್ರಯೋಜನವಾಗಿಲ್ಲ. ಈ ಸಮಸ್ಯೆ ಬಗೆಹರಿಸದಿದ್ದಲ್ಲಿ ಪಟ್ಟಣ ಪಂಚಾಯಿತಿ ಮುಂದೆ ಧರಣಿ ಮಾಡಲಾಗುವುದು’ ಎಂದು ಶಿವಶಂಕರ ಗಂಗನಗೌಡ್ರ, ನೀಲಮ್ಮ ಮಾವಿನತೋಟ, ಪಾರ್ವತಿ ಹೊಸಮನಿ, ಶಾಂತವ್ವ ತೆಂಗಿನಕಾಯಿ, ರಾಜೇಶ್ವರಿ ಹೊಸಮನಿ,ರೇಣುಕಾ ಮಾವಿನತೋಟ, ಸುಶೀಲಾ ಗಂಗನಗೌಡರ ತಿಳಿಸಿದರು.

ಮನವಿಗೆ ಸ್ಪಂದಿಸದ ಪಟ್ಟಣ ಪಂಚಾಯಿತಿ

ಚರಂಡಿ ನೀರು ಮನೆ ಸುತ್ತ ಮುತ್ತಲೂ, ರಸ್ತೆ ತುಂಬ ನಿಂತು ಅನಾರೋಗ್ಯದಿಂದ ಬಳಲುತ್ತಿರುವ ಬಗ್ಗೆ ನಾಲತವಾಡ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ, ಸಿಬ್ಬಂದಿ  ಹಲವು ತಿಂಗಳು ಗತಿಸಿದರೂ ಸ್ಪಂದಿಸಿಲ

ಹಲವು ವರ್ಷಗಳಿಂದ ಈ ಸಮಸ್ಯೆ ಇದೆ, ಆರು ತಿಂಗಳಿಗೊಮ್ಮೆ ಶುಚಿಗೊಳಿಸಲಾಗುತ್ತಿತ್ತು. ಈ ವರ್ಷ ಶುಚಿಗೊಳಿಸದ ಕಾರಣ ತೊಂದರೆ ಎದುರಾಗಿದೆ
ಶಂಕ್ರಣ್ಣ ಗಂಗನಗೌಡರ ಸ್ಥಳೀಯ ನಿವಾಸಿ
ಅಧಿಕಾರ ಪಡೆದು ಒಂದು ವಾರವಾಗಿದೆ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವೆ, ಸಮಸ್ಯೆ ಪರಿಸಹರಿಸಲು ಯತ್ನಿಸುವೆ
ಈರಣ್ಣ ಕೊಣ್ಣುರ, ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT