ವಿಜಾಪುರ: ಶಿವಾಜಿ ಅವರ ಗ್ರಾಮೀಣ ಚಿಂತನೆ ಜನಪರ ಆಡಳಿತ, ಸ್ವರಾಜ್ಯದ ಕಲ್ಪನೆ ಕಂದಾಯ ಕ್ಷೇತ್ರದಲ್ಲಿ ತಂದ ಸುಧಾರಣೆಗಳು ಇಂದಿನ ಆಡಳಿತಕ್ಕೆ ಮಾದರಿ. ಈ ಕುರಿತಂತೆ ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಹೇಳಿದರು.

ಜಿಲ್ಲಾ ಆಡಳಿತದಿಂದ ಸೋಮವಾರ ಇಲ್ಲಿ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಓಂಕಾರ ಕಾಕಡೆ ಮಾತನಾಡಿ, ಮಧ್ಯಕಾಲಿನ ಭಾರತದ ಇತಿಹಾಸದಲ್ಲಿ ಶಿವಾಜಿ ಮಹಾರಾಜರು ಶಕ್ತಿ, ಯುಕ್ತಿ ಸಮ್ಮಿಲನದ ಒಬ್ಬ ಚಾಣಾಕ್ಷ್ಯ ಹೋರಾಟಗಾರರಾಗಿದ್ದರು ಎಂದರು.

ಗ್ರಾಮಗಳಲ್ಲಿ ಸರ್ವಧರ್ಮ ಸಮನ್ವಯ ಕೇಂದ್ರಗಳನ್ನು ಸ್ಥಾಪಿಸಿ, ಸರ್ವಧರ್ಮ ಜನರನ್ನು ಸಮಭಾವದಿಂದ ಕಾಣುವ ಆದರ್ಶ ವ್ಯಕ್ತಿಯಾಗಿದ್ದರು. ಶಿವಾಜಿ ಎಂದೂ ಏಕ ಕೋಮಿನ ವಿರುದ್ಧ ಹೋರಾಟ ನಡೆಸಿದವನಲ್ಲ. ಭಾರತ ವಿದೇಶಿ ಅಕ್ರಮಣಗಾರರ ಕೈಯಲ್ಲಿ ಇರುವುದನ್ನು ಪ್ರತಿಭಟಿಸಿ ಈ ಅಕ್ರಮಣಕಾರರ ವಿರುದ್ಧ ಸ್ಥಳೀಯ ನಾಯಕತ್ವವನ್ನು ನೀಡಿದ ಮಹಾನ್ ಹೋರಾಟಗಾರ ಎಂದು ಹೇಳಿದರು.

ಶಿವಾಜಿಯು ಅಪ್ಪಟ ಕನ್ನಡಿಗ ಎಂಬ ವಿಚಾರ ಸಂಶೋಧನೆಯಿಂದ ಇತ್ತೀಚೆಗೆ ಬೆಳಕು ಕಂಡಿದೆ. ಇತಿಹಾಸಕಾರ ರಾಮಚಂದ್ರ ಡೋಲಿ ಅವರ ಸಂಶೋಧನೆಯಂತೆ ಕರ್ನಾಟಕದ ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಸೊರಟೂರು ಗ್ರಾಮದಲ್ಲಿ ಶಿವಾಜಿ ಜನಿಸಿದ. ಅಲ್ಲದೆ ಶಿವಾಜಿ ಶ್ರಿಶೈಲ ಮಲ್ಲಿಕಾರ್ಜುನನ ಭಕ್ತನಾಗಿದ್ದ ಎಂಬುದನ್ನು ಪುರಾವೆಗಳ ಮೂಲಕ ಬೆಳಕು ಚೆಲ್ಲಿದ್ದಾರೆ. ಈ ಕುರಿತು ಹೆಚ್ಚಿನ ಅಧ್ಯಯನವಾಗಬೇಕಾಗಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ನಗರದ ಶಿವಾಜಿ ವೃತ್ತದಲ್ಲಿರುವ ಶಿವಾಜಿ ಪುತ್ಥಳಿಗೆ ಶಾಸಕ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಮುಖಂಡರು ಪೂಜೆ ಸಲ್ಲಿಸಿದರು.

ಡೊಳ್ಳಿ ಕುಣಿತ, ವೀರಗಾಸೆ, ಕೀಲು ಕುದುರೆ ಕುಣಿತ, ಹಗಲುವೇಷ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳ ಮೂಲಕ ನಗರದ ಕಂದಗಲ್ ಹಣಮಂತರಾಯ ರಂಗ ಮಂದಿರದವರೆಗೆ ಶಿವಾಜಿ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ಶಿವಾಜಿ ರೂಪಕ ಗೊಂದಲಿಗರ ಹಾಡು ಹಾಗೂ ಸುಗಮ ಸಂಗೀತ ಕಾರ್ಯಕ್ರಮಗಳು ಜರುಗಿದವು.

ಮುಸ್ಲಿಂರಿಂದ ಶಿವ ಜಯಂತಿ: ವಿಜಾಪುರದಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಶಿವಾಜಿ ಮಹಾರಾಜರ ಜನ್ಮದಿನ ಆಚರಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಹಾಗೂ ಅಲ್ಪ ಸಂಖ್ಯಾತರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ವಕೀಲ ಎಂ.ಎಂ. ಸುತಾರ, ಮಹಿಬೂಬಿ, ಶೀತಲ್ ಮೇಲ್ಗಡೆ ಮಾತನಾಡಿದರು.

ಅಲ್ಪ ಸಂಖ್ಯಾತರ ಮುಖಂಡರಾದ ಅಬ್ಬಾಸಅಲಿ ಚೌಧರಿ, ಡಿ.ಎಚ್. ಕಲಾಲ, ನಾಜಮೀನ ಮೋಮಿನ, ಮೌಲಾನಾ ಮಿರ್ದೆ, ಮುದಸರ್ ವಾಲಿಕಾರ, ವಕೀಲ ಸಮದ್ ಸುತಾರ ಇತರರು ಪಾಲ್ಗೊಂಡಿದ್ದರು.

`ಧರ್ಮ, ಸಂಸ್ಕೃತಿ ರಕ್ಷಕ~
ಬಸವನಬಾಗೇವಾಡಿ: ದೇಶದ ಧರ್ಮ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವುದಕ್ಕೆ ಅಸಂಖ್ಯಾತ ದೇಶಭಕ್ತರ ಪರಿಶ್ರಮವಿದೆ. ಅವರಲ್ಲಿ ಛತ್ರಪತಿ ಶಿವಾಜಿ ಅವರ ಕೊಡುಗೆ ಸ್ಮರಣೀಯ ಎಂದು ಶಾಸಕ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.

ಸ್ಥಳೀಯ ವಿಠೋಬ ದೇವಸ್ಥಾನದಲ್ಲಿ ತಾಲ್ಲೂಕು ಆಡಳಿತ ಸೋಮವಾರ ಹಮ್ಮಿಕೊಂಡಿದ್ದ ಶಿವಾಜಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಮೇಲೆ ಪರಕೀಯರು ಆಕ್ರಮಣ ಮಾಡಿದಾಗ ಅವರನ್ನು ಧೈರ್ಯದಿಂದ ಎದುರಿಸಿದ ಉದಾಹರಣೆಗಳು ಇತಿಹಾಸ ಪುಟಗಳಲ್ಲಿ ಸಾಕಷ್ಟಿವೆ. ಅಂತಹ ಧೈರ್ಯ, ಸಾಹಸ ಮೆರೆದು ಹಿಂದು ಸಾಮ್ರಾಜ್ಯ ರಕ್ಷಿಸಿದ ಕೀರ್ತಿ ಶಿವಾಜಿ ಮಹಾರಾಜರದು. ಆದಿಲಷಾಹಿಗಳೊಂದಿಗೆ ನಿರಂತರ ಸಂಘರ್ಷ ನಡೆಸಿ ಸಾಮ್ರಾಜ್ಯ ರಕ್ಷಿಸಿದ್ದರು ಎಂದು ಹೇಳಿದರು.

ಉಪನ್ಯಾಸಕ ಸಂಗಮೇಶ ಪೂಜಾರಿ ಮಾತನಾಡಿ ಗುಡ್ಡಗಾಡಿನ ಮಾವಳಿ ಜನಾಂಗವನ್ನು ಸಂಘಟಿಸಿ ಅವರಿಗೆ ಸಾಹಸ ಕಲೆ ಕಲಿಸಿ ಕೊಟ್ಟು ಬದುಕನ್ನು ರೂಪಿಸಿದವರು ಶಿವಾಜಿ ಮಹಾರಾಜರು. ಧರ್ಮ ರಕ್ಷಣೆ ಪ್ರತಿಯೊಬ್ಬರಿಂದ ನಡೆಯಬೇಕು ಎಂಬುದನ್ನು ತಿಳಿಸಿಕೊಟ್ಟರು ಎಂದರು.

ವಕೀಲ ಶಿವಾನಂದ ಕಲ್ಲೂರ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷ ಜಗದೀಶ ಕೊಟ್ರಶೆಟ್ಟಿ ಮಾತನಾಡಿದರು.

ಸಹಕಾರಿ ಮಹಾಮಂಡಳದ ನಿರ್ದೇಶಕ ಶಿವನಗೌಡ ಬಿರಾದಾರ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಂಗಮೇಶ ಓಲೆಕಾರ, ಜಿ.ಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ನಾಯಕ, ಬಿಜೆಪಿ ಬ್ಲಾಕ್ ಘಟಕದ ಅಧ್ಯಕ್ಷ ಸಂಗನಗೌಡ ರಾಯಗೊಂಡ, ಪುರಸಭೆ ಮುಖ್ಯಾಧಿಕಾರಿ ಅರವಿಂದ ಜಮಖಂಡಿ, ಅಣ್ಣಾಸಾಹೇಬ ಪವಾರ ವೇದಿಕೆಯಲ್ಲಿದ್ದರು.
ತಹಸೀಲ್ದಾರ ಮಹಾದೇವಪ್ಪ ಮುರಗಿ ಸ್ವಾಗತಿಸಿದರು, ಅಂಬೋಜಿ ಪವಾರ ವಂದಿಸಿದರು, ಆರ್.ಜಿ.ಅಳ್ಳಗಿ ಕಾರ್ಯಕ್ರಮ ನಿರೂಪಿಸಿದರು.

ಆಕರ್ಷಕ ಮೆರವಣಿಗೆ: ಛತ್ರಪತಿ ಶಿವಾಜಿ ಜಯಂತಿ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಿವಾಜಿ ಮತ್ತು ಬಸವೇಶ್ವರರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.

ಮೆರವಣಿಗೆಯಲ್ಲಿ ಸಿದ್ರಾಮ ಪಾತ್ರೋಟಿ, ಗೋಪಾಲ ಪವಾರ, ಅನೀಲ ಪವಾರ, ಪ್ರಕಾಶ ಜಾಧವ, ದತ್ತು ಪವಾರ, ಬಸವರಾಜ ಬಿಜಾಪುರ, ರಾಜು ಪೀರಂಗಿ, ವೆಂಕಟೇಶ ಕರಾಡೆ, ಜೋತಿಬಾ ಪವಾರ, ಸಮಾಜ ಕಲ್ಯಾಣ ಅಧಿಕಾರಿ ಜಿ.ಜಿ. ಪಾಟೀಲ, ತಾ.ಪಂ. ಇಒ ವಿ.ಎಂ. ಕೋನರಡ್ಡಿ, ಹೆಸ್ಕಾಂ ಅಧಿಕಾರಿ ಎಸ್.ಎಸ್. ದೊಡಮನಿ ಭಾಗವಹಿಸಿದ್ದರು.

ಸಂಭ್ರಮದ ಆಚರಣೆ
ತಾಳಿಕೋಟೆ: ಪಟ್ಟಣದ ವಿವಿಧೆಡೆ ಸೋಮವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಪುರಸಭೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷ ಎಂ.ಕೆ. ಚೋರಗಸ್ತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಮುಖ್ಯಾಧಿಕಾರಿ ಎಂ.ಆರ್. ದಾಯಿ ಮಾತನಾಡಿ, ಹಿಂದು ಸಾಮ್ರಾಜ್ಯದ ರಕ್ಷಕನಾಗಿದ್ದ ಶಿವಾಜಿಯು, ಅಪ್ಪಟ ದೇಶಪ್ರೇಮಿಯಾಗಿದ್ದನು ಎಂದರು.

ಪುರಸಭೆಯ ಸದಸ್ಯರಾದ ವಿಶ್ವನಾಥ ಬಬಲೇಶ್ವರ, ಗೋವಿಂದಸಿಂಗ್ ಗೌಡಗೇರಿ, ಸುರೇಶ ಹಜೇರಿ, ಶಶಿಧರ ಡಿಸಲೆ, ವಿಜಯಸಿಂಗ್ ಹಜೇರಿ, ಪ್ರಲ್ಹಾದ ಹಜೇರಿ, ಮರಾಠಾ ಸಮಾಜದ ಅಧ್ಯಕ್ಷ ಸಂಬಾಜಿ ವಾಡಕರ, ಹಿರಿಯ ಪತ್ರಕರ್ತ ಜಿ.ಟಿ. ಘೋರ್ಪಡೆ, ವಿಠ್ಠಲ ಮೊಹಿತೆ, ರಾವಜಿ ಕೊಡಗೆ, ಕಾಶಿನಾಥ ಮೊಹಿತೆ, ಗುಂಡು ಜಗತಾಪ, ಶಿವಾಜಿ ಮೊಹಿತೆ, ಮಾರುತಿ ಶಿಂಧೆ, ತಮ್ಮಣ್ಣ ದೇಶಪಾಂಡೆ, ಜುಮ್ಮಣ್ಣ ದಂಡಿನ, ಬಾಗಪ್ಪ ಬಿಳೇಭಾವಿ ಭಾಗವಹಿಸಿದ್ದರು. ರಮೇಶ ಮಾಡಬಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಶೇಷ ತಹಶೀಲ್ದಾರ ಕಚೇರಿ: ವಿಶೇಷ ತಹಶೀಲ್ದಾರ ಎಂ.ಎ.ಎಸ್. ಬಾಗವಾನ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವಾರ್ಪಣೆ ಮಾಡಿದರು.

ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಶಾಲೆಯಲ್ಲಿ ಮುಖ್ಯ ಶಿಕ್ಷಕ ಆರ್.ವೈ. ದಾಸರ ಶಿವಾಜಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕ ಎಸ್.ಎಸ್. ಗಡೇದ, ಶಿಕ್ಷಕರ ಪತ್ತು ಬೆಳೆಸುವ ಬ್ಯಾಂಕಿನ ಅಧ್ಯಕ್ಷ ಬಿ.ಎಸ್. ಮಾಳಿ, ಎಸ್.ಎನ್. ಕಡಕಲ್ಲ, ಆರ್.ಎಲ್. ಕುಲಕರ್ಣಿ, ತೇಲಿ, ಬೇದರಕರ, ಶಿಕ್ಷಕಿಯರಾದ ಸುನಂದಾ ನೀರಲಗಿ, ಗಂಗೂ ಬಿರಾದಾರ, ದೊಡಮನಿ, ದೇವಶೆಟ್ಟಿ ಉಪಸ್ಥಿತರಿದ್ದರು.

ಹೋರಾಟಗಾರ
ಇಂಡಿ: ಶಿವಾಜಿ ಮಹಾರಾಜರು ಸ್ವಾಭಿಮಾನಿಯಾಗಿ ದೇಶದ ರಕ್ಷಣೆ ಮತ್ತು ಹಿಂದೂ ಸಮಾಜಕ್ಕಾಗಿ ಹೋರಾಡಿದ ಮಹಾನ್ ದೇಶಭಕ್ತ ಎಂದು ಶಾಸಕ ಡಾ. ಸಾರ್ವಭೌಮ ಬಗಲಿ ಅಭಿಪ್ರಾಯಪಟ್ಟರು.

ಅವರು ಸೋಮವಾರ ತಹಶೀಲ್ದಾರ ಕಚೇರಿಯಲ್ಲಿ ತಾಲ್ಲೂಕು ಆಡಳಿದ ಏರ್ಪಡಿಸಿದ್ದ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಸಮಾರಂಭದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಶಿವಾಜಿ ಮಹಾರಾಜರ ಆದರ್ಶ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೇಶ ಸೇವೆ ಮಾಡಿದ ಅವರ ತತ್ವಗಳು ಪ್ರತಿಯೊಬ್ಬ ಭಾರತೀಯನಿಗೆ ಸ್ಫೂರ್ತಿಯಾಗಿದೆ ಎಂದರು.

ಪುರಸಭೆಯ ಮಾಜಿ ಅಧ್ಯಕ್ಷ ಯಮುನಾಜಿ ಸಾಳುಂಕೆ, ತಹಶೀಲ್ದಾರ ಜಿ.ಎಲ್. ಮೇತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಅಧ್ಯಕ್ಷ ದೇವೇಂದ್ರ ಕುಂಬಾರ, ಉಪಾಧ್ಯಕ್ಷೆ ರೇಣುಕಾ ಐರೋಡಗಿ, ತಾ.ಪಂ. ಇಒ ಜಯರಾಮ ಚವ್ಹಾಣ, ಶ್ರೀಶೈಲಗೌಡ ಪಾಟೀಲ, ಬುದ್ದುಗೌಡ ಪಾಟೀಲ, ಪುರಸಭೆಯ ಮಾಜಿ ಉಪಾಧ್ಯಕ್ಷ ಪ್ರದೀಪ ಮೂರಮನ, ಜೈಭೀಮದಳದ ಸಂಚಾಲಕ ಪ್ರಶಾಂತ ಕಾಳೆ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಡಿ. ಪಾಟೀಲ, ಅಯೂಬ್ ನಾಟೀಕಾರ, ರಾಜು ಹಾದಿಮನಿ, ಮುತ್ತಪ್ಪ ಪೋತೆ, ಕೆ.ಆರ್. ಅವರಾದಿ, ಎಸ್.ಆರ್. ಮುಜಗೊಂಡ ಉಪಸ್ಥಿತರಿದ್ದರು.

ಶಿವಾಜಿ ದೇಶದ ಆಸ್ತಿ
ಸಿಂದಗಿ: ರಾಜ್ಯ ಸರ್ಕಾರ ಪ್ರಸ್ತುತ ವರ್ಷದಿಂದ ದೇಶಪ್ರೇಮ ಜಾಗೃತಗೊಳಿಸುವ ಹಿನ್ನೆಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮವನ್ನು ಸರ್ಕಾರದಿಂದ ಆಚರಿಸಲು ಮುಂದಾಗಿರುವುದು ಅತ್ಯಂತ ಪ್ರಶಂಸನೀಯ ಕಾರ್ಯ ಎಂದು ಶಾಸಕ ರಮೇಶ ಭೂಸನೂರ ಅಭಿಪ್ರಾಯಪಟ್ಟರು.

ಸೋಮವಾರ ಪಟ್ಟಣದ ಮಿನಿವಿಧಾನಸೌಧ ಆವರಣದಲ್ಲಿ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೊಸ ಪೀಳಿಗೆ ಇತಿಹಾಸ ಮರೆಯಬಾರದು. ಇತಿಹಾಸ ಗೊತ್ತಿಲ್ಲದವರಿಂದ ಇತಿಹಾಸ ನಿರ್ಮಾಣ ಅದೆಂತು ಸಾಧ್ಯ ಎಂದು ಭೂಸನೂರ ಪ್ರಶ್ನಿಸಿದರು.

ನಾಡಿನಾದ್ಯಂತ ಶಿವಾಜಿ ಜೀವನ ಚರಿತ್ರೆಯನ್ನು ಪ್ರಚುರಪಡಿಸುವ ಕಾರ್ಯ ನಡೆಯಬೇಕಿದೆ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ ಡಾ.ಶಂಕ್ರಣ್ಣ ವಣಕಿಹಾಳ ಮಾತನಾಡಿ, ಶಿವಾಜಿ ಯಾವುದೇ ಪ್ರಾಂತ್ಯ, ಧರ್ಮ, ಭಾಷೆಗೆ ಸೀಮಿತವಲ್ಲ. ಅವರು ಸಮಗ್ರ ದೇಶದ ಆಸ್ತಿ ಎಂದರು.

ಆಲಮೇಲದ ಸುರೇಶ ಬಂಡಗಾರ ಮಾತನಾಡಿ, ಶಿವಾಜಿ ಸಮಗ್ರ ಜೀವನ ಚರಿತ್ರೆ ಪರಿಚಯಿಸಿದರು. ಜಿಪಂ ಸದಸ್ಯರು ಸಾಹೇಬಗೌಡ ಪಾಟೀಲ ವಣಕಿಹಾಳ, ಶರಣಪ್ಪ ಗುಬ್ಬೇವಾಡ, ತಾಪಂ ಇಒ ವೈ.ಎ. ಕಗ್ಗೋಡ ಉಪಸ್ಥಿತರಿದ್ದರು. ಎಂ.ಆರ್.ಕಬಾಡೆ ಸ್ವಾಗತಿಸಿ ನಿರೂಪಿಸಿದರು.

ಮೆರವಣಿಗೆ: ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರದ ಭವ್ಯ ಮೆರವಣಿಗೆ ಪಟ್ಟಣದಲ್ಲಿ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.