ಸೂರತ್ ಸೀರೆ ಅಲೆಯ ಅಬ್ಬರದಲ್ಲಿ ಮಂಕಾದ ಮಗ್ಗದ ಸೀರೆ * ಸ್ತಬ್ಧವಾದ ಮಗ್ಗಗಳ ಸದ್ದು * ಸುಧಾರಿಸದ ನೇಕಾರರ ಬದುಕು

ದೊಡ್ಡಬಳ್ಳಾಪುರದ ಸಾಂಪ್ರದಾಯಿಕ ಸೀರೆಗಳು

ದೊಡ್ಡಬಳ್ಳಾಪುರದ ಸಾಂಪ್ರದಾಯಿಕ ಸೀರೆಗಳು

ದೊಡ್ಡಬಳ್ಳಾಪುರದ ಸಾಂಪ್ರದಾಯಿಕ ಸೀರೆಗಳು
ದೊಡ್ಡಬಳ್ಳಾಪುರದ ಸೀರೆಗಳನ್ನು ಬೃಹತ್ ಮಿಲ್‌ಗಳಲ್ಲಿ ತಯಾರು ಮಾಡಲಾಗುತ್ತಿರುವುದು ನೇಕಾರರಿಗೆ ಸಂಕಷ್ಟವಾಗಿದೆ. ಇದಕ್ಕೆ ಗೃಹ ಕೈಗಾರಿಕೆಗಳಲ್ಲಿ ತಯಾರಾಗುವ ಉತ್ಪನ್ನಗಳನ್ನು ತಯಾರಿಸಬಾರದು ಎಂದು 2006ರ ಕಾಯ್ದೆಯಲ್ಲಿ ಇರುವ ಅಂಶಗಳ ಆಧಾರದ ಮೇಲೆ ಈ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತಂದು ಕಾಯ್ದೆ ರೂಪಿಸಲು ಮನವಿ ಮಾಡಲಾಗುವುದು. ನೇಕಾರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬೆಂಬಲ ನೀಡುವೆ.ಧೀರಜ್ ಮುನಿರಾಜು, ಶಾಸಕ, ದೊಡ್ಡಬಳ್ಳಾಪುರ
ದೊಡ್ಡಬಳ್ಳಾಪುರದಲ್ಲಿ ಜವಳಿ ಉತ್ಪನ್ನ ಮಾರುಕಟ್ಟೆ ಸಂಕಿರಣ ಶಿಲಾನ್ಯಾಸ ಶೀಘ್ರವೇ ಆಗಬೇಕು. ಎಲ್ಲಾ ಮಗ್ಗದ ಘಟಕಗಳು ಒಂದೇ ಜಾಗದಲ್ಲಿ ನಿರ್ವಹಿಸುವಂತ ಪವರ್ ಲೂಮ್ ವಸಾಹತು ನಿರ್ಮಿಸಬೇಕು. ತೆಲಂಗಾಣ ರಾಜ್ಯದಂತೆ ಸರ್ಕಾರವೇ ನೇಕಾರರಿಂದ ಸೀರೆಗಳನ್ನು ಖರೀದಿಸಬೇಕಿದೆಬಿ.ಜಿ. ಹೇಮಂತರಾಜು,ಅಧ್ಯಕ್ಷ, ನೇಕಾರ ಹೋರಾಟ ಸಮಿತಿ
ನೇಕಾರರು ನೇಯುವ ಬಟ್ಟೆಗಳನ್ನು ಸೂರತ್ ಹಾಗೂ ಇತರ ರೇಪಿಯರ್ ಮಗ್ಗಗಳಲ್ಲಿ ತಯಾರು ಮಾಡುವಂತಿಲ್ಲ. ಈ ಬಗ್ಗೆ ರೇಪಿಯರ್ ಮಗ್ಗಗಳ ಮಾಲೀಕರ ವಿರುದ್ಧ ಕೈಮಗ್ಗ ಮೀಸಲಾತಿ ಅಧಿನಿಯಮದಂತೆ ಜಾಗೃತ ದಳದ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕುವಿ.ನರಸಿಂಹಮೂರ್ತಿ,ಅಧ್ಯಕ್ಷ, ಟೆಕ್ಸ್‌ಟೈಲ್ ವೀವರ್ಸ್ ಅಸೋಸಿಯೇಶನ್
ಮುಕ್ತ ವ್ಯಾಪರ ಒಪ್ಪಂದ ಜಾಗತೀಕರಣದ ಪ್ರಭಾವದಿಂದ ನೇಕಾರರು ಮಾರಾಟ ಮಾಡುವ ಸೀರೆಗಳಿಗೆ ಮಾರುಕಟ್ಟೆ ಇಲ್ಲದಂತಾಗಿ ನೇಕಾರರು ಸಂಕಷ್ಟದಲ್ಲಿದ್ದಾರೆ. ಈ ಹಿಂದೆ ನೇಕಾರರ ಹೋರಾಟದ ಫಲವಾಗಿ ರಾಜ್ಯ ಉಚಿತ ವಿದ್ಯುತ್ ಸೌಲಭ್ಯಗಳು ಸರ್ಕಾರದಿಂದ ದೊರೆತಿತ್ತು. ಈಗ ಸರ್ಕಾರ ಕಚ್ಚಾ ವಸ್ತುಗಳ ಬೆಲೆ ಕಡಿಮೆ ಮಾಡುವುದರೊಂದಿಗೆ, ನೇಕಾರರು ಉತ್ಪಾದಿಸಿದ ಬಟ್ಟೆಗಳನ್ನು ಖರೀದಿಸುವ ವ್ಯವಸ್ಥೆ ಮಾಡಬೇಕಿದೆದೊಡ್ಡಬಳ್ಳಾಪುರ ನೇಕಾರರ ಸಂಘ
ಫ್ಯಾಷನ್ ಸೀರೆಗಳನ್ನು ಮಾತ್ರ ಸೂರತ್‌ನಲ್ಲಿ ನೇಯಲಾಗುತಿತ್ತು.ಈಗ ಸಾಂಪ್ರಾದಾಯಿಕ ಸೀರೆಗಳನ್ನೂ ನೇಯಲಾಗುತ್ತಿದೆ. ಸೂರತ್‌ನ ಶಟಲ್ ಲೆಸ್ (ಲಾಳಿ ಇಲ್ಲದ) ವಿದ್ಯುತ್ ಮಗ್ಗಗಳ ಸಂಖ್ಯೆಯೇ ಹೆಚ್ಚು. ಈ ಮಾದರಿಯ ಮಗ್ಗದಲ್ಲಿ ನೇಯುವ ಸಾಂಪ್ರಾದಾಯಿಕ ಸೀರೆಗಳ ಗುಣಮಟ್ಟ ಅಷ್ಟಕ್ಕಷ್ಟೆ.ಲಕ್ಷ್ಮೀನಾರಾಯಣ, ದೊಡ್ಡಬಳ್ಳಾಪುರ
ನೇಕಾರರು ಭಾವನಾತ್ಮಕವಾಗಿ ಯೋಚಿಸದೆ, ವಾಸ್ತವ ಸಂಗತಿ ಅರ್ಥ ಮಾಡಿಕೊಳ್ಳಬೇಕಿದೆ. ಇದು ಸರ್ಕಾರದ ಕಾಯ್ದೆಗೆ ಸಂಬಂಧಿಸಿದ ವಿಚಾರವಾಗಿರುವುದರಿಂದ ನಿರಂತರ ಹೋರಾಟ ಹಾಗೂ ಒತ್ತಾಯದ ಮೂಲಕ ಬಗೆಹರಿಸಿಕೊಳ್ಳಬೇಕಿದೆ.ವೇಣುಗೋಪಾಲ್, ಅಧ್ಯಕ್ಷ, ನೇಕಾರ ವೇದಿಕೆ
ನಾವು ಮಾರುತ್ತಿರುವ ಬೆಲೆಗಿಂತ ಅರ್ಧ ಬೆಲೆಗೆ ಮಾರಾಟ ಮಾಡಿ ನೇಕಾರಿಕೆ ಉದ್ಯಮವನ್ನು ಹಾಳು ಮಾಡಲಾಗುತ್ತಿದೆ. ಸರ್ಕಾರ ಈ ಬಗ್ಗೆ ಕಾಯ್ದೆ ರೂಪಿಸಿ ನೇಕಾರರ ಹಿತ ಕಾಪಾಡಬೇಕೆಂದು ನೇಕಾರರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಪಿ.ಎ.ವೆಂಕಟೇಶ್ ಒತ್ತಾಯಿಸಿದರು.ನಾವು ಮಾರುತ್ತಿರುವ ಬೆಲೆಗಿಂತ ಅರ್ಧ ಬೆಲೆಗೆ ಮಾರಾಟ ಮಾಡಿ ನೇಕಾರಿಕೆ ಉದ್ಯಮವನ್ನು ಹಾಳು ಮಾಡಲಾಗುತ್ತಿದೆ. ಸರ್ಕಾರ ಈ ಬಗ್ಗೆ ಕಾಯ್ದೆ ರೂಪಿಸಿ ನೇಕಾರರ ಹಿತ ಕಾಪಾಡಬೇಕುಪಿ.ಎ.ವೆಂಕಟೇಶ್, ಅಧ್ಯಕ್ಷ, ನೇಕಾರರ ಹಿತರಕ್ಷಣಾ ಸಮಿತಿ