ಬೇಳೆ ಬೇಯಿಸಿಕೊಳ್ಳಲು ಜೀವಂತ:
ಕಳಸಾ ಬಂಡೂರಿ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ 11 ತಾಲ್ಲೂಕಿನ ಜನರ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರವಾಗುವ ಮಹತ್ವದ ಯೋಜನೆ. ಆದರೆ, ಮಹದಾಯಿ ನೀರಿನ ಹಂಚಿಕೆ ಸಂಬಂಧ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಹಲವು ವರ್ಷಗಳಿಂದ ವಿವಾದ ನಡೆಯುತ್ತಿದೆ. ಇದು ದೊಡ್ಡ ಸಮಸ್ಯೆ ಏನಲ್ಲ; ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಜೀವಂತವಾಗಿಟ್ಟಿವೆ ಅಷ್ಟೇ ಎಂದು ರೈತ ಮುಖಂಡರು ನೇರವಾಗಿ ಆರೋಪಿಸಿದ್ದಾರೆ...