ಸೋಮವಾರ, ಜುಲೈ 26, 2021
26 °C

ಮತ್ತೆ 49 ಕೋವಿಡ್‌ ಪ್ರಕರಣಗಳು ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಜಿಲ್ಲೆಯಲ್ಲಿ ಬುಧವಾರ ಮತ್ತೆ 49 ಕೋವಿಡ್‌ ಪ್ರಕರಣಗಳು ದೃಢವಾಗಿವೆ. ಇದರಿಂದ ಸೋಂಕಿತರ ಸಂಖ್ಯೆ 1,501ಕ್ಕೆ ಏರಿಕೆಯಾಗಿದೆ. ಹಲವಾರು ಜನ ಸೋಂಕಿತರು ಪ್ರಯಾಣದ ಇತಿಹಾಸವೇ ಹೊಂದಿಲ್ಲ. ಇನ್ನು ಕೆಲವರು ತೆಲಾಂಗಣ, ಮಹಾರಾಷ್ಟ್ರದಿಂದ ಬಂದಿದ್ದಾರೆ.

ಪೊಲೀಸರಿಗೂ ತಗುಲಿದ ಕೋವಿಡ್‌:

ಡಿ.ಆರ್.ಪೊಲೀಸ್‌, ವಸತಿ ಗೃಹ, ಗ್ರಾಮೀಣ, ಸಂಚಾರಿ ಪೊಲೀಸ್‌ ಠಾಣೆ ಸಿಬ್ಬಂದಿಗೆ ಕೋವಿಡ್‌ ದೃಢಪಟ್ಟಿದೆ. ಶಹಾಪುರ ಬಸ್‌ ಡಿಪೋ, ಸೈದಾಪುರ ಬಸ್‌ ನಿಲ್ದಾಣ, ವನಕೇರಿ ಬಡಾವಣೆ, ಮಡ್ನಾಳ ಕ್ಯಾಂಪ್‌ ನಿವಾಸಿಗಳು ಸೇರಿದಂತೆ 49 ಜನರಲ್ಲಿ ಕೋವಿಡ್‌ ಪತ್ತೆಯಾಗಿದೆ. 

ಬುಧವಾರ 47ಜನ ಸೋಂಕುನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಜಿಲ್ಲಾಸ್ಪತ್ರೆಯಿಂದ 32, ಶಹಾಪುರ ಕೋವಿಡ್‌ ಕೇರ್‌ ಸೆಂಟರ್‌ನಿಂದ 15 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದ 1,097 ಗುಣಮುಖರಾದಂತೆ ಆಗಿದೆ. 402 ಸಕ್ರಿಯ ಪ್ರಕರಣಗಳು ಇವೆ. ಪ್ರಾಥಮಿಕ ಸಂಪರ್ಕದಲ್ಲಿದ್ದ 91, ದ್ವಿತೀಯ ಸಂಪರ್ಕದಲ್ಲಿದ್ದ 135 ಜನರನ್ನು ಬುಧವಾರ ಪತ್ತೆಹಚ್ಚಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.