ಸೋಮವಾರ, ಜೂನ್ 21, 2021
21 °C

ಯಾದಗಿರಿಯಲ್ಲಿ ಮತ್ತೆ 67 ಜನರಿಗೆ ಕೋವಿಡ್‌ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಜಿಲ್ಲೆಯಲ್ಲಿ 67 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಸೋಂಕಿತರ ಸಂಖ್ಯೆ 3,129ಕ್ಕೆ ಏರಿಕೆಯಾಗಿದೆ.

ಯಾದಗಿರಿ ತಾಲ್ಲೂಕಿನಲ್ಲಿ 20, ಶಹಾಪುರ ತಾಲ್ಲೂಕಿನಲ್ಲಿ 24, ವಡಗೇರಾ ತಾಲ್ಲೂಕಿನಲ್ಲಿ 8, ಸುರಪುರ ತಾಲ್ಲೂಕಿನಲ್ಲಿ 8, ಹುಣಸಗಿ ತಾಲ್ಲೂಕಿನಲ್ಲಿ 5, ಅಂತರ ಜಿಲ್ಲೆಯ 2 ಸೇರಿದಂತೆ 67 ಕೋವಿಡ್‌ ಪ್ರಕರಗಳು ಪತ್ತೆಯಾಗಿವೆ.  438 ಸೋಂಕಿತ ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಯಾದಗಿರಿ ತಾಲ್ಲೂಕಿನಲ್ಲಿ 6, ಗುರುಮಠಕಲ್ ತಾಲ್ಲೂಕಿನಲ್ಲಿ 2, ಶಹಾಪುರ ತಾಲ್ಲೂಕಿನಲ್ಲಿ 7 ಜನ ಸೇರಿದಂತೆ 15 ಜನ ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ ಯಾದಗಿರಿ ತಾಲ್ಲೂಕಿನಲ್ಲಿ 1,049, ಗುರುಮಠಕಲ್ ತಾಲ್ಲೂಕಿನಲ್ಲಿ 395, ಶಹಾಪುರ ತಾಲ್ಲೂಕಿನಲ್ಲಿ 428, ವಡಗೇರಾ ತಾಲ್ಲೂಕಿನಲ್ಲಿ 35, ಸುರಪುರ ತಾಲ್ಲೂಕಿನಲ್ಲಿ 185, ಹುಣಸಗಿ ತಾಲ್ಲೂಕಿನಲ್ಲಿ 42 ಸೇರಿದಂತೆ 2,134 ಸೋಂಕಿತರು ಗುಣಮುಖರಾಗಿದ್ದಾರೆ.

ಯಾದಗಿರಿ ತಾಲ್ಲೂಕಿನಲ್ಲಿ 223, ಗುರುಮಠಕಲ್ ತಾಲ್ಲೂಕಿನಲ್ಲಿ 60, ಶಹಾಪುರ ತಾಲ್ಲೂಕಿನಲ್ಲಿ 281, ವಡಗೇರಾ ತಾಲ್ಲೂಕಿನಲ್ಲಿ 39, ಸುರಪುರ ತಾಲ್ಲೂಕಿನಲ್ಲಿ 222, ಹುಣಸಗಿ ತಾಲ್ಲೂಕಿನಲ್ಲಿ 152 ಸೇರಿದಂತೆ 977 ಸಕ್ರಿಯ ಪ್ರಕರಣಗಳಿವೆ.

ಕೋವಿಡ್‌ ಅಂಕಿ ಅಂಶ
ಜಿಲ್ಲೆಯಲ್ಲಿ ಒಟ್ಟು;3,129
ದಿನದ ಏರಿಕೆ;67
ಗುಣಮುಖ;15
ಸಕ್ರಿಯ:978
ಸಾವು;17

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.