ಬುಧವಾರ, ಜುಲೈ 28, 2021
29 °C

ಯಾದಗಿರಿ: ಬಡ ರೈತನ ಮಗಳಿಗೆ ಶೇ 98 ಅಂಕ

ಭೀಮಶೇನರಾವ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಹುಣಸಗಿ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ಯಡಹಳ್ಳಿ ಗ್ರಾಮದ ಬಡ ರೈತ ಕುಟುಂಬದ ವಿದ್ಯಾರ್ಥಿನಿ ಸಾಬವ್ವ ದೊಡ್ಡಮನಿ ಅವರು ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಒಟ್ಟು 588 (ಶೇ 98) ಅಂಕ ಪಡೆದಿದ್ದಾರೆ.

‘ಪ್ರಜಾವಾಣಿ’ ಯೊಂದಿಗೆ ಮಾತನಾಡಿದ ಸಾಬವ್ವ, ‘ಬಡ ಕುಟುಂಬದಿಂದ ಬಂದಿರುವ ನನಗೆ ತಂದೆ ನಿಂಗಪ್ಪ ಹಾಗೂ ತಾಯಿ ಅಯ್ಯಮ್ಮ ಅವರು ಕೊಟ್ಟೂರು ಕಾಲೇಜಿಗೆ ಸೇರಿಸಿದರು. ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆಯಬೇಕು ಎಂಬ ಗುರಿಯೊಂದಿಗೆ ಅಧ್ಯಯನದಲ್ಲಿ ತೊಡಗಿದೆ. ಆದರೂ ನನಗೆ ಈ ಫಲಿತಾಂಶ ಸಂತಸ ತಂದಿದೆ‘ ಎಂದರು.

‘ಶಿಕ್ಷಣದಲ್ಲಿ ಶೇ 100 ಅಂಕ ಬಂದಿವೆ. ಸಂಸ್ಕೃತದ ಗಂಧವೇ ಗೊತ್ತಿರಲಿಲ್ಲ. ಕಷ್ಟಪಟ್ಟು ಅಧ್ಯಯನ ಮಾಡಿದ್ದರಿಂದ ಆ ವಿಷಯದಲ್ಲಿ ಶೇ 99 ಹಾಗೂ ಐಚ್ಚಿಕ ಕನ್ನಡದಲ್ಲಿ ಶೇ 99 ಅಂಕ ಬಂದಿವೆ. ಪ್ರತಿ ದಿನ ಬೆಳಿಗ್ಗೆ 4 ಗಂಟೆಯಿಂದಲೇ ಅಧ್ಯಯನ ಮಾಡುತ್ತಿದ್ದೆ. ಮುಂದೆ ಐಎಎಸ್ ಮಾಡುವ ಕನಸು ಹೊಂದಿದ್ದೇನೆ’ ಎಂದು ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು