ಕೆಂಭಾವಿ: ಪಟ್ಟಣ ಸಮೀಪದ ನಗನೂರ ಗ್ರಾಮದ ಹತ್ತಿರ ಚಲಿಸುತ್ತಿದ್ದ ಕಾರಿಗೆ ತಾಂತ್ರಿಕ ದೋಷ ಕಂಡು ಬಂದು ರಸ್ತೆ ಮಧ್ಯದಲ್ಲೇ ಹೊತ್ತಿ ಉರಿದಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.

ತಳ್ಳಳ್ಳಿ (ಬಿ) ಗ್ರಾಮದ ಸಿದ್ಧರಾಮ ಹರವಾಳ ಅವರು ಮಂಗಳವಾರ ಶಹಾಪುರದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಹೋಗಿ ಮರಳಿ ಕೆಂಭಾವಿ ಗ್ರಾಮಕ್ಕೆ ಕಾರಿನಲ್ಲಿ ಬರುತ್ತಿರುವಾಗ ಮಾರ್ಗ ಮಧ್ಯದಲ್ಲಿ ಏಕಾಏಕಿ ಕಾರಿನ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಕಾರು ಚಾಲಕ ಕೆಳಗಡೆ ಇಳಿದು ನೋಡುತ್ತಿದ್ದಂತೆ ಕ್ಷಣಾರ್ಧದಲ್ಲಿ ಬೆಂಕಿ ಸಂಪೂರ್ಣ ಕಾರಿಗೆ ಆವರಿಸಿದೆ. ಕೂಡಲೇ ಕಾರಿನಲ್ಲಿದ್ದವರು ಕೆಳಗಡೆ ಇಳಿದಿದ್ದಾರೆ. ಯಾವುದೇ ಅವಘಡ ಸಂಭವಿಸಿಲ್ಲ. ಅಗ್ನಿ ಶಾಮಕ ಠಾಣಾಧಿಕಾರಿ ಪ್ರಮೋದ ವಾಲಿ, ಸಿಬ್ಬಂದಿ ಮಲ್ಲಿಕಾರ್ಜುನ ತಳವಾರ, ಸದ್ಧಾಂ ಹುಸೇನ್, ಸಿ.ಬಿ. ಮುಜಾವಾರ, ಸುಭಾಶಚಂದ್ರ ಬಂದು ಕಾರಿನ ಬೆಂಕಿ ನಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.