ಸೋಮವಾರ, ಏಪ್ರಿಲ್ 6, 2020
19 °C
ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟ ಸಂಘಟನೆಯಿಂದ ಸ್ವ ಉದ್ಯಮ

ಮಹಿಳೆಯರೇ ನಡೆಸುತ್ತಿರುವ ಹೋಟೆಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಈ ಹೋಟೆಲ್‌ನಲ್ಲಿ ಮಾಲೀಕರಿಂದ ಹಿಡಿದು ಎಲ್ಲರೂ ಮಹಿಳೆಯರೇ ಇದ್ದಾರೆ. ಕಳೆದ ಎರಡು ವರ್ಷಗಳಿಂದ ಹೋಟೆಲ್‌ ಉದ್ಯಮ ಆರಂಭಿಸಿ ಯಶಸ್ವಿಯಾಗಿದ್ದಾರೆ.

ನಗರದ ತಾಲ್ಲೂಕು ಪಂಚಾಯಿತಿ ಬಳಿ ಇರುವ ಸ್ತ್ರೀ ಶಕ್ತಿ ಒಕ್ಕೂಟ ಸಂಘಟನೆಯಿಂದ 4 ಜನ ಮಹಿಳೆಯರೇ ಇದನ್ನು ನಿಭಾಯಿಸುತ್ತಿದ್ದಾರೆ. ಸಂಘದಲ್ಲಿ 10 ಜನ ಸದಸ್ಯೆಯರು ಇದ್ದಾರೆ.

ನಾಲ್ಕು ಜನ ಕೆಲಸವನ್ನು ಸಮಾನವಾಗಿ ಹಂಚಿಕೊಂಡು ಮಾಡುತ್ತಿದ್ದಾರೆ. ಅಡುಗೆ, ರೊಟ್ಟಿ, ಪಲ್ಯ, ಬಡಿಸುವುದು, ಸ್ವಚ್ಛತೆ ಮಾಡುವುದು ಸೇರಿದಂತೆ ಗ್ರಾಹಕರಿಗೆ ರುಚಿಯಾದ ಊಟ ಬಡಿಸುತ್ತಿದ್ದಾರೆ.  

ಸರ್ಕಾರದಿಂದ ₹10 ಲಕ್ಷ ಸಾಲ ತೆಗೆದುಕೊಂಡಿದ್ದಾರೆ. ಅದರಲ್ಲಿ ₹6 ಲಕ್ಷ ಕೊಟ್ಟು ಆಟೊ ಖರೀದಿಸಿದ್ದಾರೆ. ಇನ್ನುಳಿದ ಹಣದಲ್ಲಿ ಅಡುಗೆ ಸಮಾನು, ದವಸ, ಧಾನ್ಯ ಖರೀದಿಸಿದ್ದಾರೆ. ಉಳಿದ ಹಣವನ್ನು ಮತ್ತೆ ಸರ್ಕಾರಕ್ಕೆ ಮರಳಿಸಿದ್ದಾರೆ. ಇರುವ ಹಣದಲ್ಲಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ₹50ಕ್ಕೆ 2 ಜೋಳದ ರೊಟ್ಟಿ ಅಥವಾ ಚಪಾತಿ, ಎರಡು ರೀತಿಯ ಪಲ್ಯ, ಅನ್ನ, ಸಂಬಾರು, ಶೇಂಗಾ ಹಿಂಡಿ ಕೊಡುತ್ತಿದ್ದಾರೆ.

ಸರ್ಕಾರಿ ಕಾರ್ಯಕ್ರಮಗಳಿಗೆ ಊಟ ಇಲ್ಲಿಂದಲೇ

ನಗರದಲ್ಲಿ ವಿವಿಧ ಸರ್ಕಾರಿ ಇಲಾಖೆಗಳು, ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ ಸೇರಿದಂತೆ ವಿವಿಧ ಕಾರ್ಯಕ್ರಮ ಮಾಡಿದರೆ ಇವರಿಗೆ ಊಟ ತಯಾರಿಸಲು ಕರೆ ಬರುತ್ತದೆ. ರುಚಿ, ಶುಚಿ ಕಾಪಾಡಿಕೊಳ್ಳುವದರಿಂದ ತಮಗೆ ಊಟದ ಆರ್ಡರ್‌ ನೀಡುತ್ತಾರೆ ಎನ್ನುತ್ತಾರೆ ಸಂಘದ ಸದಸ್ಯರು.

‘ಒಂದೂವರೆ ವರ್ಷದ ಹಿಂದೆ ‘ಸವಿರುಚಿ’ ಎನ್ನುವ ಹೆಸರಿನಲ್ಲಿ ವಿವಿಧ ಬಗೆಯ ಆಹಾರ ತಯಾರಿಸಿ ಆಟೊ ಮೂಲಕ ಮಿನಿ ವಿಧಾನಸೌಧ, ತಹಶೀಲ್ದಾರ್‌ ಕಚೇರಿ ಸೇರಿದಂತೆ ವಿವಿಧ ಕಡೆ ಸಂಚರಿಸುತ್ತಿದ್ದರು. ಆಟೊ ಚಾಲಕರಿಗೆ ದಿನಕ್ಕೆ ₹500 ನೀಡಬೇಕಾಗಿದ್ದರಿಂದ 5 ತಿಂಗಳಿಂದ ಇದನ್ನು ನಿಲ್ಲಿಸಿದ್ದೇವೆ’ ಎನ್ನುತ್ತಾರೆ ಸಂಘದ ಅಧ್ಯಕ್ಷರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)