ಗುರುಮಠಕಲ್: ಪಟ್ಟಣದ ಹೊರವಲಯದ ಯಶೋಧಾ ಪೆಟ್ರೋಲ್ ಬಂಕ್ ಹತ್ತಿರಲಾರಿಯು ಚಾಲಕನ ನಿಯಂತ್ರಣ ತಪ್ಪಿ ತೆಲಂಗಾಣ ಸಾರಿಗೆ ಸಂಸ್ಥೆಯ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆಭಾನುವಾರ ಜರುಗಿದೆ.

ಇಬ್ಬರಿಗೆ ಗಂಭೀರ ಹಾಗೂ 20 ಜನರಿಗೆ ಸಣ್ಣಪುಟ್ಟ ಗಾಯಗ ಳಾಗಿವೆ.ಮೃತರನ್ನು ತೆಲಂಗಾಣ ರಾಜ್ಯದ ತಾಂಡೂರು ನಗರದ ವ್ಯಾಪ್ತಿಯ ಮಲ್ಲರೆಡ್ಡಿಪಲ್ಲಿ ಗ್ರಾಮದ ಚಂದ್ರಮ್ಮ ಬಿಚ್ಚಪ್ಪ (48) ಎಂದು ಗುರುತಿಸಲಾಗಿದೆ.

ಕೋಸಗಿ ಮೂಲದ ಯುವತಿ ಅಖಿಲಾ (17) ಅವರ ಎದೆಯ ಬಲಭಾಗದಲ್ಲಿ ಹಾಗೂ ಲಾರಿ ಚಾಲಕನಿಗೆ ಪಕ್ಕೆಲಬುಗಳಲ್ಲಿ ಕಬ್ಬಿಣದ ಸರಳು ನಾಟಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ನಗರಕ್ಕೆ ಕಳುಹಿಸಲಾಗಿದೆ.

ಮೂಳೆ ಮುರಿದವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಸಾಮಾನ್ಯ ಪೆಟ್ಟುಗಳಾಗಿರುವವರಿಗೆ ಗುರುಮಠಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಗುರುಮಠಕಲ್ ಸಿಪಿಐ ಹೊಸಕೇರಪ್ಪ, ಪಿಎಸೈ ಶೀಲಾದೇವಿ ಸ್ಥಳಕ್ಕೆ ಭೇಟಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.