ಸೋಮವಾರ, ಜುಲೈ 13, 2020
29 °C
4, 11 ವರ್ಷದ ಮಕ್ಕಳಿಗೂ ಸೋಂಕು ಪತ್ತೆ, 163ಕ್ಕೆ ಏರಿಕೆಯಾದ ಸೋಂಕಿತರು

ಮತ್ತೆ 7 ಜನರಿಗೆ ಕೋವಿಡ್‌–19 ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ ಗುರುವಾರ 4 ವರ್ಷ ಮತ್ತು 11 ವರ್ಷದ ಮಕ್ಕಳು ಸೇರಿದಂತೆ ಒಟ್ಟು 7 ಜನರಿಗೆ ಕೋವಿಡ್‌ –19 ದೃಢಪಟ್ಟಿದ್ದು, ಇದರಿಂದ ಸೋಂಕಿತರ ಸಂಖ್ಯೆ 163ಕ್ಕೆ ಏರಿಕೆಯಾಗಿದೆ. ಮೇ 23ರಿಂದ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ.

‌ಮೇ 23ರಂದು 72, ಮೇ 24ರಂದು 24, ಮೇ 25ರಂದು 15, ಮೇ 26ರಂದು 14, ಮೇ 27ರಂದು 16, ಮೇ 28ರಂದು 7 ಕೋವಿಡ್‌–19 ಪ್ರಕರಣಗಳು ಪತ್ತೆಯಾಗಿವೆ.

ಜಿಲ್ಲೆಯಲ್ಲಿ ಕೋವಿಡ್-19 ಖಚಿತಪಟ್ಟ 163 ಪ್ರಕರಣಗಳ ಪೈಕಿ 9 ಜನ ಗುಣಮುಖರಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ.

ಸುರಪುರ ತಾಲ್ಲೂಕಿನ ಬೇವಿನಾಳ ಎಸ್.ಕೆ ಗ್ರಾಮದ 28 ವರ್ಷದ ಪುರುಷ (ಪ್ರಕರಣ ಸಂಖ್ಯೆ 2475), ಬೇವಿನಾಳ ಎಸ್.ಕೆ ಗ್ರಾಮದ 24 ವರ್ಷದ ಪುರುಷ (ಪಿ-2476), ಬೇವಿನಾಳ ಎಸ್.ಕೆ ಗ್ರಾಮದ 28 ವರ್ಷದ ಪುರುಷ (ಪಿ-2477), ಯಾದಗಿರಿ ತಾಲ್ಲೂಕಿನ ಸೈದಾಪುರ ಗ್ರಾಮದ 24 ವರ್ಷದ ಮಹಿಳೆ (ಪಿ-2478), ಶಹಾಪುರ ತಾಲ್ಲೂಕಿನ ಉಕ್ಕಿನಾಳ ತಾಂಡಾದ 4 ವರ್ಷದ ಬಾಲಕ (ಪಿ-2479), ಗುರುಮಠಕಲ್ ನಗರದ 46 ವರ್ಷದ ಪುರುಷ (ಪಿ-2480), ಯಾದಗಿರಿ ತಾಲ್ಲೂಕಿನ ಮೋಟನಳ್ಳಿ ತಾಂಡಾದ 11 ವರ್ಷದ ಬಾಲಕನಿಗೆ (ಪಿ-2481) ಕೋವಿಡ್ ದೃಢಪಟ್ಟಿದೆ.

ಸೋಂಕಿತರೆಲ್ಲರೂ ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಮಹಾರಾಷ್ಟ್ರದ ಮುಂಬೈ, ಪುಣೆ ಮತ್ತು ಸೊಲ್ಲಾಪುರ ಸ್ಥಳಗಳಿಂದ ಜಿಲ್ಲೆಗೆ ಹಿಂದಿರುಗಿದರಾಗಿದ್ದಾರೆ. ಪ್ರಕರಣ ಸಂಖ್ಯೆ ಪಿ-2475, ಪಿ-2476, ಪಿ-2477 ವ್ಯಕ್ತಿಗಳು ಮೇ 15ರಂದು ಜಿಲ್ಲೆಗೆ ಆಗಮಿಸಿದ್ದರು. ಪಿ-2478, ಪಿ-2480 ವ್ಯಕ್ತಿಗಳು ಮೇ 21ರಂದು ಆಗಮಿಸಿದರೆ, ಪಿ-2479 ಮತ್ತು 2481 ವ್ಯಕ್ತಿಗಳು ಮೇ 13ರಂದು ಆಗಮಿಸಿದ್ದರು.

40,765 ಜನರ ಜ್ವರ ತಪಾಸಣೆ: ಜಿಲ್ಲೆಯಲ್ಲಿ ತೆರೆಯಲಾದ 5 ಜ್ವರ ತಪಾಸಣೆ ಕೇಂದ್ರಗಳಲ್ಲಿ ಗುರುವಾರ 142 ಜನ ಸೇರಿದಂತೆ ಮೇ 28ರವರೆಗೆ ಒಟ್ಟು 40,765 ಜನರ ಜ್ವರ ತಪಾಸಣೆ ಮಾಡಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹುಣಸಗಿ ತಾಲ್ಲೂಕಿನ ಸರ್ಕಾರಿ ಬಾಲಕರ ಪ್ರೌಢಶಾಲೆ ಕೇಂದ್ರದಲ್ಲಿ ಗುರುವಾರ 38 ಜನ ಸೇರಿದಂತೆ ಒಟ್ಟು 4,913 ಜನ, ಸುರಪುರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 10 ಸೇರಿದಂತೆ 8,880 ಜನ, ಶಹಾಪುರ ತಾಲ್ಲೂಕಿನ ಭೀಮರಾಯನಗುಡಿ ಯುಕೆಪಿ ಆಸ್ಪತ್ರೆಯಲ್ಲಿ 41 ಸೇರಿದಂತೆ ಒಟ್ಟು 6,877 ಜನ, ಗುರುಮಠಕಲ್‍ನ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ 21 ಸೇರಿದಂತೆ ಒಟ್ಟು 5,164 ಜನ, ಯಾದಗಿರಿ ಆಯುಷ್‌ ಆಸ್ಪತ್ರೆಯಲ್ಲಿ 32 ಸೇರಿದಂತೆ ಒಟ್ಟು 14,931 ಜನರ ಜ್ವರ ತಪಾಸಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು