ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ಅಂಬಿಗರ ಚೌಡಯ್ಯ ಸ್ಮರಣೆ

ಶ್ರದ್ಧಾ ಭಕ್ತಿಯಿಂದ ಅಂಬಿಗರ ಚೌಡಯ್ಯ ಜಯಂತಿ, ತತ್ವಾದರ್ಶ ಪಾಲಿಸಲು ಕರೆ
Last Updated 22 ಜನವರಿ 2021, 1:55 IST
ಅಕ್ಷರ ಗಾತ್ರ

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಆಚರಿಸಲಾಯಿತು.

ಸಮಾಜದ ಅಂಕುಡೊಂಕುಗಳನ್ನು ನೇರವಾಗಿ ಟೀಕೆ ಮಾಡಿದ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಮಾಡಿದರೆ ಸಾಲದು. ಅವರು ಹೇಳಿಕೊಟ್ಟಿರುವ ತತ್ವಗಳನ್ನು ಜೀವನದಲ್ಲಿ ಅನುಸರಿಸುವ ಮೂಲಕ ಜಾಗೃತರಾಗಬೇಕು ಎಂದು ಗಣ್ಯರು ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲಾ ಬಿಜೆಪಿ ಕಾರ್ಯಾಲಯ: ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ವಚನಕಾರ, ಶರಣ ಶ್ರೇಷ್ಠ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು.

ರಾಜ್ಯ ಸಂಘಟನಾ ಕಾರ್ಯದರ್ಶಿ ಹನುಮೇಗೌಡ ಬಿರನಕಲ್‌, ವಿಶ್ವನಾಥ ಸಿರವಾರ, ಹಣಮಂತರಾಯಗೌಡ ತೇಕರಾಳ, ಶರಣಪ್ಪ ಗುಳಗಿ, ಅಬ್ದುಲ್‌ ಕಹಿಮ್‌, ರಫಿಕ್‌ ಪಟೇಲ್‌ ಉಳ್ಳೆಸೂಗೂರ, ಮಲ್ಲಿಕಾರ್ಜುನ ಹೆಡಗಿಮುದ್ರ ಇದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟರೆಡ್ಡಿ ಅಬ್ಬೆತುಮಕೂರು ಮಾತನಾಡಿದರು. ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಲಲಿತಾ ಅನಪುರ, ಯುಡಾ ಅಧ್ಯಕ್ಷ ಬಸವರಾಜ ಚಂಡ್ರಕಿ, ನಗರಸಭೆ ಸದಸ್ಯರಾದ ಹಣಮಂತ ಇಟಗಿ, ಅಂಬಯ್ಯ ಶಾಬಾದಿ, ಸ್ವಾಮಿದೇವ ದಾಸನಕೇರಿ, ನಾಮನಿರ್ದೇಶಿತ ಸದಸ್ಯ ಗೋಪಾಲ ದಾಸನಕೇರಿ, ಸುನಿತಾ ಚವ್ಹಾಣ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಮೋದಿ, ರಾಜಶೇಖರ್ ಕಾಡಂನೋರ, ಮಲ್ಲು ಕೊಲಿವಾಡ ಇದ್ದರು.

ಜೆಡಿಎಸ್ ಕಾರ್ಯಾಲಯ: ನಗರದ ಜೆಡಿಎಸ್‌ ಕಾರ್ಯಾಲಯದಲ್ಲಿ ಅಂಬಿಗರ ಚೌಡಯ್ಯ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ನಾಲ್ವಡಿಗಿ ಗ್ರಾಮ: ಶಹಾಪುರ ತಾಲ್ಲೂಕಿನ ನಾಲ್ವಡಿಗಿ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 901ನೇ ಜಯಂತಿಯನ್ನು ಆಚರಿಸಲಾಯಿತು.

ಚೌಡಯ್ಯ ವೃತ್ತದಲ್ಲಿ ಚೌಡಯ್ಯನವರ ಭಾವಚಿತ್ರಕ್ಕೆ ಶಿವರಾಜ ಹೂಗಾರ ಪೂಜೆ ನೆರವೇರಿಸಿದರು. ಕೋಲಿ ಸಮಾಜದ ಮುಖಂಡ ಸಿದ್ದಪ್ಪ ದಳಪತಿ, ಅಬ್ದುಲ್ ನಬಿ ಹೊಸಳ್ಳಿ, ನಿವೃತ್ತ ಕಂಟ್ರೂಲರ್ ಇಸ್ಮಾಯಿಲ್‌ ಸಾಬ್ ಕುರುಕುಂದಿ, ಗ್ರಾ.ಪಂ ಸದಸ್ಯ ಭೀಮರಾಯ ಸುಂಗಲ್ಕರ್, ಸಿದ್ದಪ್ಪ ನಾಲ್ವಡಿಗಿ, ಈಶಪ್ಪ ಪುಟ್ಟಿ, ಮಹಾದೇವಪ್ಪ ಮಡಿವಾಳ, ನಿಂಗನಗೌಡ, ಶಿವರಾಜ್ ಬಡಿಗೇರ್, ಶರಣಪ್ಪ ಕಾಡಂಗೇರಾ, ಪ್ರಕಾಶ ಪೋತಪ್ಪ ಪೂಜಾರಿ, ಮರೆಪ್ಪ, ಭೀಮರಾಯ ಇದ್ದರು.

ಶ್ರೀಹರಿ ಪ್ಯಾರಾಮೆಡಿಕಲ್ ಕಾಲೇಜು: ನಗರದ ಶ್ರೀಹರಿ ಪ್ಯಾರಾಮೆಡಿಕಲ್ ಕಾಲೇಜು, ಯಶೋಧಾ ಪದವಿ ಮಹಾವಿದ್ಯಾಲಯದಲ್ಲಿ ನಿಜಶರಣ ಅಂಬಿಗರ ಚೌಡಯ್ಯನ 901ನೇ ಜಯಂತ್ಯುವ ಆಚರಿಸಲಾಯಿತು.

ಕಾಲೇಜಿನ ಪ್ರಾಚಾರ್ಯ ಸುಭಾಶ್ಚಂದ್ರ ಮಾನೇಗಾರ, ಉಪನ್ಯಾಸಕರಾದ ಅಯ್ಯಣ್ಣ, ಮಹಾದೇವಿ, ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಜಯ ಕರ್ನಾಟಕ ಸಂಘಟನೆ: ಜಯ ಕರ್ನಾಟಕ ಸಂಘಟನೆ ವತಿಯಿಂದ ಜಿಲ್ಲಾ ಕಚೇರಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ನವರ ಜಯಂತೋತ್ಸವ ಆಚರಿಸಲಾಯಿತು.

ಜಿಲ್ಲಾ ಘಟಕ ಅಧ್ಯಕ್ಷ ಬಿ.ಎನ್.ವಿಶ್ವನಾಥ್ ನಾಯಕ, ರಾಜ್ಯ ಕಾರ್ಯದರ್ಶಿ ವಿಜಯಕುಮಾರ ಮೊಗದಂಪುರ, ಜಿಲ್ಲಾ ಕಾರ್ಯಾಧ್ಯಕ್ಷ ಹಣಮಂತ ಪೂಜಾರಿ, ಉಪಾಧ್ಯಕ್ಷ ಶಿವರಾಜ ಗುತ್ತೆದಾರ್, ಗುರುಮಠಕಲ್ ತಾಲ್ಲೂಕು ಅಧ್ಯಕ್ಷ ನಾಗೇಶ್ ಗದ್ದಿಗಿ, ಮಾರುತಿ ಮುದ್ನಾಳ, ಬಸ್ಸು ನಾಯಕ, ಸಂತೋಷ, ಜಗಪ್ಪ, ಹಣಮಂತ ಬಿರನಾಳ ಇದ್ದರು.

ಕರ್ನಾಟಕ ರಕ್ಷಣಾ ವೇದಿಕೆ: ನಗರದ ಕರವೇ ಜಿಲ್ಲಾ ಕಾರ್ಯಾಲಯದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು.

ಕರವೇ ಜಿಲ್ಲಾ ಘಟಕ ಅಧ್ಯಕ್ಷ ಟಿ.ಎನ್.ಭೀಮುನಾಯಕ, ಮಲ್ಲು ಮಾಳಿಕೇರಿ, ವಿಶ್ವರಾಧ್ಯ ದಿಮ್ಮೆ, ಸಿದ್ದು ನಾಯಕ ಹತ್ತಿಕುಣಿ, ಸಾಹೇಬ್ ಗೌಡ ಗೌಡಗೇರಿ, ರಿಯಾಜ್ ಪಟೇಲ್, ಅಬ್ದುಲ್ ಅಜೀಜ್, ವಿಜಯ ರಾಠೋಡ್, ಹರೀಶ್ ವಾಲಿ ಇದ್ದರು.

- ಅಂಬಿಗರ ಚೌಡಯ್ಯ ಅವರನ್ನು ಜಾತಿಗೆ ಸೀಮಿತಗೊಳಿಸದೆ ಅವರ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪಾಲನೆ ಮಾಡಬೇಕು.

ಹನುಮೇಗೌಡ ಬಿರನಕಲ್,ರಾಜ್ಯ ಸಂಘಟನಾ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT