ಸೋಮವಾರ, ಜುಲೈ 4, 2022
23 °C

‘ಸಮಾಜದ ಅಂಕುಡೊಂಕು ತಿದ್ದಿದ ಶರಣ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ‘ವಚನಗಳ ಮೂಲಕವೇ ಸಮಾಜದಲ್ಲಿನ ಮೇಲು ಕೀಳು, ಅಸ್ಪೃಶ್ಯತೆ, ಜಾತಿ, ಮೂಢನಂಬಿಕೆ ಹಾಗೂ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿದ ನಿಜಶರಣ ಅಂಬಿಗರ ಚೌಡಯ್ಯ. ಅವರು ರಚಿಸಿರುವ ವಚನಗಳು ಇಂದಿಗೂ ಪ್ರಸ್ತುತವಾಗಿವೆ’ ಎಂದು ನಗರಸಭೆ ಅಧ್ಯಕ್ಷೆ ಸುಜಾತಾ ಜೇವರ್ಗಿ ಹೇಳಿದರು.

ನಗರದ ಭೋವಿಗಲ್ಲಿ ಅಂಬಿಗರ ಚೌಡಯ್ಯನ ಕಟ್ಟೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಚೌಡಯ್ಯ ಜಯಂತಿಯಲ್ಲಿ ಮಾತನಾಡಿದರು.

ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಮಾತನಾಡಿದರು.

ಗಂಗಾಮತ, ಕಬ್ಬಲಿಗ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಭಂಡಾರಿ ನಾಟೇಕರ್ ಮಾತನಾಡಿ, ‘ಮುಖ್ಯಮಂತ್ರಿಗಳು ಕೇಂದ್ರದ ಮೇಲೆ ಒತ್ತಡ ಹಾಕಿ ಗಂಗಾಮತ ಕಬ್ಬಲಿಗ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕು’ ಎಂದು ಆಗ್ರಹಿಸಿದರು.

ನಗರಸಭೆ ಉಪಾಧ್ಯಕ್ಷ ಮಹೇಶ್ ಪಾಟೀಲ್, ಸದಸ್ಯರಾದ ಮಾನಪ್ಪ ಚಳ್ಳಿಗಿಡ, ನರಸಿಂಹಕಾಂತ ಪಂಚಮಗಿರಿ, ವಿಷ್ಣು ಗುತ್ತೇದಾರ, ಪಿಐ ಸಾಹೇಬಗೌಡ ಪಾಟೀಲ್, ಪೌರಾಯುಕ್ತ ಜೀವನ್, ಸಂಘಟನಾಧಿಕಾರಿ ಓಂಕಾರ ಪೂಜಾರಿ, ವ್ಯವಸ್ಥಾಪಕ ಯಲ್ಲಪ್ಪ ನಾಯಕ, ನಗರ ಘಟಕಾಧ್ಯಕ್ಷ ಪಾರಪ್ಪ ಗುತ್ತೇದಾರ, ಸಮಾಜದ ಗೌರವಾಧ್ಯಕ್ಷ ವೆಂಕಟೇಶ ಪೋತಲಕರ, ತಾ.ಪಂ. ಮಾಜಿ ಸದಸ್ಯ ಮಾನಪ್ಪ ಸೂಗೂರ, ಯಲ್ಲಪ್ಪ ಹುಜರಾತಿ, ಯಂಕಣ್ಣ ಕಟ್ಟಿಮನಿ, ವಕೀಲರಾದ ವಿಶ್ವಮಿತ್ರ ಕಟ್ಟಿಮನಿ, ನಂದಣ್ಣ ಬಾಕಲಿ, ಸಂಗಣ್ಣ ಬಾಕಲಿ, ಶಿವರಾಮಯ್ಯ, ವೆಂಕಟರೆಡ್ಡಿ, ಜಟ್ಟೆಪ್ಪ ವಾರಿ, ಪರಶುರಾಮ್, ಜಕ್ಕಪ್ಪ ಕಟ್ಟಿಮನಿ, ಸಾಯಿಬಣ್ಣ ಪೂಜಾರಿ, ವೆಂಕಟೇಶ ಕುಲಕರ್ಣಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು